ಸಾರಾಂಶ
ಕಣತೂರು ಗ್ರಾಮದ ಶ್ರೀ ದೇವಿರಮ್ಮ ಮತ್ತು ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಸಿಡಿ ಉತ್ಸವ ನಡೆಯಿತು. ಜಾತ್ರಾ ಪ್ರಾರಂಭೋತ್ಸವದ 15 ದಿನಕ್ಕೂ ಮೊದಲು ಕಣತೂರು ದೇವಸ್ಥಾನದಿಂದ ದೇವಿಯ ಪಾದವಿರುವ ಬೇಲೂರು ತಾಲೂಕಿನ ಮದಘಟ್ಟ ಗ್ರಾಮದಲ್ಲಿರುವ ದೇವರ ಪಾದಕ್ಕೆ ಪೂಜೆ ಸಲ್ಲಿಸಿ ಜಾತ್ರೆಗೆ ಚಾಲನೆ ನೀಡಲಾಗುವುದು. ಜಾತ್ರೆ ಮುಗಿದ ನಂತರ ಮಂಗಳವಾರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಚಾಮನ ಕುಣಿತ ನಡೆಸಿ ಬುಧವಾರ ಬೆಳಗ್ಗೆ ಹೊಲ್ಲಹಳ್ಳಿ ಗ್ರಾಮದಿಂದ ಬರುವ ಮೂರು ದೇವರುಗಳನ್ನು ಬೀಳ್ಕೊಡುವ ಮೂಲಕ ಜಾತ್ರೆ ಮುಕ್ತಾಯಗೊಳ್ಳಲಿದೆ.
ಕನ್ನಡಪ್ರಭ ವಾರ್ತೆ ಆಲೂರು
ತಾಲೂಕಿನ ಕಣತೂರು ಗ್ರಾಮದ ಶ್ರೀ ದೇವಿರಮ್ಮ ಮತ್ತು ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಸಿಡಿ ಉತ್ಸವ ನಡೆಯಿತು.ಐತಿಹಾಸಿಕ ಹಿನ್ನೆಲೆ ಇರುವ ದೇವಾಲಯ ತಾಲೂಕಿನ ಹಾಗೂ ಸುತ್ತಲಿನ 101 ದೇವತೆಗಳಿಗೆ ಅಕ್ಕ ಎನಿಸಿಕೊಂಡಿದ್ದು, ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಪೂಜಾ ಕೈಂಕರ್ಯ ನೆರವೇರುತ್ತದೆ.
ಫೆ. 7ರ ಶುಕ್ರವಾರ ಮಧ್ಯರಾತ್ರಿ ಹೊಲ್ಲಹಳ್ಳಿ ಗ್ರಾಮದಲ್ಲಿ ನೆಲೆಸಿರುವ ದೇವೀರಮ್ಮ ದೇವಿಯ ಸಹೋದರಿಯರಾದ ಕೆಂಪಮ್ಮ, ಮುದಿಯಮ್ಮ, ಬೆಳ್ಳಿ ಮುಖದಮ್ಮ ದೇವರು ಆಗಮಿಸಿ ನಂತರ ಗಂಗಾಸ್ಥಾನದಲ್ಲಿ ಪೂಜೆ ಸಲ್ಲಿಸಿ ವೀರಭದ್ರಸ್ವಾಮಿ ಮತ್ತು ದೊಡ್ಡಯ್ಯರವರ ಚಾಮನ ಕುಣಿತ ನಡೆಯಿತು. ಫೆ 8ರ ಶನಿವಾರ ಬೆಳಗ್ಗೆ ಏಳು ಗಂಟೆಗೆ ಕೆಂಡೋತ್ಸವ, ನಂತರ ನೈವೇದ್ಯ, ಮಹಾ ಮಂಗಳಾರತಿ ಹಾಗೂ ಬಂದ ಭಕ್ತಾದಿಗಳೆಲ್ಲರಿಗೆ ಅನ್ನಸಂತರ್ಪಣೆ ನಡೆಯಿತು.ಜಾತ್ರಾ ಪ್ರಾರಂಭೋತ್ಸವದ 15 ದಿನಕ್ಕೂ ಮೊದಲು ಕಣತೂರು ದೇವಸ್ಥಾನದಿಂದ ದೇವಿಯ ಪಾದವಿರುವ ಬೇಲೂರು ತಾಲೂಕಿನ ಮದಘಟ್ಟ ಗ್ರಾಮದಲ್ಲಿರುವ ದೇವರ ಪಾದಕ್ಕೆ ಪೂಜೆ ಸಲ್ಲಿಸಿ ಜಾತ್ರೆಗೆ ಚಾಲನೆ ನೀಡಲಾಗುವುದು. ಜಾತ್ರೆ ಮುಗಿದ ನಂತರ ಮಂಗಳವಾರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಚಾಮನ ಕುಣಿತ ನಡೆಸಿ ಬುಧವಾರ ಬೆಳಗ್ಗೆ ಹೊಲ್ಲಹಳ್ಳಿ ಗ್ರಾಮದಿಂದ ಬರುವ ಮೂರು ದೇವರುಗಳನ್ನು ಬೀಳ್ಕೊಡುವ ಮೂಲಕ ಜಾತ್ರೆ ಮುಕ್ತಾಯಗೊಳ್ಳಲಿದೆ.
ಕಣತೂರು ಶ್ರೀ ದೇವಿರಮ್ಮ ಜಾತ್ರಾ ಉತ್ಸವಕ್ಕೆ ಪುರಾತನ ಕಾಲದ ಇತಿಹಾಸವಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.