ಆರೋಗ್ಯ, ಶಿಕ್ಷಣ ಕ್ಷೇತ್ರ ಅಭಿವೃದ್ಧಿಗೆ ನೆರವಾಗಲಿ

| Published : Jan 19 2025, 02:18 AM IST

ಆರೋಗ್ಯ, ಶಿಕ್ಷಣ ಕ್ಷೇತ್ರ ಅಭಿವೃದ್ಧಿಗೆ ನೆರವಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾಲೂರು ಮತ್ತು ಕೋಲಾರ ತಾಲೂಕಿನ ಗ್ರಾಮಗಳ ಅಭಿವೃದ್ಧಿಗೆ ಹೋಂಡಾ ಕಂಪನಿಯು ಶುದ್ಧ ಕುಡಿಯುವ ನೀರಿನ ಘಟಕ ಹೈಮಾಸ್ಟ್ ಲೈಟ್, ಸೋಲಾರ್ ಲೈಟ್, ರೋಡ್ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕಂಪನಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯ ಅನುದಾನವನ್ನು ಶಿಕ್ಷಣ ಹಾಗೂ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು.

ಕನ್ನಡಪ್ರಭ ವಾರ್ತೆ ಕೆಜಿಎಫ್ ಇಂದಿನ ದಿನಗಳಲ್ಲಿ ಆರೋಗ್ಯ ಸಂಬಂಧಿತ ಕಾಳಜಿ ಮತ್ತು ಮುಂಜಾಗೃತೆಯ ಬಗ್ಗೆ ಹೆಚ್ಚು ಮಾಹಿತಿ ನೀಡುವ ಹಾಗೂ ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳ ಅಗತ್ಯವಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.

ಹೋಂಡಾ ಇಂಡಿಯಾ ಪೌಂಡೇಶನ್ ವತಿಯಿಂದ ತಾಲೂಕಿನ ವಕ್ಕಲೇರಿ ಗ್ರಾಮದಲ್ಲಿ ಆಯೋಜಿಸಿದ್ದ ಆರೋಗ್ಯ ಮೇಳವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಹೋಂಡಾ ಕೊಡುಗೆಗೆ ಶ್ಲಾಘನೆ

ಮಾಲೂರು ಮತ್ತು ಕೋಲಾರ ತಾಲೂಕಿನ ಗ್ರಾಮಗಳ ಅಭಿವೃದ್ಧಿಗೆ ಹೋಂಡಾ ಕಂಪನಿಯು ಶುದ್ಧ ಕುಡಿಯುವ ನೀರಿನ ಘಟಕ ಹೈಮಾಸ್ಟ್ ಲೈಟ್, ಸೋಲಾರ್ ಲೈಟ್, ರೋಡ್ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕಂಪನಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯ ಅನುದಾನವನ್ನು ಶಿಕ್ಷಣ ಹಾಗೂ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು ನಂತರ ಇತರ ಚಟುವಟಿಕೆಗಳಿಗೆ ಬಳಕೆಯಾಗಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಮಾತನಾಡಿ, ಹೋಂಡಾ ಕಂಪನಿಯು ರಾಜ್ಯದಲ್ಲಿಯೇ ಬಹು ಉಪಯೋಗಿ ಸ್ಟೇಡಿಯಂ ಅನ್ನು ಕಟ್ಟಿದ ಕೀರ್ತಿ ಹೋಂಡಾ ಕಂಪನಿಗೆ ಸಲ್ಲುತ್ತದೆ ಮತ್ತು ಅದೇ ತರಹ ಕೋಲಾರ ನಗರದಲ್ಲಿಯೂ ಕೂಡ ಒಂದು ಉತ್ತಮ ಕಾರ್ಯವನ್ನು ರೂಪಿಸಬೇಕೆಂದು ಈ ಮೂಲಕ ಮನವಿ ಮಾಡುವುದಾಗಿ ಹೇಳಿದರು.

ಗ್ರಾಮಗಳಲ್ಲಿ ಅಸಮಾನತೆ

ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಹೋಂಡಾ ಕಂಪನಿ ನರಸಾಪುರ ಘಟಕದ ಮುಖ್ಯಸ್ಥ ಸುನಿಲ್ ಕುಮಾರ್ ಮಿತ್ತಲ್ ಮಾತನಾಡಿ, ಭಾರತದ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸ್ಥಿತಿಯು ಗಮನಾರ್ಹ ಸವಾಲುಗಳು ಮತ್ತು ಅಸಮಾನತೆಗಳನ್ನು ಎದುರಿಸುತ್ತಿವೆ. ಇದಕ್ಕೆ ಹಳ್ಳಿಗಳಲ್ಲಿ ಆರೋಗ್ಯ ಸೌಲಭ್ಯಗಳ ಕೊರತೆಯೂ ಒಂದು ಕಾರಣ ಎಂದರು.

ಈ ಅಡೆತಡೆಗಳನ್ನು ನಿವಾರಿಸಲು ಹೋಂಡಾ ಇಂಡಿಯಾ ಪೌಂಡೇಶನ್ ಆರೋಗ್ಯ ಮೇಳವನ್ನು ಆಯೋಜನೆ ಕೈಗೊಂಡಿದೆ. ಮೂಲಭೂತ ಆರೋಗ್ಯ ರಕ್ಷಣೆಯನ್ನು ಆದ್ಯತೆಯಾಗಿಟ್ಟುಕೊಂಡು ಈಗಾಗಲೇ ಸಂಚಾರಿ ವೈದ್ಯಕೀಯ ಘಟಕವನ್ನು ಕೋಲಾರ ಮತ್ತು ಮಾಲೂರು ತಾಲ್ಲೂಕಿನ ೨೫ ಹಳ್ಳಿಗಳಲ್ಲಿ ಉಚಿತ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ ಎಂದರು.

ಆರೋಗ್ಯ ರಕ್ಷಣೆಗೆ ಆದ್ಯತೆ

ಆರೋಗ್ಯ ಮೇಳಗಳ ಮೂಲಕ ಗ್ರಾಮೀಣ ಸಮುದಾಯಗಳಲ್ಲಿ ಆರೋಗ್ಯವನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆ ಮತ್ತು ಈ ಒಂದು ಆರೋಗ್ಯ ಮೇಳದಲ್ಲಿ ಕಣ್ಣಿನ ತಪಾಸಣೆ, ಮೂಳೆಗಳ ತಪಾಸಣೆ, ಜನರಲ್ ರಕ್ತದಾನ ಶಿಬಿರ, ಮಹಿಳಾ ತಪಾಸಣೆ, ಇಸಿಜಿ ಮತ್ತು ಮಕ್ಕಳ ಸೇವೆ ಹೊಂದಿದೆ. ಆದ್ದರಿಂದ ಗ್ರಾಮಸ್ಥರು ಈ ಒಂದು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಜನರಲ್ ಮ್ಯಾನೇಜರ್ ಜಯಂತ್ ಶೆಟ್ಟಿ, ವಕ್ಕಲೇರಿ ಗ್ರಾಮ ಪಂಚಾಯತಿಯ ಮಾಜಿ ಮುರಳಿ ಉಪಸ್ಥಿತರಿದ್ದರು.