‘ನಗರಸಭೆಯ ಲೆಕ್ಕ ಸದಸ್ಯರಿಗೆ ತೋರಿಸುತ್ತಿಲ್ಲ’

| Published : Oct 29 2024, 01:03 AM IST

ಸಾರಾಂಶ

ನಗರದ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ನಡೆಯುತ್ತಿವೆ. ವೇಗವಾಗಿ ಬೆಳೆಯುತ್ತಿರುವ ನಗರದ ಬೆಳವಣಿಗೆಗೆ ತಕ್ಕಂತೆ ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ, ನಗರಸಭೆಗೆ ಸಂಬಂಧಪಟ್ಟ ಯಾವುದೇ ದೂರುಗಳಿದ್ದಲ್ಲಿ ಲಿಖಿತ ರೂಪದಲ್ಲಿ ನೀಡಿದರೆ, ತಕ್ಷಣ ಪರಿಹರಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ನಗರಸಭೆ ಯಾವುದೇ ಖರ್ಚು ವೆಚ್ಚಗಳ ಲೆಕ್ಕವನ್ನು ಸದಸ್ಯರಿಗೆ ನೀಡುತ್ತಿಲ್ಲ, ಅಜೆಂಡಾಗಳನ್ನು ನಮ್ಮ ಗಮನಕ್ಕೆ ತರದೇ ಅನುಮೋದನೆ ನೀಡುತ್ತಿದ್ದಾರೆ, ಹಣಕಾಸು ವ್ಯವಹಾರವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತಿಲ್ಲ, ಇದರಿಂದ ಸಾರ್ವಜನಿಕರ ಹಣ ಪೋಲಾಗುತ್ತಿದೆ ಎಂದು ನಗರಸಭಾ ಸದಸ್ಯರು ಆರೋಪಿಸಿದರು.

ನಗರದ ನಗರಸಭೆ ಆವರಣದಲ್ಲಿ ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ಎಸ್ ಸಿ ಮತ್ತು ಎಸ್ ಟಿ ಮಕ್ಕಳಿಗೆ ಲ್ಯಾಪ್‌ಟಾಪ್‌ ವಿತರಣೆ ಸರಿಯಾಗಿ ಆಗಿಲ್ಲ, ಇಂದಿರಾ ಕ್ಯಾಂಟೀನ್ ದುರಸ್ತಿಗೆ ಹಣ ಮಾತ್ರ ಖರ್ಚುಗಿದೆ, ಆದರೆ ಅಲ್ಲಿ ಎಲ್ಲವೂ ಸರಿಯಿಲ್ಲ ಎಂದರು.

ಲಿಖಿತ ರೂಪದಲ್ಲಿ ನೀಡಿದರೆ ಕ್ರಮ

ಶಾಸಕ ಕೆ ಎಚ್ ಪುಟ್ಟಸ್ವಾಮಿ ಗೌಡ ಮಾತನಾಡಿ, ನಗರದ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ನಡೆಯುತ್ತಿವೆ. ವೇಗವಾಗಿ ಬೆಳೆಯುತ್ತಿರುವ ನಗರದ ಬೆಳವಣಿಗೆಗೆ ತಕ್ಕಂತೆ ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ, ನಗರಸಭೆಗೆ ಸಂಬಂಧಪಟ್ಟ ಯಾವುದೇ ದೂರುಗಳಿದ್ದಲ್ಲಿ ಲಿಖಿತ ರೂಪದಲ್ಲಿ ನೀಡಿದರೆ, ತಕ್ಷಣ ಪರಿಹರಿಸುವುದಾಗಿ ತಿಳಿಸಿದರು.ನಗರಸಭೆ ಪೌರಾಯುಕ್ತೆ ಡಿ ಎಂ ಗೀತಾ ಮಾತನಾಡಿ, ನಗರಸಭೆಯಲ್ಲಿ ನಡೆಯುತ್ತಿರುವ ಎಲ್ಲಾ ಕೆಲಸಗಳು ಪಾರದರ್ಶಕತೆಯಿಂದ ಹಾಗೂ ಸರ್ಕಾರದ ನಿಯಮಗಳ ಪ್ರಕಾರ ನಡೆಯುತ್ತಿವೆ ಎಂದು ಅವರು ವಿವರಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣಪ್ಪ, ಉಪಾಧ್ಯಕ್ಷ ಫರೀದ್, ಸದಸ್ಯರಾದ, ಕಲೀಮ್ ಉಲ್ಲಾ,ರಮೇಶ್, ಶ್ರೀರಾಮಪ್ಪ, ಮಂಜುಳಾರಾಮಾಂಜಿ , ಪದ್ಮಾವತಮ್ಮ, ಮೊಬೈನ್ ತಾಜ್, ಪುಣ್ಯವತಿ ಜಯಣ್ಣ, ಗೋಪಿನಾಥ್, ರಮೇಶ್, ಸಾವಿತ್ರಮ್ಮ, ಗಾಯತ್ರಿ ಬಸವರಾಜು, ಭಾಗ್ಯಮ್ಮ, ರಾಜೇಶ್ವರಿ ಮೈಲಾರಿ, ಗೋಪಾಲಪ್ಪ, ಸಪ್ತಗಿರಿ,ಅಮರ್ನಾಥ್, ಗಿರೀಶ್, ರೂಪ ಅನಂತರಾಜು, ವೆಂಕಟ ರೆಡ್ಡಿ, ಮತ್ತು ಅಧಿಕಾರಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.