ರೋಗಿಗಳಿಗೆ ಲಯನ್ಸ್‌ನಿಂದ ಆಹಾರ ಕಿಟ್‌ ವಿತರಣೆ

| Published : Oct 01 2025, 01:00 AM IST

ರೋಗಿಗಳಿಗೆ ಲಯನ್ಸ್‌ನಿಂದ ಆಹಾರ ಕಿಟ್‌ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಚ್. ರಮೇಶ್ ಹಾಗೂ ಕಾರ್ಯದರ್ಶಿ ಸಿ. ಶಿವಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರೋಗಿಗಳಿಗೆ ತಲಾ ರು. ೧೦೦೦ ಮೌಲ್ಯದ ಒಟ್ಟು ೯ ಕಿಟ್‌ಗಳನ್ನು ಹಸ್ತಾಂತರಿಸಲಾಯಿತು. ಜೊತೆಗೆ ಬಳಲುತ್ತಿರುವ ರೋಗಿಗೆ ಒಂದು ವ್ಹೀಲ್‌ಚೇರ್‌ ಸಹ ನೀಡಲಾಯಿತು. ಈ ಕಾರ್ಯದ ವೈಶಿಷ್ಟ್ಯವೆಂದರೆ, ನಾಲ್ಕು ಫಲಾನುಭವಿಗಳ ಮನೆಗಳಿಗೆ ಸ್ವತಃ ತೆರಳಿ ಅವರ ಆರ್ಥಿಕ ಹಾಗೂ ಆರೋಗ್ಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನೆರವು ನೀಡಿದದ್ದು. ಇದರಿಂದಾಗಿ ನೀವು ಒಬ್ಬರಲ್ಲ, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ನೇರವಾಗಿ ತಲುಪಿಸಲು ಸಾಧ್ಯವಾಯಿತು.

ಕನ್ನಡಪ್ರಭ ವಾರ್ತೆ ಹಾಸನ

ಲಯನ್ಸ್ ಕ್ಲಬ್ ಹಾಸನ ತಾಲೂಕಿನ ವತಿಯಿಂದ ಉಪಶಮನ ಆರೈಕೆ ಕಾರ್ಯಕ್ರಮದ ಅಂಗವಾಗಿ ಗಂಭೀರ ಕಾಯಿಲೆಗಳಿಂದ ನರಳುತ್ತಿರುವ 9 ಮಂದಿಗೆ ದವಸ-ಧಾನ್ಯದ ಕಿಟ್‌ಗಳು ಹಾಗೂ ವ್ಹೀಲ್‌ಚೇರ್ ವಿತರಿಸಲಾಯಿತು.

ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಚ್. ರಮೇಶ್ ಹಾಗೂ ಕಾರ್ಯದರ್ಶಿ ಸಿ. ಶಿವಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರೋಗಿಗಳಿಗೆ ತಲಾ ರು. ೧೦೦೦ ಮೌಲ್ಯದ ಒಟ್ಟು ೯ ಕಿಟ್‌ಗಳನ್ನು ಹಸ್ತಾಂತರಿಸಲಾಯಿತು. ಜೊತೆಗೆ ಬಳಲುತ್ತಿರುವ ರೋಗಿಗೆ ಒಂದು ವ್ಹೀಲ್‌ಚೇರ್‌ ಸಹ ನೀಡಲಾಯಿತು. ಈ ಕಾರ್ಯದ ವೈಶಿಷ್ಟ್ಯವೆಂದರೆ, ನಾಲ್ಕು ಫಲಾನುಭವಿಗಳ ಮನೆಗಳಿಗೆ ಸ್ವತಃ ತೆರಳಿ ಅವರ ಆರ್ಥಿಕ ಹಾಗೂ ಆರೋಗ್ಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನೆರವು ನೀಡಿದದ್ದು. ಇದರಿಂದಾಗಿ ನೀವು ಒಬ್ಬರಲ್ಲ, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ನೇರವಾಗಿ ತಲುಪಿಸಲು ಸಾಧ್ಯವಾಯಿತು.

ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷರು, ಈ ಸಹಾಯವು ಕೇವಲ ದವಸಧಾನ್ಯ ಮಾತ್ರವಲ್ಲ, ರೋಗಿಗಳಿಗೆ ಬದುಕಲು ಬೇಕಾದ ಭರವಸೆ, ಧೈರ್ಯ ಮತ್ತು ಮಾನವೀಯತೆಯ ಪಾಠವಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ನಿಸ್ವಾರ್ಥ ಸೇವಾ ಚಟುವಟಿಕೆಗಾಗಿ ಸ್ಥಳೀಯ ಸಂಸ್ಥೆಗಳಾದ ಎಸ್‌ವೈಎಂ ಪ್ರತಿನಿಧಿಗಳು ಕೃತಜ್ಞತೆ ಸಲ್ಲಿಸಿದರು. ಲಯನ್ಸ್ ಕ್ಲಬ್ ಕೈಗೊಂಡಿರುವ ಈ ಹೆಜ್ಜೆ ಸಮಾಜಕ್ಕೆ ಮಾದರಿಯಾಗಿದೆ. ಇಂತಹ ಕಾರ್ಯಗಳು ಇನ್ನೂ ಅನೇಕರನ್ನು ದಯೆ, ಸಹಾನುಭೂತಿ ಮತ್ತು ಸೇವಾಭಾವನೆಯ ಹಾದಿಯಲ್ಲಿ ನಡೆಯಲು ಸ್ಪೂರ್ತಿಗೊಳಿಸಲಿ” ಎಂದು ಶುಭಕೋರಿದರು.