ಸಾರಾಂಶ
ಕನ್ನಡಪ್ರಭವಾರ್ತೆ,ಗುಳೇದಗುಡ್ಡ ಏ.18 ರಂದು ಗುರುವಾರ ಸಂಜೆ ಹುಬ್ಬಳ್ಳಿಯ ಕೆಎಲ್ಇಯ ಬಿವಿಬಿ ಕಾಲೇಜು ಆವರಣದಲ್ಲಿ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಅವಳ ಮೇಲೆ ನಡೆದ ಬರ್ಬರ ಹತ್ಯೆಯನ್ನು ಇಲ್ಲಿಯ ಸಮಸ್ತ ಸಾಹಿತ್ಯ ಬಳಗ, ಚಿಂತಕರು ಮತ್ತು ಮಠಾಧೀಶರು ಖಂಡಿಸಿ ತಪ್ಪಿತಸ್ಥ ವ್ಯಕ್ತಿಗೆ ಕಠಿಣ ಶಿಕ್ಷೆ ನೀಡುವಂತೆ ಸಾಹಿತಿಗಳಾದ ಡಾ.ವಿ.ಎ.ಬೆನಕನಾಳ, ವಿಶ್ರಾಂತ ಪ್ರಾಧ್ಯಾಪಕ ಎಸ್.ಐ.ರಾಜನಾಳ ಆಗ್ರಹಿಸಿದರು.
ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಗೈದ ಅಪರಾಧಿಗೆ ಕಠಿಣ ಶಿಕ್ಷೆ ನೀಡುವಂತೆ ತಾಲೂಕಿನ ಸಾಹಿತಿಗಳು, ಚಿಂತಕರು ಮತ್ತು ಮಠಾಧೀಶರಿಂದ ತೀವ್ರ ಖಂಡನೆ ವ್ಯಕ್ತವಾಗಿದ್ದು, ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ತಹಸೀಲ್ದಾರರಿಗೆ ಶನಿವಾರ ನೀಡಿ ಅವರು ಮಾತನಾಡಿದರು.ಡಾ.ನೀಲಕಂಠ ಶ್ರೀಗಳು ಮಾತನಾಡಿ,ರಾಜ್ಯದಲ್ಲಿ ಪಾಲಕರು ಈ ಘಟನೆಯಿಂದ ಭಯಭೀತರಾಗಿದ್ದಾರೆ. ತಮ್ಮ ಹೆಣ್ಣುಮಕ್ಕಳನ್ನು ಕಾಲೇಜಿಗೆ ಕಳಿಸುವುದು ಹೇಗೆಂದು ಭಯದಲ್ಲಿದ್ದಾರೆ. ಹೀಗಾದರೆ ಹೆಣ್ಣುಮಕ್ಕಳ ಶಿಕ್ಷಣ ಮೊಟಕಾಗುವುದಿಲ್ಲವೇ? ಈ ಕೃತ್ಯದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ವೈಫಲ್ಯವೂ ಕಾರಣವಾಗಿದೆ.ತಪ್ಪು ಮಾಡಿದ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಹಾಡಹಗಲೇ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಯಿಂದ ನಡೆದ ಈ ಹತ್ಯೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಇಂತಹ ಹೇಯ, ಅಮಾನವೀಯ ಕೊಲೆ ಮಾಡಿದ ವ್ಯಕ್ತಿಯನ್ನು ಸರ್ಕಾರ ಕಾನೂನಿನ ಮೂಲಕ ಕಠಿಣ ಶಿಕ್ಷೆ ವಿಧಿಸಬೇಕು. ಇನ್ನುಮುಂದೆ ಇಂತಹ ಘಟನೆಗಳು ಸಮಾಜದಲ್ಲಿ ನಡೆಯದಂತೆ ಕಾನೂನಿನಲ್ಲಿಯೂ ಬದಲಾವಣೆ ತರಬೇಕೆಂದು ವಿಶ್ರಾಂತ ಪ್ರಾಚಾರ್ಯ ಎಸ್.ಬಿ.ಬರಗುಂಡಿ ಒತ್ತಾಯಿಸಿದರು.ನೇಹಾ ಹಿರೇಮಠ ಸಾವಿನಿಂದ ಅವಳ ತಂದೆ, ತಾಯಿ, ಬಂಧು, ಬಳಗ, ಸಹಪಾಟಿಗಳು ಕಂಗಾಲಾಗಿದ್ದಾರೆ. ನೇಹಾಳ ಅಗಲಿಕೆಯ ದುಃಖದಲ್ಲಿ ನಾವೂ ಪಾಲುದಾರರಾಗಿದ್ದೇವೆ. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ. ಆದಷ್ಟು ಬೇಗ ನೇಹಾಳನ್ನು ಕೊಲೆ ಮಾಡಿದ ವ್ಯಕ್ತಿಗೆ ಕಠಿಣ ಶಿಕ್ಷೆ ನ್ಯಾಯಾಲಯ ನೀಡಲಿ. ನೇಹಾಳಿಗೆ ಹಾಗೂ ಅವಳ ಕುಟುಂಬಕ್ಕಾದ ಅನ್ಯಾಯಕ್ಕೆ ಸರ್ಕಾರ ನ್ಯಾಯ ದೊರಕಿಸಿಕೊಡಬೇಕೆಂದು ಸೇರಿದ ಎಲ್ಲರೂ ಒತ್ತಾಯಿಸಿದರು. ಡಾ.ಚಂದ್ರಶೇಖರ ಕಾಳನ್ನವರ ಮನವಿ ಓದಿದರು. ನಂತರ ತಹಸೀಲ್ದಾರ ಮಂಗಳ ಎಂ. ಅವರಿಗೆ ಮನವಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮುರಘಾಮಠದ ಕಾಶೀನಾಥ ಶ್ರೀಗಳು, ಮರಡಿಮಠದ ಕಾಡಸಿದ್ದೇಶ್ವರ ಶ್ರೀಗಳು, ಡಾ.ಸಿ.ಎಂ.ಜೋಶಿ, ಡಾ. ಎಚ್.ಎಸ್.ಘಂಟಿ, ವಿ.ಕೆ.ಬದಿ,ಅಶೋಕ ಹೆಗಡಿ, ಮೋಹನ ಕರನಂದಿ, ಸಿದ್ದಪ್ಪ ರಾವಳ, ಯಲ್ಲಪ್ಪ ಮನ್ನಿಕಟ್ಟಿ, ಮಲ್ಲಿಕಾರ್ಜುನ ರಾಜನಾಳ ಭಾಗವಹಿಸಿದ್ದರು.ಕೋಟ್....ನೇಹಾ ಹಿರೇಮಠ ಸಾವಿನಿಂದ ಅವಳ ತಂದೆ, ತಾಯಿ, ಬಂಧು, ಬಳಗ, ಸಹಪಾಟಿಗಳು ಕಂಗಾಲಾಗಿದ್ದಾರೆ. ನೇಹಾಳ ಅಗಲಿಕೆಯ ದುಃಖದಲ್ಲಿ ನಾವೂ ಪಾಲುದಾರರಾಗಿದ್ದೇವೆ. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ. ಈ ಹತ್ಯೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಇಂತಹ ಹೇಯ, ಅಮಾನವೀಯ ಕೊಲೆ ಮಾಡಿದ ವ್ಯಕ್ತಿಯನ್ನು ಸರ್ಕಾರ ಕಾನೂನಿನ ಮೂಲಕ ಕಠಿಣ ಶಿಕ್ಷೆ ವಿಧಿಸಬೇಕು.
ಎಸ್.ಬಿ.ಬರಗುಂಡಿ. ವಿಶ್ರಾಂತ ಪ್ರಾಚಾರ್ಯ