ಪಪಂ ಅಭ್ಯರ್ಥಿ ಆಯ್ಕೆ ಹೊಣೆ ‘ಕೈ’ ಕಾರ್ಯಕರ್ತರಿಗೆ

| Published : Jul 20 2025, 01:15 AM IST

ಪಪಂ ಅಭ್ಯರ್ಥಿ ಆಯ್ಕೆ ಹೊಣೆ ‘ಕೈ’ ಕಾರ್ಯಕರ್ತರಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಬಹಳ ಕಾಲದ ಅಪೇಕ್ಷೆಯಂತೆ ಈ ಭಾಗದ ಗ್ರಾಮಗಳು ವೇಮಗಲ್‌ಗೆ ಸೇರಿಸಲಾಗಿದೆ ಈಗಾಗಲೇ ಬಹ ದೊಡ್ಡ ಪ್ರಮಾಣದಲ್ಲಿ ರಸ್ತೆ ಆಗಲಿದೆ. ಈಗಾಗಲೇ ವೇಮಗಲ್ ಕುರುಗಲ್ ಭಾಗದಲ್ಲಿ ಬಹಳಷ್ಟು ಅಭಿವೃದ್ಧಿ ತಮ್ಮ ಮುಂದೆಯೇ ಕಾಣುತ್ತಿದೆ. ತಮ್ಮ ವಾರ್ಡ್ ಗಳಲ್ಲಿರುವ ಅಭ್ಯರ್ಥಿಗಳು ಈ ತಿಂಗಳ ೨೮ರ ತನಕ ಶಾಸಕರ ಬಳಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು,

ಕನ್ನಡಪ್ರಭ ವಾರ್ತೆ ಕೋಲಾರವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಿರ್ಧರಿಸುವ ಆಯ್ಕೆಯನ್ನು ನಿಮಗೆ ಬಿಟ್ಟಿದ್ದೇವೆ. ಆಯ್ಕೆ ನೀವು ಮಾಡಿ ಮುಂದಿನ ಕೆಲಸ ನಾವೆಲ್ಲ ಒಗ್ಗೂಡಿ ಮಾಡೋಣ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.ಚುನಾವಣೆಗೆ ಸಂಬಂಧಿಸಿದಂತೆ ಶನಿವಾರ ವಾರ್ಡ್‌ವಾರು ಸಭೆಗಳಲ್ಲಿ ಭಾಗವಹಿಸಿ ಮಾತನಾಡಿ, ನಿಮ್ಮ ಭಾಗದಲ್ಲಿರುವಹಳ್ಳಿ, ಗ್ರಾಮ, ಪಟ್ಟಣಗಳು ಅಭಿವೃದ್ಧಿ ಆಗಬೇಕಂದರೆ ಈ ಚುನಾವಣೆ ಮಹತ್ವವನ್ನು ಪಡೆದಿದೆ ಎಂದರು.

ಅಭ್ಯರ್ಥಿ ಯಾರೆಂದು ನಿರ್ಧರಿಸಿ

ಹಿಂದಿನ ಕಾಲದಲ್ಲಿ ಚುನಾವಣೆ ಬಂದರೆ ಗ್ರಾಮದಲ್ಲಿ ಹಿರಿಯರು ದೇವಾಲಯ, ಹಳ್ಳಿ ಕಟ್ಟೆ, ಎಲ್ಲೋ ಒಂದು ಭಾಗದಲ್ಲಿ ಕುಳಿತುಕೊಂಡು ಅಭ್ಯರ್ಥಿಗಳನ್ನು ತೀರ್ಮಾನ ಮಾಡುತ್ತಿದ್ದರು. ಆದರೆ ಇದೀಗ ರಾಜಕೀಯದಲ್ಲಿ ಅಂತಹ ಸನ್ನಿವೇಶಗಳು ಇಲ್ಲ. ಹಾಗಾಗಿ ನಮ್ಮ ಕಾಂಗ್ರೆಸ್ ಪಕ್ಷದಿಂದ ನಿಮ್ಮ ಗ್ರಾಮಕ್ಕೆ, ನಿಮ್ಮ ಮನೆಗೆ ಬಂದಿದ್ದೆವೆ, ನಿಮ್ಮ ಆಯ್ಕೆಯೇ ನಮ್ಮ ಆಯ್ಕೆಯಾಗಿದೆ ಎಂದರು.ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮುಕ್ತರಾಗಿ ಅಭಿವೃದ್ಧಿಗೆ ಒತ್ತು ನೀಡುತ್ತಿರುವ ಶಾಸಕ ಕೊತ್ತೂರು ಮಂಜುನಾಥ್ ಕೆಲಸ ಮಾಡಿಕೊಂಡು ಬಂದಿದ್ದಾರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ, ಇಲ್ಲಿ ಇನ್ನು ಮತ್ತಷ್ಟು ಅಭಿವೃದ್ಧಿ ಮಾಡಬೇಕಾಗಿರುವ ಹಿನ್ನಲೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯ ಎಂದು ಹೇಳಿದರು.

ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ಬಹಳ ಕಾಲದ ಅಪೇಕ್ಷೆಯಂತೆ ಈ ಭಾಗದ ಗ್ರಾಮಗಳು ವೇಮಗಲ್‌ಗೆ ಸೇರಿಸಲಾಗಿದೆ ಈಗಾಗಲೇ ಬಹ ದೊಡ್ಡ ಪ್ರಮಾಣದಲ್ಲಿ ರಸ್ತೆ ಆಗಲಿದೆ. ಈಗಾಗಲೇ ವೇಮಗಲ್ ಕುರುಗಲ್ ಭಾಗದಲ್ಲಿ ಬಹಳಷ್ಟು ಅಭಿವೃದ್ಧಿ ತಮ್ಮ ಮುಂದೆಯೇ ಕಾಣುತ್ತಿದೆ. ತಮ್ಮ ವಾರ್ಡ್ ಗಳಲ್ಲಿರುವ ಅಭ್ಯರ್ಥಿಗಳು ಈ ತಿಂಗಳ ೨೮ರ ತನಕ ಶಾಸಕರ ಬಳಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು, ನಿಮ್ಮ ನಿಮ್ಮ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯಾರೇ ಆಗಿರಲಿ ಪಕ್ಷದ ತೀರ್ಮಾನಕ್ಕೆ ಬದ್ದರಾಗಿ, ಪಕ್ಷದ ಪರ ಕೆಲಸ ಮಾಡಬೇಕು ಎಂದು ಆಕಾಂಕ್ಷಿಗಳಿಗೆ ತಿಳಿಸಿದರು.ಜಿಪಂ ಮಾಜಿ ಸದಸ್ಯ ನಾಗನಾಳ ಸೋಮಣ್ಣ, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ನರಸಾಪುರ ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೀಸಂದ್ರ ಗೋಪಾಲಗೌಡ, ಉದಯ್ ಶಂಕರ್, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್ ಮತ್ತಿತರರು ಇದ್ದರು.