ಸಾರಾಂಶ
ಕೆರೂರ: ಚಾಲುಕ್ಯ ನಾಡಿನ ಶಿವಯೋಗಿ ಮಂದಿರ 114 ವರ್ಷಗಳಿಂದ ಸಮಾಜಮುಖಿ ಸೇವೆ ಮಾಡುತ್ತ ಬಂದಿದ್ದು, ಕರುನಾಡಿಗೆ ಅನೇಕ ಸ್ವಾಮೀಜಿಗಳು, ವಿದ್ವಾಂಸರು, ಸಂಗೀತಗಾರರನ್ನು ಪರಿಚಯಿಸಿದ ಪುಣ್ಯ ಕ್ಷೇತ್ರವಾಗಿದೆ. ಈ ಕ್ಷೇತ್ರವನ್ನು ಪಾವನವಾಗಿಸುವಲ್ಲಿ ಹಾನಗಲ್ಲ ಕುಮಾರ ಶಿವಯೋಗಿಗಳ ಕೊಡುಗೆ ಅಪಾರವಾಗಿದೆ ಎಂದು ಹಾವೇರಿ ಮಠದ ನಿರಂಜನ ಸದಾಶಿವ ಸ್ವಾಮಿಗಳು ಹೇಳಿದರು.
ಕನ್ನಡಪ್ರಭ ವಾರ್ತೆ ಕೆರೂರ
ಚಾಲುಕ್ಯ ನಾಡಿನ ಶಿವಯೋಗಿ ಮಂದಿರ 114 ವರ್ಷಗಳಿಂದ ಸಮಾಜಮುಖಿ ಸೇವೆ ಮಾಡುತ್ತ ಬಂದಿದ್ದು, ಕರುನಾಡಿಗೆ ಅನೇಕ ಸ್ವಾಮೀಜಿಗಳು, ವಿದ್ವಾಂಸರು, ಸಂಗೀತಗಾರರನ್ನು ಪರಿಚಯಿಸಿದ ಪುಣ್ಯ ಕ್ಷೇತ್ರವಾಗಿದೆ. ಈ ಕ್ಷೇತ್ರವನ್ನು ಪಾವನವಾಗಿಸುವಲ್ಲಿ ಹಾನಗಲ್ಲ ಕುಮಾರ ಶಿವಯೋಗಿಗಳ ಕೊಡುಗೆ ಅಪಾರವಾಗಿದೆ ಎಂದು ಹಾವೇರಿ ಮಠದ ನಿರಂಜನ ಸದಾಶಿವ ಸ್ವಾಮಿಗಳು ಹೇಳಿದರು.ಪಟ್ಟಣದ ಚರಂತಿಮಠದಲ್ಲಿ ಭಕ್ತರಿಗೆ ಶಿವಯೋಗಿ ಮಂದಿರದ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ನೀಡಿದ ಶ್ರೀಗಳು ಆಶೀರ್ವಚನ ನೀಡಿ, ಸಮಾಜದಲ್ಲಿನ ಮೂಢನಂಬಿಕೆ, ಅಸಮಾನತೆ ಹೋಗಲಾಡಿಸಿ ಸಮಾಜ ಪರಿವರ್ತನೆಗೆ ಶ್ರಮಿಸಿದ್ದಾರೆ. ಮಠಾಧೀಶರ ಎಡಗೈಯಲ್ಲಿ ಲಿಂಗ ಬಲಗೈಯಲ್ಲಿ ಸಮಾಜ ಇರಲಿ, ಲಿಂಗದ ಮೇಲೆ ಇದ್ದ ಶ್ರದ್ಧೆ, ಭಕ್ತಿ ಸಮಾಜದ ಮೇಲಿಟ್ಟು ಸಮಾಜ ತಿದ್ದುವ ಕಾಯಕ ಮಾಡಬೇಕು ಎಂಬ ಆಶಯ ಹಾನಗಲ ಕುಮಾರ ಶ್ರೀಗಳದ್ದಾಗಿತ್ತು ಎಂದರು.
ಚರಂತಿಮಠದ ಡಾ.ಶಿವಕುಮಾರ ಶಿವಾಚಾರ್ಯ ಶ್ರೀಗಳು ಮಾತನಾಡಿ, ದೂರ ದೃಷ್ಟಿ ಹೊಂದಿದ್ದ ಲಿಂ. ಕುಮಾರಶಿವಯೋಗಿಗಳ ಸಮಾಜಮುಖಿ ಕಾರ್ಯ ಆದರ್ಶಪ್ರಾಯಪಟ್ಟರು.ಶಿವಯೋಗಿ ಮಂದಿರದ ಧರ್ಮದರ್ಶಿ ಎಂ. ಬಿ. ಹಗರಗಿ ಮಾತನಾಡಿದರು. ಸಭೆಯಲ್ಲಿ ಶರಣಗೌಡ ಪಾಟೀಲ, ಚನ್ನಮಲ್ಲಪ್ಪ ಘಟ್ಟದ, ಗಂಗಾಧರ ವಿಜಾಪುರ್, ಎ.ಆರ್. ಯಂಡಿಗೇರಿ, ಬಸಯ್ಯ ಮಠಪತಿ, ಕುಮಾರ ಯಂಡಿಗೇರಿ, ಶೇಖರಯ್ಯ ಹೊಸಮಠ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.