‘ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹವಾ’

| Published : Dec 26 2023, 01:30 AM IST

ಸಾರಾಂಶ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಾದ್ಯಂತ ಇನ್ನು ಕಾಂಗ್ರೆಸ್‌ ಹವಾ. ಸ್ಥಳೀಯ ಸಂಸ್ಥೆಗಳಲೆಲ್ಲಾ ನಾವೇ ಗೆಲ್ಲೋದು. ಶಾಸಕ ಪ್ರದೀಪ್‌ ಈಶ್ವರ್‌ ಭವಿಷ್ಯ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಾದ್ಯಂತ ಇನ್ನು ಕಾಂಗ್ರೆಸ್‌ ಹವಾ. ಸ್ಥಳೀಯ ಸಂಸ್ಥೆಗಳಲೆಲ್ಲಾ ನಾವೇ ಗೆಲ್ಲೋದು. ರಾಜ್ಯದಲ್ಲಿಯೂ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಇರೋವರೆಗೂ ಕಾಂಗ್ರೆಸ್‌ ಗೆಲುವಿನ ನಾಗಾಲೋಟ ಮುಂದುವರಿಯಲಿದೆ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದರು.

ನಗರದ ಎಚ್.ಎಸ್.ಗಾರ್ಡನ್‌ನ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜಯಬೇರಿ ಬಾರಿಸಿದ ತಮ್ಮ ಬೆಂಬಲಿಗರಿಗೆ ಅಭಿನಂದಿಸಿದ ಅವರು, ಇದು ಕಾಂಗ್ರೆಸ್‌ ಸ್ಥಳೀಯ ಸಂಸ್ಥೆಗಳಲ್ಲಿ ಗೆಲುವು ಸಾಧಿಸುವ ಮೊದಲ ಬಾವುಟ ಹಾರಿಸಿದೆ. ಇದು ಟಗರು ತಾಕತ್ತು ಎಂದರು.

ಕ್ರಿಸ್ ಮಸ್ ಪ್ರಯುಕ್ತ ನಗರದಲ್ಲಿ ಕ್ರೈಸ್ತಬಾಂಧವರಿಗೆ ಶುಭಾಶಯ ಕೋರುತ್ತಿದ್ದ ಶಾಸಕ ಪ್ರದೀಪ್ ಈಶ್ವರ್ ಕಾಂಗ್ರೆಸ್ ಬೆಂಬಲಿತರು ಗೆಲುವು ಸಾದಿಸಿದ ಸುದ್ದಿ ತಿಳಿಯುತಿದ್ದಂತೆ ಹೆಚ್.ಎಸ್.ಗಾರ್ಡನ್‌ ನ ಹಾಲು ಉತ್ಪಾದಕರ ಸಂಘದ ಸ್ಥಳಕ್ಕೆ ಧಾವಿಸಿ ಎಲ್ಲ ನಿರ್ದೇಶಕರಿಗೂ ಸಿಹಿ ತಿನ್ನಿಸಿ ಶುಭಕೋರಿದರು.

ಈ ವೇಳೆ ಕಾಂಗ್ರೇಸ್ ಮುಖಂಡರುಗಳಾದ ಡೇರಿ ಗೋಪಿ, ಡ್ಯಾನ್ಸ್ ಶ್ರೀನಿವಾಸ್‌, ಪಿ.ಎಂ. ರಘು, ಕನ್ನಡ ನರೇಂದ್ರಬಾಬು, ಕೋಲಾಟ್ಲು ರಾಮಚಂದ್ರ, ಕುಬೇರ್ ಅಚ್ಚು, ವಿನಯ್ ಬಂಗಾರಿ, ಎಂ.ವೆಂಕಟೇಶ್, ನಾಗಭೂಷನ್,ಅಲ್ಲು ಅನಿಲ್ ಮತ್ತಿತರರು ಇದ್ದರು.