ಗುಂಡ್ಲುಪೇಟೆ: ತಾಲೂಕಿನ ಕಗ್ಗಳ ಗ್ರಾಮದಲ್ಲಿ ಮಾದರಿ ಗುಂಡ್ಲುಪೇಟೆ ಅಭಿಯಾನಕ್ಕೆ ಅಭಿಯಾನದ ರೂವಾರಿ ಡಾ.ಅಜಯ್ ಕುಮಾರ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ಗುಂಡ್ಲುಪೇಟೆ ಮಾದರಿಯಾಗಲು ಸಾಧ್ಯ. ಆರೋಗ್ಯ, ಶಿಕ್ಷಣ, ಮೂಲಭೂತ ಸೌಲಭ್ಯ ಸಮರ್ಪಕವಾಗಿ ದೊರೆತರೆ ಜನರ ಅಭಿವೃದ್ಧಿಯಾಗುತ್ತದೆ ಎಂದರು. ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸಲು, ಜನರೇ ಸ್ವತಃ ನಾಯಕತ್ವ ವಹಿಸಬೇಕು ಎಂದು ಸಲಹೆ ನೀಡಿದರು. ಗ್ರಾಮದ ಅಭಿವೃದ್ಧಿಗೆ ಗ್ರಾಮ ಸಮಿತಿಗಳು ರಚನೆಯಾಗಬೇಕು. ಇದು ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ಆದಾಗ ಮಾತ್ರ ಮಾದರಿ ಗುಂಡ್ಲುಪೇಟೆಯ ಕನಸು ನನಸಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಯೋಜನಾ ಮುಖ್ಯಸ್ಥ ಮಧು ಎನ್., ಗ್ರಾಮಸ್ಥರು, ಯೋಜನೆಯ ಸಿಬ್ಬಂದಿ ಹಾಜರಿದ್ದರು.