ಕನ್ನಡ ಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಹಂದನಕೆರೆ ಗ್ರಾಮದಲ್ಲಿ 29 ರಂದು ಗುರುಪೂರ್ಣಿಮಾ ಅಂಗವಾಗಿ ಶ್ರೀ ಗುರು ಗಿರಿಸಿದ್ದೇಶ್ವರ ಸ್ವಾಮಿ ಮಠದ ಶ್ರೀ ರುದ್ರರಾಧ್ಯರವರ ಆಶೀರ್ವಾದ ಹಾಗೂ ಪ್ರೋತ್ಸಾಹದಿಂದ ಕುರುಕ್ಷೇತ್ರ ಅಥವಾ ಶ್ರೀ ಕೃಷ್ಣ ಸಂಧಾನ ಎಂಬ ಸುಂದರ ಪೌರಾಣಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದ್ದು ಎಂದು ಅಂಗನವಾಡಿ ಕಾರ್ಯಕರ್ತೆ ಎಚ್‌.ಎ.ಪುಷ್ಪವತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ಹಿರಿಯ ರಂಗಭೂಮಿ ಕಲಾವಿದರಾದ ಬಿ.ಪುಟ್ಟಸ್ವಾಮಿಯನವರ ವಿರಚಿತ ಹಾಗೂ ಶ್ರೀ ಲಕ್ಷ್ಮೀನಾರಾಯಣ ಯಾದವ್‌ ಕೊರಟಗೆರೆ ಇವರ ನಿರ್ದೇಶನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸೇರಿ ಕುರುಕ್ಷೇತ್ರ ಅಥವಾ ಶ್ರೀ ಕೃಷ್ಣ ಸಂಧಾನ ಎಂಬ ಸುಂದರ ಪೌರಾಣಿಕ ನಾಟಕವನ್ನು ಅಭಿನಯಿಸುತಿದ್ದೇವೆ ಎಂದು ತಿಳಿಸಿದ್ದಾರೆ. ಸೂತ್ರಧಾರಿ ಹಾಗೂ ಭೀಷ್ಮನಾಗಿ ಸಿ.ಎನ್‌.ಗಾಯಿತ್ರಿ, ಒಂದನೇ ಕೃಷ್ಣ ಪಾತ್ರದಲ್ಲಿ ಎಚ್‌.ಎ.ಪುಷ್ಪ, ಎರಡನೇ ಕೃಷ್ಣ ಪಾತ್ರದಲ್ಲಿ ಲೀಲಾ, ಧರ್ಮರಾಯ ಹಾಗೂ ವಿದುರ ಪಾತ್ರದಲ್ಲಿ ರತ್ನ, ಭೀಮನ ಪಾತ್ರದಲ್ಲಿ ಡಾ.ಬಿ.ಕೆ.ಸುನಂದ, ಅರ್ಜುನ ಪಾತ್ರದಲ್ಲಿ ಎಂ.ವಿ.ವನಜಾ, ಅಭಿಮನ್ಯು ಪಾತ್ರದಲ್ಲಿ ಮಂಜುಳ, ದುರ್ಯೋಧನ ಪಾತ್ರದಲ್ಲಿ ಎಸ್‌.ಡಿ.ಪಾರ್ವತಮ್ಮ, ಎರಡನೇ ದುರ್ಯೋಧನ ಪಾತ್ರದಲ್ಲಿ ಮಂಡ್ಯ ನೆಲ್ಲೂರ್‌ ಮಹಾದೇವಮ್ಮ, ದುಶ್ಯಾಸನ ಪಾತ್ರದಲ್ಲಿ ಎಂ.ಎಚ್‌.ಶ್ಯಾಮಲ, ಸೈಂದವ ಪಾತ್ರದಲ್ಲಿ ಆರ್‌.ಪ್ರೇಮ, ಶಕುನಿ ಪಾತ್ರದಲ್ಲಿ ಜಯಲಕ್ಷ್ಮಿ, ಕರ್ಣನ ಪಾತ್ರದಲ್ಲಿ ಲಕ್ಷ್ಮಿದೇವಮ್ಮ, ಗುರು ದ್ರೋಣನ ಪಾತ್ರದಲ್ಲಿ ಸಾವಿತ್ರಮ್ಮ, ನೃತ್ಯ ಹೇಮಂತ, ಎರಡನೇ ನೃತ್ಯ ಟಿ.ಆರ್‌.ಕಲ್ಪನಾ ಹೀಗೆ ಮಹಿಳೆಯರೇ ಎಲ್ಲಾ ಪಾತ್ರದಲ್ಲೂ ಅಭಿನಯಿಸುತ್ತಿರುವುದು ಈ ನಾಟಕದ ವಿಶೇಷವಾಗಿದೆ ಎಂದರು. ಅಂಗನವಾಡಿ ಕಾರ್ಯಕರ್ತೆ ಬಿ.ಕೆ.ಸುನಂದ ಮಾತನಾಡಿ ಮಹಿಳಾ ಕಲಾವಿದರನ್ನು ಪೋಷಿಸಿ ಬೆಳೆಸುವಲ್ಲಿ ಗಿರಿ ಸಿದ್ದೇಶ್ವರ ಮಠದ ಶ್ರೀಗಳ ಪಾತ್ರ ಬಹುಮುಖ್ಯವಾಗಿದೆ ಎಂದರಲ್ಲದೆ ಶಾಸಕ ಸುರೇಶ್‌ ಬಾಬು, ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಚಲನಚಿತ್ರ ಹಿರಿಯ ನಟರು ಹಾಗೂ ಕಲಾವಿದರು ಆಗಮಿಸಲಿದ್ದಾರೆ ಎಂದು ತಿಳಿಸಿದರು.