ಸಾರಾಂಶ
ಹಾಡುಗಾರಿಕೆ, ನೃತ್ಯ, ಭಾರತ ದೇಶದ ಎಲ್ಲಾ ರಾಜ್ಯಗಳ ಹೆಸರು ಹಾಗೂ ಎಲ್ಲಾ ಸಹಾಯವಾಣಿಗಳ ದೂರವಾಣಿ ಸಂಖ್ಯೆಗಳು ಹಾಗೂ ಮುಂತಾದವುಗಳನ್ನು ನಿರರ್ಗಳವಾಗಿ ಹೇಳುತ್ತಾನೆ.
ಚನ್ನಪಟ್ಟಣ: ತಾಲೂಕಿನ ಜಗದಾಪುರ ಬ್ಯಾಡರಹಳ್ಳಿ ಗ್ರಾಮದ ತೇಜಸ್ವಿನಿ ಮತ್ತು ಶ್ರೀ ವೈದ್ಯೇಗೌಡ ಬಿ.ಕೆ. ದಂಪತಿ ಪುತ್ರ ಕು. ಚುಮನ್ ಗೌಡ ಬಿ.ವಿ. ( ಬಾಲ ವಿಜ್ಞಾನಿ ) 2024-25ನೇ ಸಾಲಿನ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್‌ಗೆ ಭಾಜನನಾಗಿದ್ದಾನೆ. ನಾಲ್ಕು ವರ್ಷದ ಈ ಪೋರ ಅತ್ಯಂತ ಕ್ರಿಯಾಶೀಲ ಹಾಗೂ ಅಸಾಧಾರಣ ಪ್ರತಿಭೆಯಾಗಿದ್ದು, ಎರಡು ವರ್ಷದವನಿದ್ದಾಗಲೇ ಉತ್ತಮ ಮಾತುಗಾರಿಕೆ ರೂಢಿಸಿಕೊಂಡು, ನೋಡಿದ್ದನ್ನು- ಕೇಳಿದ್ದನ್ನು ಬಹುಬೇಗ ಅರ್ಥೈಸಿಕೊಂಡು ಕಲಿತು ಪ್ರದರ್ಶನ ನೀಡುತ್ತಾನೆ. ಹಾಡುಗಾರಿಕೆ, ನೃತ್ಯ, ಭಾರತ ದೇಶದ ಎಲ್ಲಾ ರಾಜ್ಯಗಳ ಹೆಸರು ಹಾಗೂ ಎಲ್ಲಾ ಸಹಾಯವಾಣಿಗಳ ದೂರವಾಣಿ ಸಂಖ್ಯೆಗಳು ಹಾಗೂ ಮುಂತಾದವುಗಳನ್ನು ನಿರರ್ಗಳವಾಗಿ ಹೇಳುತ್ತಾನೆ. ಇಂತಹ ಅಪರೂಪದ ಪ್ರತಿಭೆಗೆ, ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ನೀಡಿ ಗೌರವಿಸಿದೆ.