ಹೆಚ್ಚಿನ ಸಮಯ ಬಡವರ ಕೆಲಸಕ್ಕೆ ಮೀಸಲಿಡುವೆ

| Published : Apr 04 2024, 01:00 AM IST

ಸಾರಾಂಶ

ನನ್ನನ್ನು ಭೂ ನ್ಯಾಯಮಂಡಳಿ ಸದಸ್ಯರಾಗಿ ಆಯ್ಕೆ ಮಾಡಲು ಸಹಕರಿಸಿದ ಹಿತೈಸಿಗಳಿಗೆ ಮತ್ತು ಕಾಂಗ್ರೆಸ್ ಮುಖಂಡರಿಗೆ ಧನ್ಯವಾದ ತಿಳಿಸುತ್ತೇನೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ರಬಕವಿ ಬನಹಟ್ಟಿ ತಾಲೂಕಿನ ಭೂ ನ್ಯಾಯ ಮಂಡಳಿಯ ನೂತನ ಸದಸ್ಯರಾಗಿ ಆಯ್ಕೆಯಾದ ಸೈದಾಪುರ ಗ್ರಾಮದ ಕಾಂಗ್ರೆಸ್‌ ಮುಖಂಡ ವಿಠ್ಠಲ ಹೊಸಮನಿ ಅವರನ್ನು ಪಾಶ್ಚಾಪುರ ತೋಟದಲ್ಲಿ ಗ್ರಾಮಸ್ಥರು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಠ್ಠಲ ಹೊಸಮನಿ, ನನ್ನನ್ನು ಭೂ ನ್ಯಾಯಮಂಡಳಿ ಸದಸ್ಯರಾಗಿ ಆಯ್ಕೆ ಮಾಡಲು ಸಹಕರಿಸಿದ ಹಿತೈಸಿಗಳಿಗೆ ಮತ್ತು ಕಾಂಗ್ರೆಸ್ ಮುಖಂಡರಿಗೆ ಧನ್ಯವಾದ ತಿಳಿಸುತ್ತೇನೆ. ಈ ಜವಾಬ್ದಾರಿ ಇನ್ನೂ ಹೆಚ್ಚಿನ ಜನರಿಗೆ ನ್ಯಾಯ ಒದಗಿಸಲು ಅನುಮಾಡಿಕೊಟ್ಟಂತಾಗಿದೆ. ಇದರಿಂದ ಇನ್ನೂ ಹೆಚ್ಚಿನ ಸಮಯ ಬಡವರಿಗಾಗಿ ಮತ್ತು ರೈತರಿಗಾಗಿ ಮೀಸಲಿಡುತ್ತೇನೆ. ನಮ್ಮ ಮುಖಂಡರ ಸಲಹೆಯಂತೆ ಬಡವರ ಸೇವೆ ಮಾಡಿ, ನ್ಯಾಯಸಮ್ಮತವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ವಿಜಯಪುರ-ಬಾಗಲಕೋಟೆ ಕೆಎಂಎಫ್‌ ಮಾಜಿ ಅಧ್ಯಕ್ಷ ರಂಗನಗೌಡ ಪಾಟೀಲ ಮಾತನಾಡಿ, ಭೂ ನ್ಯಾಯ ಮಂಡಳಿಗೆ ಎ.ಸಿ ಅಧ್ಯಕ್ಷರು ಹಾಗೂ ತಹಸೀಲ್ದಾರ್‌ ಕಾರ್ಯದರ್ಶಿಯಾಗಿರುತ್ತಾರೆ. ನಾಲ್ಕು ಜನ ಸದಸ್ಯರಿರಲಿದ್ದು, ಅದರಲ್ಲಿ ನಮ್ಮೂರಿನ ವಿಠ್ಠಲ ಹೊಸಮನಿ ಸದಸ್ಯರಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಭೂ ವ್ಯಾಜ್ಯಗಳ ವಿಷಯಗಳಲ್ಲಿ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ನಿರ್ಣಯಗಳನ್ನು ತೆಗೆದುಕೊಂಡು ಅವರ ತೊಂದರೆ ನಿವಾರಣೆ ಮಾಡುವ ಕೆಲಸ ಇವರದ್ದಾಗಿದೆ. ಕಂದಾಯ ಇಲಾಖೆಯ ಭೂಮಿ ಹಂಚಿಕೆ ವ್ಯಾಜ್ಯಗಳನ್ನು ಸರಿಪಡಿಸುವ ಕೆಲಸ ಈ ಕಮಿಟಿಯದ್ದಾಗಿದೆ. ಎಲ್ಲ ಭಾಗದ ರೈತರು ಸಹ ತಮ್ಮ ಚಿಕ್ಕ ಪುಟ್ಟ ಸಮಸ್ಯೆಗಳಿದ್ದರೆ ಈ ಕಮಿಟಿ ವತಿಯಿಂದ ಬಗೆಹರಿಸಿಕೊಳ್ಳಬೇಕು ಎಂದರು.

ಸೈದಾಪುರ ಗ್ರಾಮದ ಹಿರಿಯರಾದ ಮಲ್ಲಪ್ಪ ಪಾಶ್ಚಾಪೂರ, ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಶ್ರೀಬಸವಣ್ಣೆಪ್ಪ ಬ್ಯಾಳಿ, ಶ್ರೀ ಶಿವಲಿಂಗೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಮುರಿಗೆಪ್ಪ ಗುಣದಾಳ, ಶ್ರೀ ಶಿವಲಿಂಗೇಶ್ವರ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಚಿನ್ನಪ್ಪ ಸಿ. ಬಾಯಪ್ಪಗೋಳ, ಪಿಕೆಪಿಎಸ್ ಮಾಜಿ ಸೆಕ್ರೆಟರಿ ಸುರೇಶ ಮಲಾಬದಿ, ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಲಕ್ಷ್ಮಣ ಉಳ್ಳಾಗಡ್ಡಿ, ನಾಗಪ್ಪ ಕೇತಗೋಡ, ಕೆಎಂಫ್ ಸೊಸೈಟಿಯ ಮಾಜಿ ಅಧ್ಯಕ್ಷ ಮಲ್ಲಪ್ಪ ಪಶ್ಚಾಪುರ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಬಸಪ್ಪ ಗುಣದಾಳ, ಅರ್ಜುನ ಪಶ್ಚಾಪುರ, ಶಿವಣಪ್ಪ ಮುತ್ತಪ್ಪಗೊಳ, ದುಂಡಪ್ಪ ಪಶ್ಚಾಪುರ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಉಮೇಶ ಪಶ್ಚಾಪುರ, ಶ್ರೀಶೈಲ್ ಬಾಗೋಜಿ , ಸೈದಾಪುರ ಗ್ರಾಮದ ಉಪಸ್ಥಿತರಿದ್ದರು.