ದಂಡಿಗನಹಳ್ಳಿ ಹೋಬಳಿ ಕುಂದೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರಾದ ಕರಡೇವು ಡಿ. ಎಲ್. ಮಧುರವರು ಚುನಾಯಿತರಾದರು. ಉಪಾಧ್ಯಕ್ಷರಾಗಿ ಜಕ್ಕೇನಹಳ್ಳಿ ಗ್ರಾಮದ ನಂಜಮ್ಮನವರು ಆಯ್ಕೆಯಾದರು. ಚುನಾವಣೆಯಲ್ಲಿ ಎಂಟು ಮತಗಳನ್ನು ಪಡೆದು ಡಿ ಎಲ್ ಮಧು ಅಧ್ಯಕ್ಷರಾಗಿ ಮತ್ತು ೯ ಮತಗಳನ್ನು ಪಡೆದ ನಂಜಮ್ಮನವರು ಉಪಾಧ್ಯಕ್ಷರಾಗಿ ಚುನಾವಣೆಯಲ್ಲಿ ಜಯ ಸಾಧಿಸಿದರು. ಚುನಾವಣಾಧಿಕಾರಿಗಳಾಗಿ ತಾಲೂಕು ಪಂಚಾಯಿತಿ ನಿರ್ವಹಣಾಧಿಕಾರಿಯಾದ ಜಿ ಆರ್ ಹರೀಶ್ ಕಾರ್ಯನಿರ್ವಹಿಸಿದ್ದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ತಾಲೂಕಿನ ದಂಡಿಗನಹಳ್ಳಿ ಹೋಬಳಿ ಕುಂದೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರಾದ ಕರಡೇವು ಡಿ. ಎಲ್. ಮಧುರವರು ಚುನಾಯಿತರಾದರು. ಉಪಾಧ್ಯಕ್ಷರಾಗಿ ಜಕ್ಕೇನಹಳ್ಳಿ ಗ್ರಾಮದ ನಂಜಮ್ಮನವರು ಆಯ್ಕೆಯಾದರು.ಕುಂದೂರು ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿದ್ದ ದೇವೇಗೌಡರ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷರಾಗಿದ್ದ ಜಯಮ್ಮರವರ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿದ್ದು, ಈ ದಿನ ನಡೆದ
ಕುಂದೂರು ಗ್ರಾಮ ಪಂಚಾಯಿತಿ ಪಿಡಿಒ ಅರುಣ್ ಕುಮಾರ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಡಿ ಎಲ್ ಮಧು, ಉಪಾಧ್ಯಕ್ಷರಾದ ನಂಜಮ್ಮ, ಸಾತೇನಹಳ್ಳಿ ಬಿಎಸ್‌ಎಸ್ ಮಾಜಿ ಅಧ್ಯಕ್ಷರು ನೆಟ್ಟೆಕೆರೆ ನಾಗರಾಜು, ಉಪದಯಪುರ ಪಿಎಸ್‌ಎಸ್ ಅಧ್ಯಕ್ಷರು ಬಳದರೆ ಅನಂತಮೂರ್ತಿ, ಪುನರ್ವಿಕ ಶೋರೂಮ್‌ನ ಮಾಲೀಕರಾದ ನವೀನ್, ಜೆಡಿಎಸ್ ಮುಖಂಡ ದೇವರಾಜೇಗೌಡ, ಆರ್.ಎಂ.ಸಿ. ಮಾಜಿ ನಿರ್ದೇಶಕರಾದ ಸತೀಶ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ರವಿ ಗ್ಯಾರಹಳ್ಳಿ, ರವೀಶ್, ಮಾಜಿ ತಾಲೂಕು ಪಂಚಾಯತಿ ಸದಸ್ಯರು ದೇವೇಗೌಡ, ಗ್ಯಾರಹಳ್ಳಿ ದೇವರಾಜೇಗೌಡ, ಸತೀಶ್ ದೊಡ್ಡ ಕರಡೇವು, ಜೆಡಿಎಸ್ ಯುವ ಮುಖಂಡರಾದ ಅಂಕೆನಹಳ್ಳಿ ಮಹೇಶ್, ಆರ್‌ಎಂಸಿ ಮಾಜಿ ನಿರ್ದೇಶಕರು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕುಂದೂರು ಹಾಗೂ ಹಾಲಿ ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಇತರರು ಹಾಜರಿದ್ದರು.