ಜಿಲ್ಲೆಯ ವಿವಿಧೆಡೆ ಅಕ್ರಮ ಮದ್ಯ ವಶ : 9 ಪ್ರಕರಣ ದಾಖಲು

| Published : Mar 23 2024, 01:03 AM IST

ಜಿಲ್ಲೆಯ ವಿವಿಧೆಡೆ ಅಕ್ರಮ ಮದ್ಯ ವಶ : 9 ಪ್ರಕರಣ ದಾಖಲು
Share this Article
  • FB
  • TW
  • Linkdin
  • Email

ಸಾರಾಂಶ

ಜಮಖಂಡಿ ವಲಯದ ಕುಂಚನೂರು ಗ್ರಾಮದ ಪುನರ್ವಸತಿ ಕೇಂದ್ರದ ಹತ್ತಿರ ₹1.23 ಲಕ್ಷ ಮೌಲ್ಯದ 8.64 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಕ್ರಮವಾಗಿ ಸಾಗಿಸುತ್ತಿದ್ದ ₹2.89 ಲಕ್ಷ ಮೌಲ್ಯದ 34.56 ಲೀಟರ್ ಮದ್ಯ ವಶಕ್ಕೆ ಪಡೆದಿದ್ದಾರೆ. ಬಸವೇಶ್ವರ ಕಾಲೇಜ್‌ ಹತ್ತಿರ ಪೆಂಡಾರಿ ಗಲ್ಲಿಯ ಡೊಂಗ್ರಿಸಾಬ್ ಜಮಾದಾರ ಆಟೋದಲ್ಲಿ ಮದ್ಯ ಸಾಗಿಸಲಾಗುತ್ತಿತ್ತು. ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ವಾಹನ ಹಾಗೂ ಮದ್ಯ ವಶಕ್ಕೆ ಪಡೆದಿದ್ದಾರೆ.

ಜಮಖಂಡಿ ವಲಯದ ಕುಂಚನೂರು ಗ್ರಾಮದ ಪುನರ್ವಸತಿ ಕೇಂದ್ರದ ಹತ್ತಿರ ₹1.23 ಲಕ್ಷ ಮೌಲ್ಯದ 8.64 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ. ಬಾದಾಮಿ ವಲಯದ ಜಾಲಿಹಾಳ ಗ್ರಾಮದ ರಮಜಾನ್‌ಸಾಬ್‌ ಹುಸೇನಸಾಬ ಬಾಗವಾನ ಅವರ ಮನೆ ಮೇಲೆ ದಾಳಿ ನಡೆಸಿ 34.56 ಲೀಟರ್ ಲಿಕ್ಕರ್, 15.6 ಲೀಟರ್ ಬಿಯರ್ ವಶಕ್ಕೆ ಪಡೆಯಲಾಗಿದೆ.

ಹುನಗುಂದ ವಲಯದ ಹೂವನೂರು ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದ ಹತ್ತಿರ ಬೈಕ್‌ ಮೇಲೆ ಸಾಗಿಸುತ್ತಿದ್ದ 4.32 ಲೀಟರ್ ಮದ್ಯ ವಾಹನ ಸಮೇತ ವಶಕ್ಕೆ ಪಡೆಯಲಾಗಿದೆ. ಒಟ್ಟಾರೆ ₹5.50 ಲಕ್ಷ ಮೌಲದ್ಯದ 77.70 ಲೀಟರ್ ಐಎಂಎಲ್ ಮತ್ತು 15.60 ಲೀಟರ್ ಬಿಯರ್ ವಶಕ್ಕೆ ಪಡೆದುಕೊಳ್ಳಲಾಗಿದ್ದು, 9 ಪ್ರಕರಣಗಳು ದಾಖಲಾಗಿವೆ ಎಂದು ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.