ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆಯಾಗಲಿ

| Published : Apr 09 2024, 12:47 AM IST

ಸಾರಾಂಶ

ನಿಮ್ಮ ಮನೆಯಲ್ಲಿ ಇದ್ದು, ನಿಮ್ಮ ಉರಿನ ಕೆಲಸ ಮಾಡಿ ಉತ್ತಮ ಆದಾಯ ಸರ್ಕಾರದಿಂದ ಪಡೆದು ನೆಮ್ಮದಿ ಜೀವನ ನಡೆಸಿರಿ

ಕನ್ನಡಪ್ರಭ ವಾರ್ತೆ ಇಳಕಲ್ಲ

ಉದ್ಯೋಗ ಖಾತ್ರಿ ಸರ್ಕಾರ ಬಡವರಿಗಾಗಿ ಮಾಡಿದ ಯೋಜನೆ. ನಿಮ್ಮ ಗ್ರಾಮದಲ್ಲೆ ದುಡಿದು ಉತ್ತಮ ಆದಾಯ ಪಡೆಯಲು ಈ ಯೋಜನೆಯ ಸದುಪಯೋಗ ಪಡೆಯಿರಿ ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮುರಳಧರ ದೇಶಪಾಂಡೆ ತಿಳಿಸಿದರು.

ತಾಲೂಕಿನ ಹಿರೇಒತಗೇರಿ ಗ್ರಾಮದ ಗ್ರಾ.ಪಂ ಕಾರ್ಯಲಯದಲ್ಲಿ ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ ಅಭಿಯಾನಕ್ಕೆ ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಸ್ಥರು ಜಾಬ್‌ ಕಾರ್ಡ್‌ಗಳನ್ನು ಅಪ್ಡೇಡ್‌ ಮಾಡುವ ಹಾಗು ಜಾಬ್‌ ಕಾರ್ಡ್‌ ಮಾಹಿತಿ ನೀಡಿದರು. ಕೆಲಸಕ್ಕಾಗಿ ವಲಸೆ ಯಾಕೆ ಹೋಗುತ್ತೀರಿ? ನಿಮ್ಮ ಮನೆಯಲ್ಲಿ ಇದ್ದು, ನಿಮ್ಮ ಉರಿನ ಕೆಲಸ ಮಾಡಿ ಉತ್ತಮ ಆದಾಯ ಸರ್ಕಾರದಿಂದ ಪಡೆದು ನೆಮ್ಮದಿ ಜೀವನ ನಡೆಸಿರಿ ಎಂದು ಮನವಿ ಮಾಡಿದರು.

ಮತ್ತು ಸಭೆಗೆ ಆಗಮಿಸಿದ ಎಲ್ಲ ಗ್ರಾಮಸ್ಥರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ನರೇಗಾ ಯೋಜನೆಯಲ್ಲಿ ಕೂಲಿ ಮೊತ್ತ ಪಡೆಯಲು ನಿರ್ವಹಿಸ ಬೇಕಾದ ಕೆಲಸ, ಹಾಗು ಕೆಲಸದ ಸ್ಥಳಗಳಲ್ಲಿ ಸಿಗುವ ಸೌಲಭ್ಯಗಳ ಕುರಿತು ಅರಿವು ಮೂಡಿಸಲಾಯಿತು. ನರೇಗಾ ಯೋಜನೆ ಅಡಿ ಕೆಲಸಕ್ಕೆ ಬರುವ ಕಾರ್ಮಿಕರಿಂದ ಫಾರ್ಮ್‌ ನಂ.೬ನೀಡಿ ಉದ್ಯೋಗಕ್ಕೆ ಹಾಜರಾಗುವಂತೆ ಆದೇಶಿಸಿದರು. ೩೬೨ ಜನ ಕಾರ್ಮಿಕರು ಉದ್ಯೋಗಕ್ಕೆ ಬರುವ ಫಾರ್ಮ್ ಬರ್ತಿ ಮಾಡಿಕೊಟ್ಟರು. ಈ ಎಲ್ಲ ಕಾರ್ಮಿಕರಿಗೆ ಒಂದು ದಿನದ ಕೆಲಸಕ್ಕೆ ಸರ್ಕಾರ ₹೩೪೯ ಕೂಲಿ ಕೊಡುವಂತೆ ಸರ್ಕಾರ ಆದೇಶ ಮಾಡಿದೆ ಎಂದು ಸಭೆಗೆ ತಿಳಿಸಿದರು. ಕಾರ್ಯಕ್ರಮದ ನಂತರ ಗ್ರಾಮದ ಪ್ರತಿ ಮನೆಗೆ ತೆರಳಿ ಕೂಲಿಕಾರರಿಂದ ಕೂಲಿ ಬೇಡಿಕೆ ಮಾಹಿತಿ ಪಡೆದರು.