‘ಎನ್‌ಎಸ್‌ಎಸ್‌ನಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ’

| Published : May 08 2025, 12:34 AM IST

ಸಾರಾಂಶ

ರಾಷ್ಟ್ರೀಯ ಸೇವಾ ಯೋಜನೆ ಇಂದಿನ ಸಮಾಜಕ್ಕೆ ಅತೀ ಅಗತ್ಯವಾಗಿದೆ. ಎನ್.ಎಸ್.ಎಸ್. ಸ್ವಯಂಸೇವಕರು ಸದೃಢ ಸಮಾಜ ನಿರ್ಮಿಸುವಲ್ಲಿ ಗಣನೀಯ ಕೊಡುಗೆ ನೀಡಬಲ್ಲರು ಎಂದು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುರಾಷ್ಟ್ರೀಯ ಸೇವಾ ಯೋಜನೆ ಇಂದಿನ ಸಮಾಜಕ್ಕೆ ಅತೀ ಅಗತ್ಯವಾಗಿದೆ. ಎನ್.ಎಸ್.ಎಸ್. ಸ್ವಯಂಸೇವಕರು ಸದೃಢ ಸಮಾಜ ನಿರ್ಮಿಸುವಲ್ಲಿ ಗಣನೀಯ ಕೊಡುಗೆ ನೀಡಬಲ್ಲರು ಎಂದು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ತಿಳಿಸಿದರು.ವಿವಿ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು ಕೋರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ರಹ್ಮಸಂದ್ರದಲ್ಲಿ ಹಮ್ಮಿಕೊಂಡಿದ್ದ ಒಂದು ವಾರದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.‘ವಿಕಸಿತ ಭಾರತ- ಡಿಜಿಟಲ್ ಸಾಕ್ಷರತೆ ಮತ್ತು ಯುವಜನತೆ’ ಎಂಬುದು ಪ್ರಸ್ತುತ ಶಿಬಿರದ ಪ್ರಧಾನ ಘೋಷವಾಕ್ಯವಾಗಿದೆ. ಸಮಾಜ ಮುಂದುವರಿಯಬೇಕಾದರೆ ಕೇವಲ ಸಾಕ್ಷರತೆ ಸಾಕಾಗುವುದಿಲ್ಲ. ಇಂದಿನ ಯುವಕರು ಡಿಜಿಟಲ್ ಸಾಕ್ಷರತೆಯನ್ನು ಹೊಂದಬೇಕು ಎಂದರು.ಬೆಳ್ಳಾವಿಯ ಶ್ರೀ ಕಾರದೇಶ್ವರ ಮಠದ ಕಾರದ ವೀರಬಸವ ಮಹಾಸ್ವಾಮಿಗಳು, ಚಿಕ್ಕತೊಟ್ಲುಕೆರೆ ಕ್ಷೇತ್ರದ ಕಿರಿಯ ಸ್ವಾಮಿಗಳಾದ ಅಟವೀ ಮಲ್ಲಿಕಾರ್ಜುನ ದೇವರ ಮಹಾಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸಿದ್ದರು.ಎನ್.ಎಸ್.ಎಸ್. ಅಧಿಕಾರಿಗಳಾದ ಡಾ. ಸುಮಾದೇವಿ ಎಸ್., ಡಾ. ಗಿರಿಜಾ ಕೆ. ಎಸ್., ಕೋರ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಅರ್ಚನಾ ಮಂಜುನಾಥ್, ನೆಹರು ಯುವಕೇಂದ್ರದ ಡಿಐಸಿ ಸದಸ್ಯರಾದ ಅರುಣ್ ಕೆ.ಎಸ್., ಬ್ರಹ್ಮಸಂದ್ರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಎಸ್‌ಡಿಎಂಸಿ ಸದಸ್ಯರಾದ ರಾಜಣ್ಣ, ಸಹಶಿಬಿರಾಧಿಕಾರಿಗಳಾದ ಡೈಸನ್ ಪಿ. ಓ., ಧರಣೇಂದ್ರ ಬಿ., ರಾಮು ಎಚ್., ಸಿದ್ದೇಶ್ ಸಿ., ಡಾ. ಮಹೇಶ್ ಕುಮಾರ್ ಡಿ. ಹೆಚ್., ಯಮುನಶ್ರೀ, ಪುರುಷೋತ್ತಮ್, ಹೇಮಂತ್, ಪ್ರಹ್ಲಾದ್, ಡಾ. ತೋತ್ಯ ನಾಯಕ್ ಹಾಜರಿದ್ದರು.