ಸಾರಾಂಶ
ಸರ್ಕಾರ ನಿರ್ಮಿಸಬೇಕಾದ ರಸ್ತೆಯನ್ನು ಗಣಿ ಮಾಲೀಕರು ಮಾಡುತ್ತಿದ್ದಾರೆ, ಇದನ್ನು ತಡೆಯಲು ಹೋದಾಗ ರೈತರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ, ಗುಂಡಿನ ದಾಳಿ ನಡೆಸಿದ ಆರೋಪಿಯನ್ನು ಗಡಿ ಪಾರು ಮಾಡಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಕರ್ನಾಟಕ ರೈತ ಸಂಘಟನೆ ಮತ್ತು ಕನ್ನಡ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿವೆ.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಅಖಿಲ ಕರ್ನಾಟಕ ರೈತ ಸಂಘಟನೆ ಮತ್ತು ಕನ್ನಡ ರಕ್ಷಣಾ ವೇದಿಕೆ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿದರು.ಸಂಘದ ಅಧ್ಯಕ್ಷ ರವಿಚಂದ್ರ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ರೈತರ ಮೇಲೆ ಗೋಲಿಬಾರ್ ರೀತಿಯ ಅಮಾನುಷ ಘಟನೆ ಹಿಂದೆಂದೂ ನಡೆದಿರಲಿಲ್ಲ, ಈ ಘಟನೆಗೆ ಜಿಲ್ಲಾಧಿಕಾರಿಗಳು ಕಾರಣ, ಮಂಚೇನಹಳ್ಳಿಯ ರೈತರು ಹಲವು ವರ್ಷಗಳಿಂದ ಈ ಬಗ್ಗೆ ಪ್ರತಿಭಟನೆ ನಡೆಸುತ್ತ ಬಂದಿದ್ದಾರೆ. ಆದರು ಜಿಲ್ಲಾಧಿಕಾರಿಗಳು ಪರವಾನಗಿಯನ್ನು ನೀಡಿದ್ದಾರೆ ಎಂದರು.ಆರೋಪಿಯ ಗಡಿಪಾರು ಮಾಡಿ
ಸರ್ಕಾರ ನಿರ್ಮಿಸಬೇಕಾದ ರಸ್ತೆಯನ್ನು ಗಣಿ ಮಾಲೀಕರು ಮಾಡುತ್ತಿದ್ದಾರೆ, ಇದನ್ನು ತಡೆಯಲು ಹೋದಾಗ ರೈತರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ, ಗುಂಡಿನ ದಾಳಿ ನಡೆಸಿದ ಆರೋಪಿಯನ್ನು ಗಡಿ ಪಾರು ಮಾಡಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.ಕರವೇ ಪ್ರಭಾಕರ್ ಮಾತನಾಡಿ, ಗಣಿ ಉದ್ಯಮಿಗಳು, ಸರ್ಕಾರಕ್ಕಾಗಲಿ, ಜಿಲ್ಲಾಧಿಕಾರಿಗಳಿಗಾಗಲಿ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿಗಾಗಲಿ ಪತ್ರದ ಮುಖೇನೆ ಮಾಹಿತಿಯನ್ನು ತಿಳಿಸದೆ, ಹಣ ಬಲ ಮತ್ತು ರಾಜಕೀಯ ಪ್ರಭಾವದಿಂದ ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದರು.ಆರೋಪಿಯನ್ನು ರೌಡಿಪಟ್ಟಿಗೆ ಸೇರಿಸಿರೈತನ ಮೇಲೆ ಗುಂಡುಹಾರಿಸಿದ ಘಟನೆ ಜಿಲ್ಲೆಯಲ್ಲಿ ಹಿಂದೆಂದೂ ನಡೆದಿರಲಿಲ್ಲ. ಘಟನಾ ಸ್ಥಳದಲ್ಲಿ ಭಾಗಿಯಾಗಿದ್ದ ಎಲ್ಲರ ಮೇಲೂ ರೌಡಿ ಹಳೆಯನ್ನು ತೆಗೆಯಬೇಕು, ಹಾಗೂ ಸಕಲೇಶ್ ರಿವಾಲ್ವಾರ್ ಪರವಾನಗಿಯನ್ನು ರದ್ದು ಮಾಡಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ, ನಟರಾಜ್, ಶಾನ್ವಾಸ್ ಭಾಷಾ, ಶ್ರೀರಾಮ ರೆಡ್ಡಿ, ಧನು, ಬಾಬು ರೆಡ್ಡಿ, ನಾಗಭೂಷಣ್ ರೆಡ್ಡಿ, ಮುಂತಾದವರು ಪಾಲ್ಗೊಂಡಿದ್ದರು.