ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ
ಭಗವದ್ಗೀತೆಯ ಪ್ರಮುಖ ಅಧ್ಯಾಯಗಳಾಗಿರುವ ಕರ್ಮ ಸಂನ್ಯಾಸ ಯೋಗ ಹಾಗೂ ಧ್ಯಾನ ಯೋಗ ಪ್ರವಚನವನ್ನು ಇಲ್ಲಿಯ ವೆಂಕಟೇಶ ದೇವಸ್ಥಾನದಲ್ಲಿ ಏರ್ಪಡಿಸಲಾಗಿತ್ತು.ಇಳಕಲ್ ಬ್ರಾಹ್ಮಣ ಸಮಾಜ, ಧರ್ಮಜ್ಞಾನ ವಾಹಿನಿ ಹಾಗೂ ವಿಶ್ವಮಾಧ್ವ ಪರಿಷತ್ತು ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವು ನಡೆಯಿತು. ಶಿವಮೊಗ್ಗದ ಪಂಡಿತ ರಘೂತ್ತಮಾಚಾರ್ಯ ಸಂಡೂರ ಅವರು ವಿಷಯವನ್ನು ಮಂಡಿಸಿದರು. ಗೃಹಸ್ಥ ಕೂಡಾ ಉತ್ತಮ ಜೀವನ ವಿಧಾನಕ್ಕಾಗಿ ಅನುಸರಿಸಬೇಕಾಗಿರುವ ವೈರಾಗ್ಯ ಭಾವನೆ, ಧ್ಯಾನ ದಾನ, ಸತ್ಕರ್ಮಗಳಿಂದ ಪರಮಾತ್ಮನಿಗೆ ಹತ್ತಿರವಾಗುವ ಸುಲಭ ದಾರಿಗಳನ್ನು ಹಲವಾರು ಉದಾಹರಣೆಗಳೊಂದಿಗೆ ವಿವರಿಸಿದ ಆಚಾರ್ಯರು ಸರಳವಾಗಿ ಬದುಕಬೇಕಾದ ಅಗತ್ಯವನ್ನು ತಿಳಿಸಿಕೊಟ್ಟರು. ಮೋಹ, ಲೋಭಗಳನ್ನು ಮನಸ್ಸು ಆವರಿಸದಂತೆ ಬದುಕುವ ಉಪಾಯಗಳನ್ನು ತಿಳಿಸಿ ಹೇಳಿದರು.
ಪಾಂಡುರಂಗ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಪ್ರವಚನ ಮಾಲಿಕೆಯನ್ನು ಡಾ. ಸುಶೀಲ ಕಾಖಂಡಕಿ ಕುಟುಂಬವು ಪ್ರಾಯೋಜಿಸಿತ್ತು. ರಾಮಾಚಾರ್ಯ ಹುನಕುಂಟಿ, ಶ್ರೀಹರಿ ಪೂಜಾರ, ಸತೀಶ ಹುನಕುಂಟಿ ಅವರು ವೇದಪಾಠ ಮಾಡಿದರು. ನಿವೃತ್ತ ಬ್ಯಾಂಕ್ ಮ್ಯಾನೇಜರ್ ಎಸ್.ಬಿ. ಪಾಟೀಲ ಹಾಗೂ ಲಕ್ಷ್ಮೀ ಮಹಿಳಾ ಮಂಡಳಿಯ ಅಧ್ಯಕ್ಷೆ ಸಾವಿತ್ರಿ ಕುಲಕರ್ಣಿ ಹಾಗೂ ಹಿರಿಯ ಕಮಲಾಕರ ದೇಶಪಾಂಡೆ ಅವರು ಪ್ರವಚನವು ತಮ್ಮ ಮೇಲೆ ಬೀರಿದ ಉತ್ತಮ ಪ್ರಭಾವದ ಬಗ್ಗೆ ಮಾತಾಡಿದರು. ಬಂಡು ಕಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.ನಾರಾಯಣಾಚಾರ್ಯ ಪೂಜಾರ, ಕಾಶೀನಾಥ ದೇಶಪಾಂಡೆ, ವಿಜಯ ಕಾರ್ಕಳ, ಗಿರಿಧರ ದೇಸಾಯಿ ಮುಂತಾದವರು ಇಳಕಲ್ ಬ್ರಾಹ್ಮಣ ಸಮಾಜದ ಪರವಾಗಿ ಪಂಡಿತ ರಘೂತ್ತಮಾಚಾರ್ಯರನ್ನು ಸನ್ಮಾನಿಸಿದರು. ಪ್ರೊ.ಎಸ್.ಕೆ.ಕುಲಕರ್ಣಿ, ಪ್ರೊ.ಆರ್.ಕೆ.ಕುಲಕರ್ಣಿ, ಡಾ.ವಿದ್ಯಾಶಂಕರ, ಭಾಸ್ಕರ ಪಾಟೀಲ, ಸುರೇಶ ಪೂಜಾರ, ಗುರುರಾಜ ಪೂಜಾರ, ರಂಗಣ್ಣ ಇನಾಂದಾರ, ಗುರುರಾಜ ಕುಲಕರ್ಣಿ, ಸಮೀರ ಜೋಶಿ, ಗಿರೀಶ ಜೋಶಿ, ಮಹೇಶ ಕುಲಕರ್ಣಿ, ಪ್ರೊ.ಎಂ.ಎಸ್. ಜೋಶಿ, ವೆಂಕಟೇಶದಾಸ ಮುಂತಾದವರು ಇದ್ದರು.