ಶ್ರೀ ಶಂಕರಾಚಾರ್ಯರ ಭವ್ಯ ಮೂರ್ತಿ ಲೋಕಾರ್ಪಣೆ

| Published : Nov 11 2023, 01:19 AM IST

ಸಾರಾಂಶ

ಶ್ರೀ ಶಂಕರಾಚಾರ್ಯರ ಭವ್ಯ ಮೂರ್ತಿ ಲೋಕಾರ್ಪಣೆ

ಶೃಂಗೇರಿ: ಪಟ್ಟಣದ ಮಾರುತಿ ಬೆಟ್ಟದಲ್ಲಿ ನೂತನವಾಗಿ ಸ್ಪಾಪಿತಗೊಂಡಿದ್ದ ಶ್ರೀ ಶಂಕರಾಚಾರ್ಯರ ಭವ್ಯ ಮೂರ್ತಿಯನ್ನು ಶ್ರೀ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥರು ಹಾಗೂ ವಿಧುಶೇಖರ ಭಾರತೀ ತೀರ್ಥರು ಶುಕ್ರವಾರ ಲೋಕಾರ್ಪಣೆ ಮಾಡಿದರು. ಬೆಳಿಗ್ಗೆ ಜಗದ್ಗುರು ಶ್ರೀ ಭಾರತೀ ತೀರ್ಥರು ಶ್ರೀ ಶಂಕರಾಚಾರ್ಯರ ಉತ್ಸವ ಮೂರ್ತಿಗೆ ಜ್ಯೋತಿ ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಜಲಾಭಿಷೇಕ, ಅಕ್ಷತಾರ್ಚನೆ, ಪುಷ್ಪಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕ್ರಿಯಾ ವಿಧಿವಿಧಾನಗಳು ನೆರವೇರಿತು. ಜಗದ್ಗುರು ಶ್ರೀ ಶಂಕರಾಚಾರ್ಯರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಕಾರ್ಯಕ್ರಮದ ಅಂಗವಾಗಿ ಶ್ರೀ ಮಠದ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ನಡೆಯುತ್ತಿದ್ದ ಅತಿ ರುದ್ರಮಹಾಯಾಗ ಹಾಗೂ ಶತಚಂಡೀ ಯಾಗದ ಪೂರ್ಣಾಹುತಿ ನೆರವೇರಿತು. ಜಗದ್ಗುರುಗಳು ಶ್ರೀ ಶಂಕರಾಚಾರ್ಯರ ಶಿಷ್ಯರಾದ ಶ್ರೀ ಸುರೇಶ್ವರಚಾರ್ಯ, ಪದ್ಮಪಾದಾಚಾರ್ಯ, ಹಸ್ತ ಮಲ್ಲಾ ಚಾರ್ಯ, ತೋಟಾಚಾರ್ಯರಿಗೆ ಪೂಜೆ ಸಲ್ಲಿಸಿದರು. ಶ್ರೀ ವಿದ್ಯಾರಣ್ಯರಿಗೂ ಪೂಜೆ ನೆರವೇರಿಸಿದರು.10 ಶ್ರೀ ಚಿತ್ರ 1-

ಶೃಂಗೇರಿ ಮಾರುತಿ ಬೆಟ್ಟದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಶಂಕರಾಚಾರ್ಯರ ಭವ್ಯಮೂರ್ತಿಯನ್ನು ಶಾರದಾ ಪೀಠದ ಜಗದ್ಗುರುಗಳು ಲೋಕಾರ್ಪಣೆ ಮಾಡಿದರು.