ಚಿಕ್ಕಮಗಳೂರುರಸ್ತೆ ಹಾಗೂ ಕಿರು ಉದ್ಯಾನವನ್ನೆ ಪಾರ್ಕಿಂಗ್‌ ಸ್ಥಳವಾಗಿ ಮಾಡಿಕೊಂಡ ಬೈಪಾಸ್‌ ರಸ್ತೆಯ ‘ಡೌನ್‌ ಪೋರ್ಸ್‌’ ಕಾರ್‌ ಗ್ಯಾರೇಜ್‌.ಹೌದು, ಚಿಕ್ಕಮಗಳೂರಿನ ಬೈಪಾಸ್‌ ರಸ್ತೆಯ ‘ಡೌನ್‌ ಪೋರ್ಸ್‌’ ಆಟೋವರ್ಕ್‌ ಎಂಬ ಕಾರು ಗ್ಯಾರೇಜ್‌ ರಿಪೇರಿ ಹಾಗೂ ಸರ್ವೀಸ್‌ ಗೆ ಬರುವ ಗ್ರಾಹಕರ ಕಾರುಗಳನ್ನು ನಿಲ್ಲಿಸಲು ಬೈಪಾಸ್‌ ರಸ್ತೆಯ ಸರ್ವೀಸ್‌ ರಸ್ತೆ ಮತ್ತು ಕಿರು ಉದ್ಯಾನವನನ್ನು ಪಾರ್ಕಿಂಗ್‌ ಆಗಿ ಮಾರ್ಪಾಡು ಮಾಡಿಕೊಂಡಿದೆ.

ಗ್ಯಾರೇಜ್‌ಗೆ ರಿಪೇರಿ, ಸರ್ವೀಸ್‌ ಗೆ ಬರುವ ಗ್ರಾಹಕರ ಕಾರುಗಳ ಪಾರ್ಕಿಂಗ್‌ಗೆ ಬಳಕೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ರಸ್ತೆ ಹಾಗೂ ಕಿರು ಉದ್ಯಾನವನ್ನೆ ಪಾರ್ಕಿಂಗ್‌ ಸ್ಥಳವಾಗಿ ಮಾಡಿಕೊಂಡ ಬೈಪಾಸ್‌ ರಸ್ತೆಯ ‘ಡೌನ್‌ ಪೋರ್ಸ್‌’ ಕಾರ್‌ ಗ್ಯಾರೇಜ್‌.

ಹೌದು, ಚಿಕ್ಕಮಗಳೂರಿನ ಬೈಪಾಸ್‌ ರಸ್ತೆಯ ‘ಡೌನ್‌ ಪೋರ್ಸ್‌’ ಆಟೋವರ್ಕ್‌ ಎಂಬ ಕಾರು ಗ್ಯಾರೇಜ್‌ ರಿಪೇರಿ ಹಾಗೂ ಸರ್ವೀಸ್‌ ಗೆ ಬರುವ ಗ್ರಾಹಕರ ಕಾರುಗಳನ್ನು ನಿಲ್ಲಿಸಲು ಬೈಪಾಸ್‌ ರಸ್ತೆಯ ಸರ್ವೀಸ್‌ ರಸ್ತೆ ಮತ್ತು ಕಿರು ಉದ್ಯಾನವನನ್ನು ಪಾರ್ಕಿಂಗ್‌ ಆಗಿ ಮಾರ್ಪಾಡು ಮಾಡಿಕೊಂಡಿದೆ.

ಈ ಬಗ್ಗೆ ಕ್ರಮ ವಹಿಸಬೇಕಾದ ನಗರ ಸಭೆ ಸೇರಿದಂತೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇದೊಂದು ಸಣ್ಣ ಉದಾಹರಣೆ ಮಾತ್ರ. ನಗರದ ಬಹುತೇಕ ರಸ್ತೆಗಳಲ್ಲಿ ಪಾದಚಾರಿ ಮಾರ್ಗ ಸೇರಿದಂತೆ ಇಡೀ ರಸ್ತೆಗಳನ್ನು ವ್ಯಾಪಾರಿಗಳು ಅಕ್ರಮಿಸಿದ್ದಾರೆ. ಪ್ರಮುಖವಾಗಿ ಎಂ.ಜಿ.ರಸ್ತೆ, ಮಾರ್ಕೆಟ್‌ ರಸ್ತೆ, ಇಂದಿರಾ ಗಾಂಧಿ ರಸ್ತೆ, ಮಲ್ಲಂದೂರು ರಸ್ತೆ, ಬಸವನಹಳ್ಳಿ ಮುಖ್ಯ ರಸ್ತೆ, ರತ್ನಗಿರಿ ರಸ್ತೆ ಹಾಗೂ ಕೆ.ಎಂ.ರಸ್ತೆಗಳಲ್ಲಿ ಪಾದಚಾರಿ ಮಾರ್ಗ ಸಂಪೂರ್ಣ ಒತ್ತುವರಿಯಾಗಿದೆ.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ವಾಹನ ದಟ್ಟಣೆ, ಜನಸಾಂದ್ರತೆ ಇರುವ ನಗರದ ಬೈಪಾಸ್‌ ರಸ್ತೆಯಲ್ಲಿ ಬಹು ತೇಕ ಪಾರ್ಕಿಂಗ್‌ ಜಾಗ ವಿವಿಧ ಕಾರಣಕ್ಕೆ ಅತಿಕ್ರಮಣ ಆಗಿರುವುದನ್ನು ಕಾಣಬಹುದಾಗಿದೆ.

ಅದರಲ್ಲೂ ಕಟ್ಟಡ ನಿರ್ಮಾಣ ಸಾಮಗ್ರಿ ಸಂಗ್ರಹಿಸುವುದಕ್ಕೆ, ಗ್ಯಾರೇಜ್‌ ಹಾಗೂ ವಾಹನ ಶೋ ರೂಂ ಮುಂಭಾಗದಲ್ಲಿ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್‌ ಸ್ಥಳವಾಗಿ ಮಾರ್ಪಾಡು ಮಾಡಿಕೊಳ್ಳಲಾಗಿದೆ.

ಬೈಪಾಸ್‌ ರಸ್ತೆಯ ಈ ಡೌನ್‌ ಪೋರ್ಸ್‌ ಆಟೋವರ್ಕ್‌ ಕಾರು ಗ್ಯಾರೇಜ್‌ ಬರೀ ಪಾದಚಾರಿ ಮಾರ್ಗವಷ್ಟೇ ಅಲ್ಲ, ಬೈಪಾಸ್‌ ರಸ್ತೆಯ ಸರ್ವೀಸ್‌ ರಸ್ತೆ, ಕಿರು ಉದ್ಯಾನವನ ಹಾಗೂ ಪಕ್ಕದದ ಮೈದಾನದಲ್ಲಿ ಅತಿಕ್ರಮಣವಾಗಿ ಕಾರುಗಳನ್ನು ನಿಲ್ಲಿಸುವ ಸ್ಥಳವಾಗಿ ಮಾಡಿಕೊಳ್ಳಲಾಗಿದೆ.

ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗುವ ಜತೆಗೆ ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಲಾದ ಸುಂದರ ವಾಗಿ ಕಿರು ಉದ್ಯಾನವನ ಹಾಳಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

--- ಬಾಕ್ಸ್--

ಬಡವರ ಮೇಲಷ್ಟೇ ಅಧಿಕಾರಿಗಳ ದರ್ಪವೇ?

ರಾಜಧಾನಿ ಬೆಂಗಳೂರಿನಲ್ಲಿ ನಡೆಸುತ್ತಿರುವಂತೆ ಪಾದಚಾರಿ ಒತ್ತುವರಿ ತೆರವಿನ ಮಾದರಿಯಲ್ಲಿ ಕಳೆದ ಜುಲೈ ಮೊದಲ ಮತ್ತು ಎರಡನೇ ವಾರದಲ್ಲಿ ನಗರ ಕೆಲವು ರಸ್ತೆಗಳಲ್ಲಿ ಒತ್ತುವರಿ ತೆರವು ಕೈಗೊಂಡಿದ್ದ ನಗರ ಸಭೆ ಅಧಿಕಾರಿ, ಸಿಬ್ಬಂದಿ, ಕೇವಲ ಹೊಟ್ಟೆಪಾಡಿಗೆ ಹಣ್ಣು, ತರಕಾರಿ, ಪಾನಿಪೂರಿ, ಅಲಂಕಾರಿಕಾ ವಸ್ತುಗಳು ಬೀದಿ ಬದಿಯಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳನ್ನು ತೆರವುಗೊಳಿಸುವ ಕೆಲಸ ಮಾಡಲಾಯಿತು.

ರಾಜಕೀಯ, ಶ್ರೀಮಂತರ ಪ್ರಭಾವ ಇರುವ ಯಾವುದೇ ಅಂಗಡಿ ಮುಗಟ್ಟುಗಳನ್ನು ತೆರವು ಮಾಡುವ ಗೋಜಿಗೆ ಹೋಗ ಲಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಕೋಟ್‌ಡೌನ್‌ ಪೋರ್ಸ್‌ ಕಾರು ಸರ್ವೀಸ್‌ ಸೆಂಟರ್‌ನ ಕಾರುಗಳನ್ನು ಕಿರು ಉದ್ಯಾನವನ ಹಾಗೂ ಸರ್ವೀಸ್‌ ರಸ್ತೆಯಲ್ಲಿ ನಿಲ್ಲಿಸದಂತೆ ಸೂಚಿಸಲಾಗುವುದು. ಇನ್ನೂ ಸಾರ್ವಜನಿಕರಿಗೆ ತೊಂದರೆ ಉಂಟಾಗುವಂತೆ ಪಾದಚಾರಿ ಮಾರ್ಗ ಒತ್ತುವರಿ ಕಂಡು ಬಂದರೆ ಯಾವುದೇ ಪ್ರಭಾವಕ್ಕೆ ಒಳಗಾಗದೇ ತೆರವುಗೊಳಿಸಲಾಗುವುದು.

- ಬಸವರಾಜ್‌, ಆಯುಕ್ತರು, ಚಿಕ್ಕಮಗಳೂರು ನಗರ ಸಭೆ