ಸಾರಾಂಶ
ಇದು ಜ್ಞಾನದ ಯುಗವಾಗಿರುವುದರಿಂದ ಎಲ್ಲರೂ ಶಿಕ್ಷಣದ ಕಡೆ ಮುಖ ಮಾಡಬೇಕು. ನಾವು ನಮ್ಮ ಜೀವನದಲ್ಲಿ ಮುಖ್ಯವಾಗಿ ಎರಡು ರೀತಿಯ ಅಧಿಕಾರವನ್ನು ಪಡೆದುಕೊಳ್ಳಲು ಎಲ್ಲರೂ ಪ್ರಯತ್ನ ಮಾಡುತ್ತಾರೆ. ಒಂದು ರಾಜಕೀಯ ಅಧಿಕಾರ ಮತ್ತೊಂದು ನೌಕರಶಾಹಿ ಅಧಿಕಾರ. ಅಧಿಕಾರ ಪಡೆಯುವ ಶಕ್ತಿ ನಮ್ಮಲ್ಲಿಯೇ ಇದೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಶ್ರೀ ಭಗೀರಥರು ತಮ್ಮ ಪೂರ್ವಜರಿಗೆ ಸದ್ಗತಿ ದೊರಕಿಸಿಕೊಡುವುದಕ್ಕಾಗಿ ದೇವಗಂಗೆಯನ್ನೇ ಭೂಲೋಕಕ್ಕೆ ತರಲು ಮಾಡಿದ ನಿರಂತರ ಪ್ರಯತ್ನ ಎಲ್ಲರಿಗೂ ಮಾದರಿ. ಈ ನಿರಂತರ ಪ್ರಯತ್ನದ ಮಾರ್ಗವನ್ನು ನಾವು ಸಾಮಾಜ ಸೇವೆಗೆ ಅಳವಡಿಸಿಕೊಂಡರೆ ಎಲ್ಲರಿಗೂ ಒಳಿತಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್ ತಿಳಿಸಿದರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಬಿ.ಅರ್.ಅಂಬೇಡ್ಕರ್ ಭವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀ ಭಗೀರಥ ಜಯಂತಿಯಲ್ಲಿ ಶ್ರೀ ಭಗೀರಥರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಮಾತನಾಡಿದರು.ಎರಡು ರೀತಿಯ ಅಧಿಕಾರ
ಸಂಪನ್ಮೂಲ ವ್ಯಕ್ತಿಯಾಗಿ ಭೂಮಾಪನ ಇಲಾಖೆಯ ನಿವೃತ ಜಂಟಿ ನಿರ್ದೇಶಕ ವಿ.ಅಜ್ಜಪ್ಪ ಮಾತನಾಡಿ, ಇದು ಜ್ಞಾನದ ಯುಗವಾಗಿರುವುದರಿಂದ ಎಲ್ಲರೂ ಶಿಕ್ಷಣದ ಕಡೆ ಮುಖ ಮಾಡಬೇಕು. ನಾವು ನಮ್ಮ ಜೀವನದಲ್ಲಿ ಮುಖ್ಯವಾಗಿ ಎರಡು ರೀತಿಯ ಅಧಿಕಾರವನ್ನು ಪಡೆದುಕೊಳ್ಳಲು ಎಲ್ಲರೂ ಪ್ರಯತ್ನ ಮಾಡುತ್ತಾರೆ. ಒಂದು ರಾಜಕೀಯ ಅಧಿಕಾರ ಮತ್ತೊಂದು ನೌಕರಶಾಹಿ ಅಧಿಕಾರ. ಅಧಿಕಾರ ಪಡೆಯುವ ಶಕ್ತಿ ನಮ್ಮಲ್ಲಿಯೇ ಇದೆ. ಉತ್ತಮ ಶಿಕ್ಷಣವನ್ನು ಪಡೆದು, ಉತ್ತಮವಾದ ಹುದ್ದೆಗಳನ್ನು ಅಲಂಕರಿಸಲು ನಿರಂತರ ಪ್ರಯತ್ನ ಮಾಡಿದರೆ ಅದು ನಿಜವಾದ ಭಗೀರಥನ ಪ್ರಯತ್ನ ಆಗುತ್ತದೆ. ಈ ನಿಟ್ಟಿನಲ್ಲಿ ಸಮುದಾಯದ ವಿದ್ಯಾರ್ಥಿಗಳು ಪ್ರಯತ್ನ ಮಾಡಬೇಕು ಎಂದು ಕಿವಿ ಮಾತು ಹೇಳಿದರು.ಸಮುದಾಯ ಭವನಕ್ಕೆ ಭೂಮಿಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಗೀರಥ ಸಮುದಾಯ ಭವನ ಕಟ್ಟಲು ಒಂದು ಎಕರೆ ಜಾಗ ಮಂಜೂರು ಮಾಡಲು ಸಮುದಾಯದವರು ಜಿಲ್ಲಾಡಳಿತಕ್ಕೆ ಈ ವೇಳೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸದ ಮಕ್ಕಳಿಗೆ ಹಾಗೂ ಸಮುದಾಯದ ಹಿರಿಯ ಮುಖಂಡರಿಗೆ ಸನ್ಮಾನಿಸಿ ಪ್ರತಿಭ ಪುರಸ್ಕಾರ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಯಲುವಹಳ್ಳಿ.ಎನ್.ರಮೇಶ್, ತಹಸಿಲ್ದಾರ್ ಅನಿಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ ರವಿಕುಮಾರ್, ಸಮುದಾಯದ ಮುಖಂಡರಾದ ಬಿ.ವೆಂಕಟೇಶ್ , ಎನ್ ಜಯರಾಮ್, ವೆಂಕಟಕೃಷ್ಣ, ಮುನಿರಾಜು, ಹಾಗೂ ಸಾರ್ವಜನಿಕರು ಇದ್ದರು.