ಶ್ರದ್ಧೆ- ಗುರಿ ಇದ್ದರೆ ಸಾಧನೆ ಮಾಡಬಹುದು: ಶಾಸಕ ಶ್ರೀನಿವಾಸ್

| Published : Aug 04 2024, 01:25 AM IST

ಸಾರಾಂಶ

ತರೀಕೆರೆ, ವಿದ್ಯಾರ್ಥಿಗಳಲ್ಲಿ ಕಲಿಕೆಯಲ್ಲಿ ಶ್ರದ್ಧೆ ಮತ್ತು ಜೀವನದಲ್ಲಿ ಗುರಿ ಇದ್ದರೆ ಸಾಧನೆ ಮಾಡಬಹುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಸಾಂಸ್ಕೃತಿಕ ಕ್ರೀಡಾ ರಾಷ್ಟ್ರೀಯ ಸೇವಾ ಯೋಜನೆ ಸಮಾರೋಪ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ವಿದ್ಯಾರ್ಥಿಗಳಲ್ಲಿ ಕಲಿಕೆಯಲ್ಲಿ ಶ್ರದ್ಧೆ ಮತ್ತು ಜೀವನದಲ್ಲಿ ಗುರಿ ಇದ್ದರೆ ಸಾಧನೆ ಮಾಡಬಹುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಶನಿವಾರ ಪಟ್ಟಣದ ಸರ್ಕಾರಿ ಪ್ರಧಮ ದರ್ಜೆ ಕಾಲೇಜಿನಿಂದ ಏರ್ಪಡಿಸಿದ್ದ 2023-24ನೇ ಸಾಲಿನ ಸಾಂಸ್ಕೃತಿಕ ಕ್ರೀಡಾ. ರಾಷ್ಟ್ರೀಯ ಸೇವಾ ಯೋಜನೆ, ಬಾರತೀಯ ರೋವರ್ಸ್ ಮತ್ತು ರೇಂಜರ್ಸ್, ಯುವ ರೆಡ್ ಕ್ರಾಸ್, ಮಹಿಳಾ ಸಬಲೀಕರಣ ಕೋಶ, ಇಕೋ ಕ್ಲಬ್, ಐಕ್ಯೂಎಸಿ ಘಟಕಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸರ್ಕಾರಿ ಪ್ರಧಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಅನೇಕ ಸಾಧನೆ ಮಾಡಿದ್ದು, ಶೇ.98ರಷ್ಟು ಅಂಕ ಪಡೆದಿದ್ದಾರೆ. ಈ ಕಾಲೇಜು ಒಳ್ಳೆಯ ಹೆಸರು ಗಳಿಸಿದೆ. ಅದಕ್ಕೆ ಕಾರಣ, ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಕಾಲೇಜು ಸಿಬ್ಬಂದಿ, ಕಾಲೇಜು 650 ವಿದ್ಯಾರ್ಥಿಗಳನ್ನು ಹೊಂದಿದೆ. ಕಾಲೇಜಿಗೆ ಅಗತ್ಯ ವಿರುವ ಹೆಚ್ಚಿನ ಸ್ಥಳಾವಕಾಶವನ್ನು ಕಾಲೇಜಿಗೆ ಸಮೀಪವೇ ಒದಗಿಸಿಕೊಡಲು ತಾವು ಪ್ರಯತ್ನಿಸುವುದಾಗಿ ಹೇಳಿದರು.

ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಸಮಾರೋಪ ಭಾಷಣ ಮಾಡಿ ಯಾವುದೇ ವಿಷಯ ಕಲಿಯಲು ಅದರ ಬಗ್ಗೆ ಒಲವು ಇರಬೇಕು, ಆ ವಿಷಯದ ಬಗ್ಗೆ ಧ್ಯಾನಸ್ಥರಾಗಿರಬೇಕು. ವಿಶ್ವವಿದ್ಯಾಲಯ ಜ್ಞಾನ ಸಂಪಾದನೆ ಕೇಂದ್ರ, ಧ್ಯಾನಸ್ಥ ಸ್ಥಿತಿಗೆ ಬರಲು ಗುರುವಿನ ಅಗತ್ಯವಿದೆ. ದೇಶ ಕಟ್ಟಲು ಸಂಶೋಧನೆಗಳು ಅಗತ್ಯ, ಜೈವಿಕ ವಿಜ್ಞಾನದ ತಂತ್ರಜ್ಞಾನ ಶಿಕ್ಷಣ ಮುಂದಿನ ಹೆಜ್ಜೆಯಾಗಬೇಕು ಎಂದು ತಿಳಿಸಿದರು.

ಪ್ರಾಂಶುಪಾಲ ಡಾ.ಟಿ.ಮಂಜುನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ರಚನ ಶ್ರೀನಿವಾಸ್, ಹೇಮಲತ ರೇವಣ್ಣ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಪ್ರಾಧ್ಯಾಪಕರು, ವಿವಿಧ ವೇದಿಕೆ ಸಂಚಾಲಕರು

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಪ್ರಾಧ್ಯಾಪಕರಾದ ಡಾ.ಸಬಿತಾ ಬನ್ನಾಡಿ ಸ್ವಾಗತಿಸಿದರು. ವಸಂತಕುಮಾರ್ ಮತ್ತು ಬೀನಾ ವರದಿ ವಾಚಿಸಿದರು. ಟಿ.ಎಲ್.ದತ್ತಾತ್ರೇಯ ನಿರೂಪಿಸಿದರು.3ಕೆಟಿಆರ್.ಕೆ.4ಃ

ತರೀಕೆರೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇನಿಂದ ನಡೆದ ಕಾರ್ಯಕ್ರಮವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಪ್ರಾಂಶುಪಾಲ ಡಾ.ಮಂಜುನಾಥ್, ಪ್ರಾಧ್ಯಾಪಕರಾದ ಡಾ.ಸಬಿತಾ ಬನ್ನಾಡಿ ಮತ್ತಿತರರು ಇದ್ದರು.