(ಮಿಡಲ್‌) ಸೃಜನೆಶೀಲ ಬರವಣಿಗೆ ಅಭಿವ್ಯಕ್ತಿಯ ರೂಪ

| Published : Aug 12 2024, 12:45 AM IST

ಸಾರಾಂಶ

ತುರ್ವಿಹಾಳ ಸಮೀಪದ ಕಲ್ಮಂಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ಸೃಜನಾತ್ಮಕ ಬರವಣಿಗೆಯ ಕಾರ್ಯಗಾರ ಜರುಗಿತು.

ಕನ್ನಡಪ್ರಭ ವಾರ್ತೆ ತುರ್ವಿಹಾಳ

ಸೃಜನಶೀಲ ಬರವಣಿಗೆಯು ಯಾವಾಗಲೂ ನಂಬಲಾಗದ ಅಭಿವ್ಯಕ್ತಿಯ ರೂಪವಾಗಿದೆ ಎಂದು ತಿಡಿಗೋಳ ಶಿಕ್ಷಕ ಕೊಟ್ರೇಶ ಬಿ. ಅಭಿಪ್ರಾಯಪಟ್ಟರು.

ತಾಲೂಕಿನ ಕಲಮಂಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ನೇಹಸಿರಿ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸೃಜನಾತ್ಮಕ ಬರವಣಿಗೆಯ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

ಮಗು ಪರಿಸ್ಥಿತಿ, ಘಟನೆ ಅಥವಾ ಆಲೋಚನೆಯನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸುವಾಗ ವಿವಿಧ ದೃಷ್ಟಿಕೋನಗಳಿಂದ ವಿಶ್ಲೇಷಿಸಲು ಕಲಿಯುತ್ತದೆ. ಸೃಜನಶೀಲ ಬರವಣಿಗೆ ಬಳಸುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ಷಮತೆ ಮತ್ತು ಸ್ಥಿತಿಸ್ಥಾಪಕತ್ವ ಹೆಚ್ಚಿಸಬಹುದು. ಪೂರ್ಣಗೊಳ್ಳದ ದೊಡ್ಡ ಗುರಿಗಳಿಗಿಂತ ಚಿಕ್ಕ ಗುರಿಗಳನ್ನು ಸ್ಥಿರವಾಗಿ ಪೂರ್ಣಗೊಳಿಸುವ ಚಟುವಟಿಕೆಯು ಒಬ್ಬರ ಮೆದುಳಿನಲ್ಲಿ ಹೆಮ್ಮೆ ಉಂಟುಮಾಡುತ್ತದೆ ಈ ಹೆಮ್ಮೆಗಾಗಿ ಮಕ್ಕಳು ಸೃಜನಶೀಲ ಬರವಣಿಗೆ ಕಡೆಗೆ ಮುಖಮಾಡಬೇಕಿದೆ ಎಂದು ತಿಳಿಸಿದರು.

ಕಾರ್ಯಗಾರದಲ್ಲಿ ಮಕ್ಕಳಿಗಾಗಿ ಚಿತ್ರ ವೀಕ್ಷಿಸಿ ಕಥೆ ಕಟ್ಟುವುದು, ಅಪೂರ್ಣ ಕಥೆಗಳನ್ನು ಅವರ ಕಲ್ಪನೆಯಂತೆ ಅಂತಿಮ ಗೊಳಿಸಿವುದು, ಒಂದು ವಾಕ್ಯದಿಂದ ಕಥೆ ಕಟ್ಟುತ್ತಾ ಮುಕ್ತಾಯಮಾಡುವುದು ಸೇರಿದಂತೆ ಚುಟುಕು ರಚನೆ, ಕಿರು ಚನಚಿತ್ರ ವೀಕ್ಷಣೆಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರು ಮಲ್ಲಪ್ಪ ಬಾದರ್ಲಿ, ಶಿಕ್ಷಕರಾದ ರವಿಚಂದ್ರ, ಸುಭಾಷ ಚಂದ್ರ ಪತ್ತಾರ, ಬಸವರಾಜ, ರೂಪಾ ಕರಣಿ ಮಂಜುನಾಥ, ಟ್ರಸ್ಟ್‌ನ ಅಯ್ಯನಗೌಡ, ವಿಶ್ವನಾಥ, ಅಭಿಷೇಕ ಶಿವಪ್ರಸಾದ ಉಪಸ್ಥಿತರಿದ್ದರು.