ಒಲವು ನೆರಳಿನ ಹಾದಿ ಗಜಲ್ ಲೋಕಾರ್ಪಣೆ

| Published : Feb 11 2024, 01:50 AM IST

ಸಾರಾಂಶ

ಕನ್ನಡ ಗಜಲ್ ರಚಿಸುವುದರ ಮೂಲಕ ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟಿರುವುದು ಶ್ಲಾಘನೀಯ

ಮುನವಳ್ಳಿ: ಕನ್ನಡದಲ್ಲೂ ಗಜಲ್ ಸಾಹಿತ್ಯ ಇವತ್ತು ವಿಫುಲವಾಗಿ ಬೆಳಿಯುತ್ತಿದೆ ಹಾಗೂ ಶ್ರೇಷ್ಠ ಸಾಹಿತ್ಯ ಎಲ್ಲ ಓದುಗರ ಮನ ಮುಟ್ಟುತ್ತದೆ ಎಂದು ಸವದತ್ತಿ ತಾಲೂಕು ಕ.ಸಾ.ಪ ಅಧ್ಯಕ್ಷರು ಹಾಗೂ ಕೆ.ಪಿ.ಎಸ್ ಪ್ರಾಚಾರ್ಯ ವೈ ಎಂ ಯಾಕೊಳ್ಳಿ ಹೇಳಿದರು.ಯಕ್ಕುಂಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಾಲೇಜ ವಿಭಾಗ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಸವದತ್ತಿ ಇವರ ಸಹಯೋಗದಲ್ಲಿ ಉಪನ್ಯಾಸಕ ಶ್ರೀಶೈಲ ಸಿ ಹೆಬ್ಬಳ್ಳಿ ಬರೆದ ಒಲವು ನೆರಳಿನ ಹಾದಿ ಕನ್ನಡ ಗಜಲ್ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಗಜಲ್ ರಚಿಸುವುದರ ಮೂಲಕ ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟಿರುವುದು ಶ್ಲಾಘನೀಯ ಎಂದರು.

ಮುಖ್ಯಅತಿಥಿಗಳಾಗಿ ಆಗಮಿಸಿದ ಉಪನ್ಯಾಸಕ ಎ.ಬಿ ಮಿರಜಕರ ಮಾತನಾಡಿ, ಹೆಬ್ಬಳ್ಳಿಯವರು ಬರೆದ ಈ ಗಜಲ್ ಓದುಗರಿಗೆ ಸಂತೋಷ ನೀಡುವುದರ ಜೊತೆಗೆ ಒಳ್ಳೆಯ ಸಂದೇಶ ಕೊಡುತ್ತದೆ ಎಂದರು.ಲೇಖಕ ಶ್ರೀಶೈಲ ಸಿ ಹೆಬ್ಬಳ್ಳಿ ಮಾತನಾಡಿ, ಸಮಾಜಕ್ಕೆ ನಾನು ಬರೆದ ಕೃತಿ ಲೋಕಾರ್ಪಣೆ ಮಾಡಿರುವುದು ಬಹಳ ಸಂತೋಷವಾಗಿದೆ ಎಂದರು. ಆರ್‌.ಕೆ ಮುರಮಕರ, ಸಿ.ಎ ಕುಂಬಾರ, ಪೂರ್ಣಿಮಾ ಖಾನಪೇಠ, ಕಾಲೇಜ ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು. ಪ್ರೀಯಾ ಸತ್ತಿಗೇರಿ ಸ್ವಾಗತಿಸಿದರು, ವಿ.ಡಿ ಮಾಕಾರ ಕಾರ್ಯಕ್ರಮ ನಿರೂಪಿಸಿದರು. ರವಿ ಛೋಳಕೆ ವಂದಿಸಿದರು.