ಸಾರಾಂಶ
ವಿಷ್ಣುವಿನ ಅವತಾರ ಕೃಷ್ಣ ಹಾಗೂ ರಾಮ. ಉಡುಪಿಯಲ್ಲಿ ಕನಕದಾಸರ ಭಕ್ತಿಗೆ ಮೆಚ್ಚಿ ಶ್ರೀಕೃಷ್ಣ ಪರಮಾತ್ಮನೇ ದರ್ಶನ ಕೊಟ್ಟಿದ್ದಾನೆ. ಅಂತಹ ಕನಕದಾಸರ ಫ್ಲೆಕ್ಸ್‌ಗೆ ಕಲ್ಲು ಹೊಡೆದಿದ್ದಾರೆ. ಕುರುಬರ ಸಂಘಕ್ಕೆ ಬೇರೆ ಕಡೆ ಜಾಗ ನೀಡುವಂತೆ ಸರ್ಕಾರವನ್ನು ಕೇಳಿದ್ದೇನೆ. ಜಾಗ ಕೊಡುವ ಭರವಸೆ ಸಿಕ್ಕಿದೆ. ಆ ಜಾಗದಲ್ಲಿ ಕಿಡಿಗೇಡಿಗಳು ಹೊಡೆದ ಕಲ್ಲುಗಳಿಂದಲೇ ಕನಕದಾಸರ ಪ್ರತಿಮೆ ನಿರ್ಮಾಣ ಮಾಡುತ್ತೇವೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಕುರುಬರ ವಿದ್ಯಾರ್ಥಿ ವಸತಿ ನಿಲಯದ ಮೇಲೆ ಕಿಡಿಗೇಡಿಗಳು ತೂರಿದ ಕಲ್ಲುಗಳಿಂದಲೇ ಕನಕದಾಸರ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.ಕೆರಗೋಡು-ಮಂಡ್ಯ ಪಾದಯಾತ್ರೆ ವೇಳೆ ಕುರುಬರ ಹಾಸ್ಟೆಲ್‌ಗೆ ಕಲ್ಲು ತೂರಾಟ ನಡೆಸಿದ ಒಂದು ವಾರದ ಬಳಿಕ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಷ್ಣುವಿನ ಅವತಾರ ಕೃಷ್ಣ ಹಾಗೂ ರಾಮ. ಉಡುಪಿಯಲ್ಲಿ ಕನಕದಾಸರ ಭಕ್ತಿಗೆ ಮೆಚ್ಚಿ ಶ್ರೀಕೃಷ್ಣ ಪರಮಾತ್ಮನೇ ದರ್ಶನ ಕೊಟ್ಟಿದ್ದಾನೆ. ಅಂತಹ ಕನಕದಾಸರ ಫ್ಲೆಕ್ಸ್‌ಗೆ ಕಲ್ಲು ಹೊಡೆದಿದ್ದಾರೆ. ಕುರುಬರ ಸಂಘಕ್ಕೆ ಬೇರೆ ಕಡೆ ಜಾಗ ನೀಡುವಂತೆ ಸರ್ಕಾರವನ್ನು ಕೇಳಿದ್ದೇನೆ. ಜಾಗ ಕೊಡುವ ಭರವಸೆ ಸಿಕ್ಕಿದೆ. ಆ ಜಾಗದಲ್ಲಿ ಕಿಡಿಗೇಡಿಗಳು ಹೊಡೆದ ಕಲ್ಲುಗಳಿಂದಲೇ ಕನಕದಾಸರ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ನುಡಿದರು.ಕಿಡಿಗೇಡಿಗಳು ತೂರಿದ ಕಲ್ಲುಗಳನ್ನು ಒಂದೆಡೆ ಸಂಗ್ರಹಿಸಿಡಲಾಗಿದೆ. ಅದೇ ಕಲ್ಲುಗಳು ಈಗ ಕನಕದಾಸರ ಪ್ರತಿಮೆ ಆಗಲಿವೆ. ಆ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದಲೇ ಉದ್ಘಾಟನೆ ಮಾಡಿಸುತ್ತೇವೆ. ಪ್ರತಿದಿನ ಆ ಪ್ರತಿಮೆಗೆ ಪೂಜೆ ಮಾಡುವುದಾಗಿ ಹೇಳಿದರು.
ಕುರುಬರ ಸಂಘದ ಶ್ರೀನಿವಾಸ್, ದೊಡ್ಡಯ್ಯ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುದ್ರಪ್ಪ, ನಗರಸಭೆ ಮಾಜಿ ಸದಸ್ಯ ಅನಿಲ್‌ಕುಮಾರ್, ಹರೀಶ್‌ಕುಮಾರ್ ಇದ್ದರು.