ಸಾರಾಂಶ
ಮುದ್ದೇನಹಳ್ಳಿ ಸತ್ಯಸಾಯಿ ಆಸ್ಪತ್ರೆಯಲ್ಲಿ ದೇಶದಲ್ಲಿಯೇ ಮೊದಲ ಹಾಟ್ ವಾಲ್ವ್ ಬ್ಯಾಂಕ್ ತೆರೆಯಲಾಗುತ್ತಿದೆ. ವಿಶ್ವದಲ್ಲಿ ಇಂತಹ ಹಾರ್ಟ ವಾಲ್ವ್ ಬ್ಯಾಂಕ್‌ಗಳು ಕೇವಲ 7 ಮಾತ್ರಇವೆ. ಹೃದಯ ಸಂಬಂಧಿ ಖಾಯಿಲೆಯನ್ನು ಗುಣಪಡಿ ಸಲು ಕೃತಕ ಹೃದಯ ನಾಳಗಳನ್ನು ಅಳವಡಿಸುವ ಬದಲು ಮನುಷ್ಯರ ಹೃದಯದ ನಾಳಗಳನ್ನೇ ಬಳಸಲಾಗುವುದು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮಕ್ಕಳು ಮತ್ತು ವಯಸ್ಕರ ಹೃದಯ ಸಂಬಂಧಿ ಖಾಯಿಲೆಯನ್ನು ಗುಣಪಡಿ ಸಲು ಕೃತಕ ಹೃದಯ ನಾಳಗಳನ್ನು ಅಳವಡಿಸುವ ಬದಲು ಮನುಷ್ಯರ ಹೃದಯದ ನಾಳಗಳನ್ನೇ ಬಳಸಿ ಶಸ್ತ್ರ ಚಿಕಿತ್ಸೆ ಮಾಡುವ ಹಾಟ್ ವಾಲ್ವ್ ಬ್ಯಾಂಕ್ ಸ್ಥಾಪನೆಯ ಗುರಿಯಿದೆ ಎಂದು ಸತ್ಯ ಸಾಯಿ ಸರಳಾ ಸ್ಮಾರಕ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಹಿರೇಮಠ ತಿಳಿಸಿದರು.ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಸತ್ಯಸಾಯಿ ಸರಳ ಮೇಮೋರಿಯಲ್ ಆಸ್ಪತ್ರೆಯಲ್ಲಿ ಶುಕ್ರ ವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುದ್ದೇನಹಳ್ಳಿ ಸತ್ಯಸಾಯಿ ಆಸ್ಪತ್ರೆಯಲ್ಲಿ ದೇಶದಲ್ಲಿಯೇ ಮೊದಲ ಹಾಟ್ ವಾಲ್ವ್ ಬ್ಯಾಂಕ್ ತೆರೆಯಲಾಗುತ್ತಿದೆ. ವಿಶ್ವದಲ್ಲಿ ಇಂತಹ ಹಾರ್ಟ ವಾಲ್ವ್ ಬ್ಯಾಂಕ್‌ಗಳು ಕೇವಲ 7 ಮಾತ್ರಇವೆ ಎಂದರು.ಆರೋಗ್ಯ ಮಾರಾಟದ ವಸ್ತುವಲ್ಲ
ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ರಘುಪತಿ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಮಾರಾಟದ ವಸ್ತು ಆಗಬಾರದು ಎಂದು ಸತ್ಯಸಾಯಿ ಬಾಬಾ ಹೇಳುತ್ತಿದ್ದರು. ಆ ಪ್ರಕಾರವೇ ಮಧುಸೂದನ ಸಾಯಿ ಅವರು ನಡೆದುಕೊಂಡು ಬರುತ್ತಿದ್ದಾರೆ. ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕ ಆಹಾರ ಕ್ಷೇತ್ರದಲ್ಲಿ ಸಂಸ್ಥೆಯು ಕೆಲಸ ಮಾಡುತ್ತಿದೆ ಎಂದು ಹೇಳಿದರು.ಈವೇಳೆ ಬ್ರಿಟನ್‌ನ ಹೀಲಿಂಗ್ ಲಿಟಲ್ ಹಾರ್ಟ್ಸ್ ಫೌಂಡೇಶನ್ ಸಂಸ್ಥಾಪಕ ಡಾ.ಸಂಜೀವ್ ನಿಚ್ಚಾನಿ, ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಗುಣಮಟ್ಟ ಮತ್ತು ಶೈಕ್ಷಣಿಕ ವಿಭಾಗದ ನಿರ್ದೇಶಕ ಡಾ.ಸತೀಶ್‌ಬಾಬು, ಟ್ರಸ್ಟಿ, ಬ್ರಿಟನ್‌ನ ಹೀಲಿಂಗ್ ಲಿಟಲ್ ಹಾರ್ಟ್ಸ್ ಫೌಂಡೇಶನ್ ನಿರ್ದೇಶಕಿ ಲೆಸ್ಲಿ, ಜೆಕ್ ಗಣರಾಜ್ಯದ ಮಕ್ಕಳ ತಜ್ಞ ಡಾ.ರೋಮನ್ ಮತ್ತಿತರರು ಇದ್ದರು.