ಬೆಂಗಳೂರಿನ ಎಪಿಯುನಲ್ಲಿ ಥಿಯೇಟರ್ ಯಕ್ಷದಿಂದ ‘ಚಕ್ರವ್ಯೂಹ’ ಪ್ರದರ್ಶನ

| Published : Feb 23 2024, 01:46 AM IST / Updated: Feb 23 2024, 01:47 AM IST

ಬೆಂಗಳೂರಿನ ಎಪಿಯುನಲ್ಲಿ ಥಿಯೇಟರ್ ಯಕ್ಷದಿಂದ ‘ಚಕ್ರವ್ಯೂಹ’ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್‌ ಪ್ರೊ. ಶರದ್‌ ಸೂರೆ, ಬೋಧಕ ವೃಂದ, ವಿದ್ಯಾರ್ಥಿಗಳು ಯಕ್ಷಗಾನವನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ರಾಜನೀತಿ ಮತ್ತು ಆಡಳಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎ.ನಾರಾಯಣ ಅವರು ಯಕ್ಷಗಾನ ರಸಗ್ರಹಣದ ಕುರಿತು ಪ್ರಸ್ತಾವನೆಯ ನುಡಿಗಳನ್ನಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯ (ಎಪಿಯು) ಇದರ ನೂತನ ಮುಕ್ತ ವೃತ್ತ ಸಭಾಂಗಣದ ಪ್ರಥಮ ಕಾರ್ಯಕ್ರಮವಾಗಿ ಉಡುಪಿಯ ಥಿಯೇಟರ್‌ ಯಕ್ಷ ತಂಡದಿಂದ ‘ಚಕ್ರವ್ಯೂಹ’ ಯಕ್ಷಗಾನ ಪ್ರದರ್ಶನಗೊಂಡಿತು.ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್‌ ಪ್ರೊ. ಶರದ್‌ ಸೂರೆ, ಬೋಧಕ ವೃಂದ, ವಿದ್ಯಾರ್ಥಿಗಳು ಯಕ್ಷಗಾನವನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ರಾಜನೀತಿ ಮತ್ತು ಆಡಳಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎ.ನಾರಾಯಣ ಅವರು ಯಕ್ಷಗಾನ ರಸಗ್ರಹಣದ ಕುರಿತು ಪ್ರಸ್ತಾವನೆಯ ನುಡಿಗಳನ್ನಾಡಿದರು.ಪರಂಪರೆ ಮತ್ತು ನಾವೀನ್ಯಗಳ ಸಮನ್ವಯದ ಆಶಯದಲ್ಲಿ ಪ್ರಯೋಗಾತ್ಮಕವಾಗಿ ಸಿದ್ಧಗೊಂಡಿರುವ, ದೇವಿದಾಸ ಕವಿ ವಿರಚಿತ ‘ಚಕ್ರವ್ಯೂಹ’ ಪ್ರಸಂಗವನ್ನು ಪೃಥ್ವಿರಾಜ ಕವತ್ತಾರು ಅವರು ನಿರ್ದೇಶಿಸಿದ್ದರು. ಭಾಗವತರಾಗಿ ವಿಶ್ವಾಸ್‌ ಕರ್ಬೆಟ್‌, ಹಿಮ್ಮೇಳದಲ್ಲಿ ಸ್ಕಂದ ಕೊನ್ನಾರ್‌, ವರುಣ್‌ ಹೆಬ್ಬಾರ್‌ ಮತ್ತು ವಯಲಿನ್‌ ವಾದಕರಾಗಿ ಪ್ರಣೀತ್‌ ಬಳ್ಳಕ್ಕುರಾಯ ಸಹಕರಿಸಿದರು.ಮುಮ್ಮೇಳದಲ್ಲಿ ಶಂಭಯ್ಯ ಕಂಜರ್ಪಣೆ, ಶಶಿಕಿರಣ ಕಾವು, ಈಶ್ವರಪ್ರಸಾದ್‌ ಪಿ. ವಿ., ಸುನಿಲ್‌ ಭಾಸ್ಕರ್‌ ಪಲ್ಲಮಜಲು, ಸುರೇಶ್‌ ಬಾಯಾರ್‌, ರಂಜಿತ್‌ ಮಲ್ಲ, ಸಂತೋಷ್‌ ಪಂಜಿಕಲ್ಲು, ಪ್ರಸಾದ್‌ ಚೇರ್ಕಾಡಿ, ಪವನ್‌ ಕೆರ್ವಾಶೆ, ನಾಗೇಶ್‌ ಬೈಲೂರು, ಆದರ್ಶ್‌ ಮೂಡಬಿದಿರೆ, ಯತೀಶ್‌ ಕಡಬ, ಶ್ರೀಶ ನಾರಾಯಣ ಹೆಗ್ಡೆ, ಪವನ್‌ರಾಜ್‌ ವೇಣೂರು ಭಾಗವಹಿಸಿದರು. ನಂದಕಿಶೋರ್‌ ಬೆಳಕಿನ ಸಂಯೋಜನೆ ಮಾಡಿದರೆ, ಪ್ರಮೋದ್‌ ತಂತ್ರಿ ಮತ್ತು ಶಿವರಾಜ್‌ ಕಲ್ಮಡ್ಕ ನೇಪಥ್ಯ ಕಲಾವಿದರಾಗಿ ಸಹಕರಿಸಿದರು.

ಈ ಪ್ರದರ್ಶನ ಪೂರ್ವದಲ್ಲಿ ನಡೆದ ಯಕ್ಷಗಾನ ಕಾರ್ಯಾಗಾರ ಮತ್ತು ಸಂವಾದದಲ್ಲಿ ಎಪಿಯುನ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು.