ಉಡುಪಿ ನಗರದಲ್ಲಿ ‘ಶುಚಿತ್ವವನ್ನು ಅಳವಡಿಸಿ, ರೋಗವನ್ನು ಓಡಿಸಿ’ ಅಭಿಯಾನ

| Published : Jul 10 2024, 12:32 AM IST

ಉಡುಪಿ ನಗರದಲ್ಲಿ ‘ಶುಚಿತ್ವವನ್ನು ಅಳವಡಿಸಿ, ರೋಗವನ್ನು ಓಡಿಸಿ’ ಅಭಿಯಾನ
Share this Article
  • FB
  • TW
  • Linkdin
  • Email

ಸಾರಾಂಶ

ಮಳೆಗಾಲದಲ್ಲಿ ಸಾಂಕ್ರಮಿಕ ರೋಗಗಳ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ‘ಶುಚಿತ್ವವನ್ನು ಅಳವಡಿಸಿ, ರೋಗವನ್ನು ಓಡಿಸಿ’ ಎಂಬ ಅಭಿಯಾನವನ್ನು ಉಡುಪಿಯಲ್ಲಿ ಆಯೋಜಿಸಲಾಯಿತು. ಪೌರಾಯುಕ್ತ ರಾಯಪ್ಪ, ತ್ಯಾಜ್ಯ ನಿರ್ವಹಣೆ, ಪ್ಲಾಷ್ಟಿಕ್ ಬಳಕೆ ನಿಷೇಧ, ಸಾಂಕ್ರಮಿಕ ರೋಗಗಳ ಹರಡುವಿಕೆ ಮತ್ತು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ನಗರರಾಭಿವೃದ್ಧಿ ಇಲಾಖೆ, ಸ್ವಚ್ಛ ಭಾರತ್ ಮಿಷನ್ (ನಗರ) ಹಾಗೂ ಉಡುಪಿ ನಗರಸಭೆ ವತಿಯಿಂದ ಮಳೆಗಾಲದಲ್ಲಿ ಸಾಂಕ್ರಮಿಕ ರೋಗಗಳ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ‘ಶುಚಿತ್ವವನ್ನು ಅಳವಡಿಸಿ, ರೋಗವನ್ನು ಓಡಿಸಿ’ ಎಂಬ ಅಭಿಯಾನದ ಭಾಗವಾಗಿ ನಗರದ ಗ್ಲೋವಿನ್ ಸ್ಟಾರ್ ಅಕಾಡೆಮಿ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಸ್ಕೂಲ್‌ನಲ್ಲಿ ಡಯೇರಿಯಾ ತಡೆಗಟ್ಟುವಿಕೆ ಅಭಿಯಾನವನ್ನು ನಡೆಸಲಾಯಿತು.

ಈ ಸಂದರ್ಭ ಪೌರಾಯುಕ್ತ ರಾಯಪ್ಪ, ತ್ಯಾಜ್ಯ ನಿರ್ವಹಣೆ, ಪ್ಲಾಷ್ಟಿಕ್ ಬಳಕೆ ನಿಷೇಧ, ಸಾಂಕ್ರಮಿಕ ರೋಗಗಳ ಹರಡುವಿಕೆ ಮತ್ತು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ನಗರಸಭಾ ಪರಿಸರ ಅಭಿಯಂತರೆ ಸ್ನೇಹ ಕೆ.ಎಸ್., ಪ್ರಭಾರ ಆರೋಗ್ಯ ನಿರೀಕ್ಷಕ ಮನೋಹರ್, ಶಾಲಾ ಪ್ರಾಂಶುಪಾಲ ಡಾ. ಟಿ.ಜೆ. ಕ್ವಾಡ್ರಸ್, ಮುಖ್ಯೋಪಾಧ್ಯಾಯಿನಿ ಶಾಂತಾ ಫರ್ನಾಂಡಿಸ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

* 5000 ರು. ದಂಡ, ಪರವಾನಗಿ ರದ್ದು

ಮಳೆಗಾಲದಲ್ಲಿ ಡೆಂಘೀ, ಮಲೇರಿಯಾದಂತಹ ಸಾಂಕ್ರಮಿಕ ರೋಗಗಳು ಹರಡುವುದನ್ನು ತಡೆಗಟ್ಟಲು, ನಗರಸಭೆಯು ತನ್ನ ವ್ಯಾಪ್ತಿಯಲ್ಲಿ ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ನಿರಂತರ ಶ್ರಮಿಸುತ್ತಿದೆ. ಈ ಬಗ್ಗೆ ಸರ್ವೆ ನಡೆಸಿ, ಸಾರ್ವಜನಿಕರಲ್ಲಿ ಸ್ವಚ್ಛತೆ ವಹಿಸುವ ಕುರಿತುಜಾಗೃತಿ ಮೂಡಿಸಲಾಗುತ್ತಿದೆ. ಜೊತೆಗೆ ಅಂಗಡಿಯವರು ತಮ್ಮ ತ್ಯಾಜ್ಯವನ್ನು ಸಮರ್ಪಕವಾಗಿ ಸಂಗ್ರಹಿಸಿ ನಗರಸಭೆಗೆ ವಿಲೇ ಮಾಡಲು ಸೂಚಿಸಲಾಗುತ್ತಿದೆ. ಇದರ ಹೊರತಾಗಿಯೂ ಯಾವುದೇ ಅಂಗಡಿ ಮುಂಗಟ್ಟುಗಳಲ್ಲಿ ಈ ಬಗ್ಗೆ ಕ್ರಮ ವಹಿಸದೇ ಇದ್ದಲ್ಲಿ ನೋಟಿಸ್ ನೀಡಿ 5000 ರು. ದಂಡ ವಿಧಿಸುವುದರೊಂದಿಗೆ ಅಂತಹ ಅಂಗಡಿ ಮುಂಗಟ್ಟುಗಳ ಉದ್ದಿಮೆ ಪರವಾನಗಿ ರದ್ದುಪಡಿಸಲಾಗುವುದು ಎಂದು ನಗರಸಭೆಯ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.