ಶಿವನಂಜುಡೇಶ್ವರ ಪ್ರೌಢಶಾಲೆಗೆ ವಾಟರ್ ಫಿಲ್ಟರ್ ಕೊಡುಗೆ

| Published : Jan 06 2025, 01:02 AM IST

ಶಿವನಂಜುಡೇಶ್ವರ ಪ್ರೌಢಶಾಲೆಗೆ ವಾಟರ್ ಫಿಲ್ಟರ್ ಕೊಡುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವನಂಜುಡೇಶ್ವರ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಬೇಲೂರು ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಕುಡಿಯುವ ಶುದ್ಧ ನೀರಿನ ವಾಟರ್ ಫಿಲ್ಟರ್ ಉದ್ಘಾಟಿಸಿ ಮಾತನಾಡಿದ ಶಂಭೋಗೌಡ, ಬೇಲೂರು ರೋಟರಿ ಕ್ಲಬ್ ಸಂಸ್ಥಾಪಕರಾದ ದಿವಂಗತ ಶ್ರೀ ಗಂಗಯ್ಯ ಹೆಗಡೆ ಅವರು ರೋಟರಿ ಸಂಸ್ಥೆಗೆ ನೀಡಿರುವ ಎಂಡೋಮೆಂಟ್ ಹುಡಿಕೆಯಿಂದ ಬರುವಂತಹ ಹಣದಲ್ಲಿ ಪ್ರತಿವರ್ಷ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಿಗೆ ವಿದ್ಯಾರ್ಥಿಗಳು ಶುದ್ಧ ನೀರನ್ನು ಕುಡಿಯಬೇಕೆಂಬ ಅವರ ಆಸೆಯಂತೆ ಕುಡಿಯುವ ನೀರನ್ನು ಶುದ್ಧೀಕರಿಸುವ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡುತ್ತಿದ್ದೇವೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಸರ್ಕಾರಿ ಶಾಲೆಗಳನ್ನು ಉನ್ನತೀಕರಣಗೊಳಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಶಂಭೋಗೌಡ ಹೇಳಿದರು.

ತಾಲೂಕಿನ ಶಿವನಂಜುಡೇಶ್ವರ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಬೇಲೂರು ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಕುಡಿಯುವ ಶುದ್ಧ ನೀರಿನ ವಾಟರ್ ಫಿಲ್ಟರ್ ಉದ್ಘಾಟಿಸಿ ಮಾತನಾಡಿದ ಅವರು, ಬೇಲೂರು ರೋಟರಿ ಕ್ಲಬ್ ಸಂಸ್ಥಾಪಕರಾದ ದಿವಂಗತ ಶ್ರೀ ಗಂಗಯ್ಯ ಹೆಗಡೆ ಅವರು ರೋಟರಿ ಸಂಸ್ಥೆಗೆ ನೀಡಿರುವ ಎಂಡೋಮೆಂಟ್ ಹುಡಿಕೆಯಿಂದ ಬರುವಂತಹ ಹಣದಲ್ಲಿ ಪ್ರತಿವರ್ಷ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಿಗೆ ವಿದ್ಯಾರ್ಥಿಗಳು ಶುದ್ಧ ನೀರನ್ನು ಕುಡಿಯಬೇಕೆಂಬ ಅವರ ಆಸೆಯಂತೆ ಕುಡಿಯುವ ನೀರನ್ನು ಶುದ್ಧೀಕರಿಸುವ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡುತ್ತಿದ್ದೇವೆ ಎಂದು ಹೇಳಿದರು.

ರೋಟರಿ ಕ್ಲಬ್‌ನ ಝೋನಲ್ ಲೆಫ್ಟಿನೆಂಟ್ ವೈ.ಡಿ. ಲೋಕೇಶ್ ಮಾತನಾಡಿ, ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಕಾರ್ಯಕ್ರಮದಂದು ರೋಟರಿ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ಕುಡಿಯುವ ನೀರಿನ ಶುದ್ಧೀಕರಿಸುವ ವಾಟರ್ ಫಿಲ್ಟರ್ ನೀಡುತ್ತಿರುವುದು ಸಂತೋಷವಾಗಿದೆ. ವಿದ್ಯಾರ್ಥಿಗಳು ಶಿಕ್ಷಕರು ಕುಡಿಯುವ ನೀರನ್ನು ಶುದ್ಧೀ ಕರಿಸುವ ವಾಟರ್ ಫಿಲ್ಟರ್‌ನ ಸದುಪಯೋಗಪಡಿಸಿಕೊಳ್ಳಿ ಎಂದು ಮನವಿ ಮಾಡಿ, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ರೋಟರಿ ಇಂಟ್ರಾಕ್ಟ್ ಕ್ಲಬ್ ಸ್ಥಾಪಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಬಿ.ಬಿ.ಶಿವರಾಜು, ಖಜಾಂಚಿ ಎಚ್.ಕೆ.ರಮೇಶ್, ರೋಟರಿ ಸದಸ್ಯರಾದ ಮೊಗಪ್ಪಗೌಡ, ಬಿ.ಎಲ್.ರಾಜೇಗೌಡ, ಚಿದನ್, ಶಾಲೆಯ ಸಮಿತಿ ಸದಸ್ಯರಾದ ಸೋಮಣ್ಣ, ಚಂದ್ರಶೇಖರ್, ಮುಖ್ಯೋಪಾಧ್ಯಾಯ ಬಸವರಾಜ ಮುನವಳಿ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.