‘ಪಟಾಕಿ ಬೇಡ, ದೀಪ ಹಚ್ಚಿ’

| Published : Oct 28 2024, 12:49 AM IST

ಸಾರಾಂಶ

ದೀಪಾವಳಿ ಜನರಿಗೆ ಬೆಳಕು ನೀಡಬೇಕು ಪಟಾಕಿ ಹಚ್ಚಿ ಪರಿಸರ ಹಾಳು ಮಾಡಿ, ಕತ್ತಲೆ ಕಡೆಗೆ ಹೋಗಬಾರದು. ಮಣ್ಣಿನ ದೀಪ ಬೆಳಗಿಸಿ ಹಬ್ಬ ಆಚರಿಸಿ. ಸರ್ಕಾರವೂ ಸಹ ಕೇವಲ ಹಸಿರು ಪಟಾಕಿ ಮಾತ್ರ ಹಚ್ಚಬೇಕು ದೀಪಾವಳಿ ದಿನದಂದು ಸಂಜೆ ಎಂಟರಿಂದ ಹತ್ತು ಗಂಟೆವರೆಗೂ ಮಾತ್ರ ಪಟಾಕಿ ಹಚ್ವಲು ಸರ್ಕಾರ ಅನುಮತಿ ನೀಡಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ದೀಪಾವಳಿ ಹೆಸರಿನಲ್ಲಿ ದೇಶಾದ್ಯಂತ ಕೋಟ್ಯಂತರ ರುಪಾಯಿಗಳ ವೆಚ್ಚದಲ್ಲಿ ಪಟಾಕಿ ಸುಡುವ ಕೆಟ್ಟ ಅಭ್ಯಾಸ ನಿಲ್ಲಿಸಿ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ತಡೆಯೋಣ. ಪರಿಸರ ಸಂರಕ್ಷಸೋಣ. ಅದಕ್ಕಾಗಿ ದೀಪ ಹಚ್ಚಿ, ಪಟಾಕಿ ಬೇಡ ಎನ್ನುವ ಆಂದೋಲನವನ್ನು ನಗರದಲ್ಲಿ ನಡೆಸಲಾಯಿತು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ ಮತ್ತು ಸಂಚಾರಿ ಪೊಲೀಸ್ ಠಾಣೆ ಹಾಗು ಆಟೋ ಚಾಲಕರ ಸಂಘ ಮತ್ತು ಮಾಲೀಕರ ಸಂಘ ಹಮ್ಮಿಕೊಂಡಿದ್ದ ಆಂದೋಲನದಲ್ಲಿ ನಗರದ ಜನತೆಗೆ ಉಚಿತವಾಗಿ ಮಣ್ಣಿನ ದೀಪ ಹಾಗು ಎಣ್ಣೆ ವಿತರಿಸಿ ಜಾಗೃತಿ ಮೂಡಿಸಲಾಯಿತು.

ಪರಿಸರಿ ಹಾಳು ಮಾಡಬೇಡಿ

ಕಾರ್ಯಕ್ರಮ ಆಯೋಜಿಸಿದ್ದ ಸಮಾನ ಮನಸ್ಕರ ಪಕೃತಿ ಸಂರಕ್ಷಣಾ ವೇದಿಕೆ ಗೌರವಾಧ್ಯಕ್ಷ ಹೋಟೆಲ್ ರಾಮಣ್ಣ ಮಾತನಾಡಿ, ದೀಪಾವಳಿ ಜನರಿಗೆ ಬೆಳಕು ನೀಡಬೇಕು ಪಟಾಕಿ ಹಚ್ಚಿ ಪರಿಸರ ಹಾಳು ಮಾಡಿ, ಕತ್ತಲೆ ಕಡೆಗೆ ಹೋಗಬಾರದು. ಈ ಕುರಿತು ಎಂಟತ್ತು ವರ್ಷಗಳಿಂದ ಜಾಗೃತಿ ಮೂಡಿಸುವ ಆಂಧೋಲನ ಮಾಡುತ್ತಾ ಬಂದಿದ್ದೇವೆ. ಈ ಆಂದೋಲದಿಂದ ಒಂದಷ್ಟು ಜನರಾದ್ರೂ ಪರಿವರ್ತನೆಯಾದರೆ ಸಾಕು ಅದೊಂದು ನಮ್ಮ ಪ್ರಯತ್ನಕ್ಕೆ ಸಿಕ್ಕ ಫಲ ಎಂದು ಸಂತೋಷಿಸುತ್ತೇವೆ ಎಂದರು. ಹಸಿರು ಪಟಾಕಿ ಬಳಸಿ

ರಾಜ್ಯ ಸರ್ಕಾರವೂ ಸಹ ಕೇವಲ ಹಸಿರು ಪಟಾಕಿ ಮಾತ್ರ ಹಚ್ಚಬೇಕು ದೀಪಾವಳಿ ದಿನದಂದು ಸಂಜೆ ಎಂಟರಿಂದ ಹತ್ತು ಗಂಟೆವರೆಗೂ ಮಾತ್ರ ಪಟಾಕಿ ಹಚ್ವಲು ಸರ್ಕಾರ ಅನುಮತಿ ನೀಡಿದೆ. ಭಾರಿ ಸದ್ದು ಮಾಡುವ ಪಟಾಕಿಗಳನ್ನು ನಿಷೇದಿಸಿದ್ದು, ಹಸಿರು ಪಟಾಕಿ ಮಾತ್ರ ಸಿಡಿಸಬೇಕು ಎಂದು ಸಂಚಾರಿ ಪೊಲೀಸ್ ಠಾಣಾ ಪಿಎಸ್‌ಐ ಮಂಜುಳ ಹೇಳಿದರು.

ಈ ವೇಳೆ ಪರಿಸರ ಪ್ರೇಮಿ ರಾಜ್ಯ ಪ್ರಶಸ್ತಿ ಪುರಸಕೃತ ಗುಂಪುಮರದ ಆನಂದ್,ಆಟೋ ಚಾಲಕರ ಸಂಘದ ಅಧ್ಯಕ್ಷ ಮೊಬೈಲ್ ಬಾಬು, ಇಬ್ರಾಹಿಂ ಕಲೀಲ್,ಸಮಾನ ಮನಸ್ಕರ ವೇದಿಕೆ ಸದಸ್ಯರಾ ಹೆನ್ರಿ ಪ್ರಸನ್ನ ಕುಮಾರ್, ಕೆ.ಎಸ್.ನಾರಾಯಣಸ್ವಾಮಿ ಮತ್ತಿತರರು ಇದ್ದರು.