ಸಾರಾಂಶ
ಬೇವಿನಕೊಪ್ಪ ಮತ್ತು ಸಂಗೊಳ್ಳಿ ಮಾರ್ಗ ಮಧ್ಯೆ ರಾಯಣ್ಣ ಸೇತುವೆ ನಿರ್ಮಾಣಕ್ಕೆ ಎಚ್.ಕೆ.ಪಾಟೀಲರ ಪಾತ್ರ ದೊಡ್ಡದು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ವಿಜಯಾನಂದ ಶ್ರೀಗಳು ಪುಟ್ಟ ಬೇವಿನಕೊಪ್ಪ ಗ್ರಾಮದಲ್ಲಿ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳ ಜೊತೆಗೆ ಜನರ ಆರೋಗ್ಯದ ದೃಷ್ಟಿಯಿಂದ ಆರ್ಯುವೇದಿಕ ಆಸ್ಪತ್ರೆ ಸ್ಥಾಪಿಸಿರುವ ಕಾರ್ಯ ಕಾರ್ಯ ಶ್ಲಾಘನೀಯ. ಈ ನಿಟ್ಟಿನಲ್ಲಿ ಅವರಿಗೆ ಸಂಪೂರ್ಣ ಸಹಕಾರ ನಿಡುವುದಲ್ಲದೇ ಭಕ್ತರ ಬೇಡಿಕೆಯಂತೆ ಯಾತ್ರಿ ನಿವಾಸ ಶಾಸಕರೊಂದಿಗೆ ಚರ್ಚಿಸಿ ಮಂಜೂರು ಮಾಡುವುದಾಗಿ ಸಚಿವ ಎಚ್.ಕೆ.ಪಾಟೀಲ ಭರವಸೆ ನೀಡಿದರು.ಅವರು ಶನಿವಾರ ತಾಲೂಕಿನ ಬೇವಿನಕೊಪ್ಪ ಗ್ರಾಮದ ಆನಂದಾಶ್ರಮದಲ್ಲಿ ನಡೆದ ನೂತನ ನಿತ್ಯಕಾರುಣ್ಯ ನಿಲಯದ ನವಗ್ರಹ ಶಾಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಆನಂದಾಶ್ರಮದ ವಿಜಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಬೇವಿನಕೊಪ್ಪ ಮತ್ತು ಸಂಗೊಳ್ಳಿ ಮಾರ್ಗ ಮಧ್ಯೆ ರಾಯಣ್ಣ ಸೇತುವೆ ನಿರ್ಮಾಣಕ್ಕೆ ₹40 ಕೋಟಿ ಮಂಜೂರು ಮಾಡುವಲ್ಲಿ ಎಚ್.ಕೆ.ಪಾಟೀಲರ ಪಾತ್ರ ಹಿರಿದಾಗಿದೆ. ಅಲ್ಲದೇ ಅಮಟೂರ ಗ್ರಾಮದಲ್ಲಿ ವೀರಕೇಸರಿ ಅಮಟೂರ ಬಾಳಪ್ಪ ಸ್ಮಾರಕ ಭವನ ನಿರ್ಮಿಸುವಲ್ಲಿ ಅವರ ಕೊಡುಗೆ ಅಪಾರ. ಈ ನಿಟ್ಟಿನಲ್ಲಿ ಅವರಿಗೆ ಈ ಗ್ರಾಮಸ್ಥರ ಪರ ಕೃತಜ್ಞತೆ ಸಲ್ಲಿಸಿದರು.
ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ಸೋಮನಗೌಡ ಪಾಟೀಲ, ಮಲ್ಲಪ್ಪ ಮುರಗೋಡ, ಮಹಾಂತೇಶ ಮರೇಕ್ಕನವರ, ರಮೇಶ ಜಂಗಲ, ಮಲ್ಲಿಕಾರ್ಜುನ ಪೂಜೇರಿ ಹಾಗೂ ನೂರಾರು ಗ್ರಾಮಸ್ಥರು ಇದ್ದರು. 16ಬಿಎಲ್‌ಎಚ್2