ಮಾಜಿ ಸಿಎಂ ಎಸ್.ಎಂ.ಕೃಷ್ಣರಿಗೆ ‘ಚಂದ್ರವನ ಸಿರಿ’ ಪ್ರಶಸ್ತಿ ಪ್ರದಾನ

| Published : Feb 08 2024, 01:32 AM IST

ಮಾಜಿ ಸಿಎಂ ಎಸ್.ಎಂ.ಕೃಷ್ಣರಿಗೆ ‘ಚಂದ್ರವನ ಸಿರಿ’ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ವೇಳೆ ಎಸ್.ಎಂ.ಕೃಷ್ಣ ಅವರು ಬರಗಾಲದಲ್ಲೂ ಎಂದೂ ವಿಚಲಿತರಾಗದೇ ಶಾಂತ ಚಿತ್ತ ಸಮಾಧಾನದಿಂದ ಎಲ್ಲರಿಗೂ ಉತ್ತರ ಕೊಡುತ್ತಿದ್ದರು. ಅನೇಕ ಸವಾಲುಗಳನ್ನು ಜಾಣ್ಮೆಯಿಂದ ಎದುರಿಸಿದರು. 25ನೇ ವರ್ಷದ ಪಟ್ಟಾಧಿಕಾರದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಇವರು ಶತಾಯುಷಿಗಳಾಗಲೆನ್ನುವುದೇ ನಮ್ಮ ಹಾರೈಕೆ.

ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣಪಟ್ಟಣದ ಹೊರ ವಲಯದ ಚಂದ್ರವನ ಆಶ್ರಮಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಭೇಟಿ ನೀಡಿ ಚಂದ್ರವನ ಸಿರಿ ಪ್ರಶಸ್ತಿ ಗೌರವ ಸ್ವೀಕರಿಸಿದರು.

ಆಶ್ರಮದ ಪೀಠಾಧಿಪತಿ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಜಿಗಳು ಎಂ.ಎಂ.ಕೃಷ್ಣ ಅವರಿಗೆ ಪ್ರಶಸ್ತಿ ನೀಡಿದ ನಂತರ ಮಾತನಾಡಿ, ತಮ್ಮ 25ನೇ ವರ್ಷದ ಪಟ್ಟಾಧಿಕಾರದ ಸಮಾರೋಪ ಸಮಾರಂಭಕ್ಕೆ ಹಿರಿಯರಾದ ಎಸ್.ಎಂ.ಕೃಷ್ಣ ಅವರು ಬರಬೇಕಿತ್ತು. ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮಕ್ಕೆ ಬರಲಾಗದೇ ಇಂದು ಆಶ್ರಮಕ್ಕೆ ಆಗಮಿಸಿದ್ದು ತಮಗೆ ಬಹಳ ಸಂತೋಷವಾಗಿದೆ ಎಂದರು.

ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ವೇಳೆ ಎಸ್.ಎಂ.ಕೃಷ್ಣ ಅವರು ಬರಗಾಲದಲ್ಲೂ ಎಂದೂ ವಿಚಲಿತರಾಗದೇ ಶಾಂತ ಚಿತ್ತ ಸಮಾಧಾನದಿಂದ ಎಲ್ಲರಿಗೂ ಉತ್ತರ ಕೊಡುತ್ತಿದ್ದರು. ಅನೇಕ ಸವಾಲುಗಳನ್ನು ಜಾಣ್ಮೆಯಿಂದ ಎದುರಿಸಿದರು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಇವರು ಶತಾಯುಷಿಗಳಾಗಲೆನ್ನುವುದೇ ನಮ್ಮ ಹಾರೈಕೆ ಎಂದರು.

ನಂತರ ಎಸ್.ಎಂ.ಕೃಷ್ಣ ಮಾತನಾಡಿ, ಕಾರಣಾಂತರಗಳಿಂದ ಸಮಾರೋಪ ಸಮಾರಂಭಕ್ಕೆ ಅಗಮಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಎಲ್ಲಾ ಪೂಜ್ಯರುಗಳಲ್ಲಿ ಕ್ಷಮೆ ಕೋರುತ್ತೇನೆ. ಹಿರಿಯ ಶ್ರೀಗಳಿಂದಾಗಿ ಆಶ್ರಮ ಸ್ಫೂರ್ತಿದಾಯಕವಾಗಿ ಬೆಳವಣಿಗೆಯಾಗಿದೆ ಎಂದರು.

ವಿಶ್ವವ್ಯಾಪಿ ಯೋಗಾಸನವನ್ನು ಮಾಡುತ್ತಿದ್ದು, ಇಂದು ಆರಾಮದಾಯಕ ಜೀವನವನ್ನು ನೀಡಿದ್ದರಿಂದ ಇಂದಿನ ಯುವ ಪೀಳಿಗೆಯು ಯೋಗದ ಬಗ್ಗೆ ತಿಳಿದುಕೊಂಡು ಅವರೆಲ್ಲರೂ ಯೋಗವನ್ನು ಮಾಡಬೇಕು. ಇಂತಹ ಗುರುಕುಲಗಳು ಇದಕ್ಕೆಲ್ಲಾ ದೊಡ್ಡ ಆಯಾಮವನ್ನು ಏರ್ಪಾಡು ಮಾಡಿವೆ. ನಮಗೆ ಈ ಮಠದ ಮೇಲೆ ಅಪಾರ ಗೌರವವಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಎಸ್.ಎಂ.ಕೃಷ್ಣರವರು ಶ್ರೀಮಠದ ಬಗೆಗಿನ ಅಂತರಾಳದ ಮಾತನ್ನು ಹೇಳಿದ್ದಾರೆ. ಮುತ್ಸದ್ಧಿ ರಾಜಕಾರಣಿಗಳಾದ ಇವರು ಚಂದ್ರವನ ಆಶ್ರಮಕ್ಕೆ ಆಗಮಿಸಿದ್ದು ಎಲ್ಲ ಭಕ್ತಾದಿಗಳಿಗೆ ಬಹಳ ಸಂತೋಷವಾಗಿದೆ ಎಂದರು.

ಈ ವೇಳೆ ಬಿಜೆಪಿ ಮುಖಂಡ ಇಂಡವಾಳು ಎಸ್.ಸಚ್ಚಿದಾನಂದ, ಅರವಿಂದ್.ಎಸ್.ಸಿ., ಟಿ.ಪಿ.ಶಿವಕುಮಾರ್, ಎಂಜಿನಿಯರ್ ನಾಗೇಶ್, ನಾಗಣ್ಣ, ಪುರಸಭೆ ಸದಸ್ಯ ಕೃಷ್ಣಪ್ಪ, ಪೈಲ್ವಾನ್ ಮುಕುಂದ ಸೇರಿದಂತೆ ಇತರರು ಇದ್ದರು.