ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಹಿಂದುಗಳ ಆರಾಧ್ಯ ದೈವ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ದಿನದಂದು ಎಲ್ಲರ ಮನೆ, ಮನಗಳಲ್ಲಿ ದೀಪಾವಳಿ ಸಂಭ್ರಮವು ಮೊಳಗಲಿ. ಭಕ್ತಿಯ ಸಂಭ್ರಮದಿಂದ ಶ್ರೀರಾಮನ ಆರಾಧಿಸುವ ಕಾರ್ಯ ನಡೆಯಲಿ ಎಂದು ಎಸ್.ಕೆ.ನಗರ ಬಡಾವಣೆ ಶ್ರೀ ಹನುಮಾನ ದೇವಸ್ಥಾನದ ಅರ್ಚಕ ವೇ.ಗುಂಡಭಟ್ ಜೋಶಿ ಹೇಳಿದರು.
ಪಟ್ಟಣದ ವಾರ್ಡ ನಂ.೩ರಲ್ಲಿ ಸದಸ್ಯ ವಾಸುದೇವ ಹೆಬಸೂರ ನೇತೃತ್ವದಲ್ಲಿ ಮನೆ ಮನೆಗೆ ತಲುಪಿಸುವ ಶ್ರೀರಾಮ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಶ್ರೀರಾಮ ಜನಿಸಿದ ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ಹಿಂದುಗಳ ಶತಮಾನಗಳ ಕನಸು ನನಸಾಗುತ್ತಿದೆ. ಈ ಭಕ್ತಿಯ ಸಂಭ್ರಮ ದೇಶಾಧ್ಯಂತ ಅಂದು ಕಾಣಲಿದ್ದು, ಅದರಂತೆ ತಾಳಿಕೋಟೆ ನಗರದಲ್ಲಿ ಸಂಭ್ರಮಾಚರಣೆ ಕಾಣಬೇಕಿದೆ ಎಂದರು.
ಕಾರ್ಯಕ್ರಮಕ್ಕೂ ಮುಂಚೆ ಪಟ್ಟಣದ ಪೊಲೀಸ್ ಠಾಣಾ ಮೈದಾನದಲ್ಲಿರುವ ಶ್ರೀ ಹನುಮಾನ ಮಹಾ ಮೂರ್ತಿಗೆ ಮಂತ್ರಾಕ್ಷತೆಯೊಂದಿಗೆ ಪೂಜೆ ಸಲ್ಲಿಸಿ, ನಂತರ ಗೋವು ಪೂಜೆಯೊಂದಿಗೆ ಬಡಾವಣೆಯ ಪ್ರತಿ ಮನೆಮನೆಗೆ ತೆರಳಿ ಮಂತ್ರಾಕ್ಷತೆಗೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಪುರಸಭಾ ಸದಸ್ಯ ವಾಸುದೇವ ಹೆಬಸೂರ, ಆರ್‌ಎಸ್‌ಎಸ್ ಹಿರಿಯ ಸ್ವಯಂ ಸೇವಕ ಮಲ್ಲಿಕಾರ್ಜುನ ಹಿಪ್ಪರಗಿ, ಜಿ.ಟಿ.ಘೋರ್ಪಡೆ, ಶ್ರೀಕಾಂತ ಬಣ್ಣದ, ಕಿರಣ ಬಡಿಗೇರ, ಶಿವಶಂಕರ ಹಿರೇಮಠ, ರಾಘವೇಂದ್ರ ವಿಜಾಪೂರ, ಎಚ್.ಎಸ್.ಢವಳಗಿ, ಎ.ಬಿ.ಬಿರಾದಾರ, ಗುರನಾಥರಡ್ಡಿ, ಬಬಲೇಶ್ವರ, ಶ್ರೀಮತಿ ಸುವರ್ಣಾ ಬಿರಾದಾರ, ಸಾವಿತ್ರಿ ಬಣ್ಣದ, ಸುವರ್ಣಾ ಪತ್ತಾರ, ಸವೀತಾ ಬಣ್ಣದ ಮೊದಲಾದವರು ಇದ್ದರು.