ಸಾರಾಂಶ
ಕುಲದಲ್ಲಿ ಕೀಳ್ಯಾವುದೋ ಚಲನಚಿತ್ರ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದರು. ಪರಭಾಷಾ ಸಿನಿಮಾಗಳಂತೆ ಕನ್ನಡ ಸಿನಿಮಾಗಳನ್ನು ಜನ ನೋಡಿ ಆನಂದಿಸುತ್ತಿದ್ದಾರೆ. ಹಾಸನ ಜಿಲ್ಲೆ ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿದೆ. ಈ ಚಿತ್ರದ ಹಾಡುಗಳು ಸಕಲೇಶಪುರ ಹಾಗೂ ರಾಮನಗರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಚಿತ್ರೀಕರಣಗೊಂಡಿದೆ. ರಾಮಾಚಾರಿ ಧಾರವಾಹಿಯ ಖ್ಯಾತಿಯ ನಟಿ ಮೌನ ಗುಡ್ಡೆ ಮನೆ ಈ ಚಿತ್ರದ ನಾಯಕಿ. ಈ ಚಿತ್ರಕ್ಕೆ ಕಥೆ ಸಾಹಿತ್ಯ ಯೋಗರಾಜ್ ಭಟ್, ನಿರ್ದೇಶನ ರಾಮನಾರಾಯಣ, ದೊಡ್ಡ ತಾರಾ ಬಳಗ ಹೊಂದಿದೆ. ಪ್ರೇಕ್ಷಕರು ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಚಲನಚಿತ್ರವಾಗಿ ಮೂಡಿಬಂದಿರುವ ಕುಲದಲ್ಲಿ ಕೀಳ್ಯಾವುದೋ ಕನ್ನಡ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.ಹೋಬಳಿಯ ಹನುಮಂತಪುರ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ವೀರಾಂಜನೇಯ ಸ್ವಾಮಿಯ 2ನೇ ವರ್ಷದ ವಾರ್ಷಿಕೋತ್ಸವದಲ್ಲಿ ಆಯೋಜಿಸಿದ್ದ ಕುಲದಲ್ಲಿ ಕೀಳ್ಯಾವುದೋ ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುಲದಲ್ಲಿ ಕೀಳ್ಯಾವುದೋ ಚಲನಚಿತ್ರ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದರು. ಪರಭಾಷಾ ಸಿನಿಮಾಗಳಂತೆ ಕನ್ನಡ ಸಿನಿಮಾಗಳನ್ನು ಜನ ನೋಡಿ ಆನಂದಿಸುತ್ತಿದ್ದಾರೆ. ಹಾಸನ ಜಿಲ್ಲೆ ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿದೆ. ಈ ಚಿತ್ರದ ಹಾಡುಗಳು ಸಕಲೇಶಪುರ ಹಾಗೂ ರಾಮನಗರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಚಿತ್ರೀಕರಣಗೊಂಡಿದೆ.
ಕನ್ನಡ ಸಿನಿಮಾ ರಂಗವು ತನ್ನದೇ ಆದ ಹೆಸರು ಗಳಿಸಿದೆ ಕನ್ನಡ ಸಿನಿಮಾಗಳಿಗೆ ಮಹತ್ವ ತಂದುಕೊಟ್ಟ ಹಿರಿಮೆ ಡಾ. ರಾಜಕುಮಾರ್ ಅವರಿಗೆ ಸಲ್ಲುತ್ತದೆ. ನಟರಾಗಿ ಕನ್ನಡಪರ ಹೋರಾಟದಲ್ಲಿ ಸಂಘಟಕರಾಗಿ ಪರಭಾಷೆಯಲ್ಲಿ ನಟಿಸದೆ ಕನ್ನಡ ಸಿನಿಮಾಗಳಿಗಾಗಿ ಹಲವು ತ್ಯಾಗ ಮಾಡಿದವರು ಅವರ ಆದರ್ಶಗಳನ್ನು ಪಾಲಿಸೋಣ. ಈ ಚಲನಚಿತ್ರ ಸುಂದರವಾಗಿ ತೆರೆಗೆ ಬರಲು ಸಂತೋಷ್ ಕುಮಾರ್ ವಿದ್ಯಾಶ್ರೀರವರು ನಿರ್ಮಾಪಕರಾಗಿದ್ದಾರೆ. ರೈತನ ಮಗ ಮಡೆನೂರು ಮನು ರಂಗಭೂಮಿಯಿಂದ ಬಂದು ಕಾಮಿಡಿ ಕಿಲಾಡಿಗಳ ಮೂಲಕ ರಾಜ್ಯಾದ್ಯಂತ ಜನರ ಮನಸ್ಸನ್ನು ಗೆದ್ದು ಈ ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ. ರಾಮಾಚಾರಿ ಧಾರವಾಹಿಯ ಖ್ಯಾತಿಯ ನಟಿ ಮೌನ ಗುಡ್ಡೆ ಮನೆ ಈ ಚಿತ್ರದ ನಾಯಕಿ. ಈ ಚಿತ್ರಕ್ಕೆ ಕಥೆ ಸಾಹಿತ್ಯ ಯೋಗರಾಜ್ ಭಟ್, ನಿರ್ದೇಶನ ರಾಮನಾರಾಯಣ, ದೊಡ್ಡ ತಾರಾ ಬಳಗ ಹೊಂದಿದೆ. ಪ್ರೇಕ್ಷಕರು ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ವಿದ್ಯಾಶ್ರೀ ಸಂತೋಷ್ ಕುಮಾರ್, ಮಡೆನೂರು ಮನು, ನಟಿ ಮೌನ ಗುಡ್ಡೆಮನೆ, ನಿರ್ದೇಶಕ ರಾಮನಾರಾಯಣ, ಶ್ರೀನಿವಾಸ್, ಡ್ರಾಗನ್ ಮಂಜು, ವಾಸು, ಶಿಕ್ಷಕ ಶಿವಣ್ಣ, ಜಗದೀಶ್, ಯೋಗಣ್ಣ, ಶ್ರೀನಿವಾಸ್, ಚೇತನ್, ಇತರರು ಹಾಜರಿದ್ದರು.