ಭ್ರಷ್ಟಾಚಾರದ ವಿರುದ್ಧ ಯಾರೂ ಧ್ವನಿ ಎತ್ತುತ್ತಿಲ್ಲ

| Published : Feb 05 2025, 12:34 AM IST

ಭ್ರಷ್ಟಾಚಾರದ ವಿರುದ್ಧ ಯಾರೂ ಧ್ವನಿ ಎತ್ತುತ್ತಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು ೬೦ರ ದಶಕದಲ್ಲಿ ಬೆಂಗಳೂರು ಅಂತಹ ಪ್ರದೇಶದಲ್ಲಿ ಸೈಕಲ್‌ಗೆ ೨೫ ಪೈಸೆ ತೆರಿಗೆ ಹಾಕಿದಾಗ ಎಲ್ಲ ರಾಜಕೀಯ ಪಕ್ಷಗಳು ಬೀದಿಗೆ ಇಳಿದು ಆಕ್ರೋಶ ವ್ಯಕ್ತಪಡಿಸಿದ್ದರು, ಇವತ್ತು ಜನರ ಸೇವೆ ಹೆಸರಿನಲ್ಲಿ ದರೋಡೆ ಮಾಡುವವರ ವಿರುದ್ದ ಯಾವುದೇ ಆಕ್ರೋಶದ ಧ್ವನಿಯಿಲ್ಲವಾಗಿದೆ. ಕಮ್ಯೂನಿಸ್ಟ್ ಚಳವಳಿಯ ಕಟ್ಟಾಳುಗಳು ನಿರಂತರವಾಗಿ ಅಧ್ಯಯನ ಶೀಲರಾಗಿರುತ್ತಾರೆ.

ಕನ್ನಡಪ್ರಭ ವಾರ್ತೆ ಕೋಲಾರಜನರಿಗೆ ಸಮಾಜದಲ್ಲಿನ ಸಮಸ್ಯೆಗಳ ಬಗ್ಗೆ ಆಕ್ರೋಶವಿದ್ದರೂ ಅವುಗಳನ್ನು ಬಳಸಿಕೊಂಡು ಹೋರಾಟ ರೂಪಿಸಲು ಜನಪ್ರತಿನಿಧಿಗಳು ಸೇರಿದಂತೆ ಸಂಘಸಂಸ್ಥೆಗಳು ವಿಫಲವಾಗಿವೆ. ವೇದಿಕೆಗಳಲ್ಲಿ ಇದ್ದವರ ಜಾಣತನ ಹೆಚ್ಚಾಗಿ ಬದ್ಧತೆಯ ಅರ್ಥವೇ ಕಳೆದುಕೊಳ್ಳುತ್ತಿದೆ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ವಿಷಾದಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಸಿಪಿಐಎಂ ಜಿಲ್ಲಾ ಸಮಿತಿಯಿಂದ ರೈತ ಮುಖಂಡ ಹಾಗೂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಸಿ.ಬಯ್ಯಾರೆಡ್ಡಿ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಜನತೆಯ ಅಸಹಾಯಕತೆ ಪರಿಹರಿಸುವ ಮಾರ್ಗ ಗೊತ್ತಿದ್ದರೂ ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕಮ್ಯುನಿಸ್ಟರು ಅಧ್ಯಯನಶೀಲರು

ಸುಮಾರು ೬೦ರ ದಶಕದಲ್ಲಿ ಬೆಂಗಳೂರು ಅಂತಹ ಪ್ರದೇಶದಲ್ಲಿ ಸೈಕಲ್‌ಗೆ ೨೫ ಪೈಸೆ ತೆರಿಗೆ ಹಾಕಿದಾಗ ಎಲ್ಲ ರಾಜಕೀಯ ಪಕ್ಷಗಳು ಬೀದಿಗೆ ಇಳಿದು ಆಕ್ರೋಶ ವ್ಯಕ್ತಪಡಿಸಿದ್ದರು, ಇವತ್ತು ಜನರ ಸೇವೆ ಹೆಸರಿನಲ್ಲಿ ದರೋಡೆ ಮಾಡುವವರ ವಿರುದ್ದ ಯಾವುದೇ ಆಕ್ರೋಶದ ಧ್ವನಿಯಿಲ್ಲವಾಗಿದೆ. ಕಮ್ಯೂನಿಸ್ಟ್ ಚಳವಳಿಯ ಕಟ್ಟಾಳುಗಳು ನಿರಂತರವಾಗಿ ಅಧ್ಯಯನ ಶೀಲರಾಗಿರುತ್ತಾರೆ. ಅದರಿಂದಲೇ ಅವರು ಮಾತಾಡುವ ಶೈಲಿ ವಿಭಿನ್ನವಾಗಿರುತ್ತದೆ ಎಂದರು.

ಪ್ರತಿಯೊಂದು ಹಂತದಲ್ಲೂ ಕಮ್ಯುನಿಸ್ಟರು ಯುಜನಪರವಾದ ವಿಚಾರಗಳನ್ನು ಮೈಗೂಡಿಸಿಕೊಂಡು ಹೋಗುತ್ತಾರೆ, ಇವತ್ತಿನ ಕಲುಷಿತ ವಾತಾವರಣದ ರಾಜಕೀಯ ವ್ಯವಸ್ಥೆಯಲ್ಲಿ ನೈಜತೆಯ ರಾಜಕಾರಣ ಮುಖ್ಯವಾಗಿದೆ ಜನಪರ ಹೋರಾಟಕ್ಕೆ ಜಯಸಿಗುತ್ತದೆ ನಿಮ್ಮ ಜನಮುಖಿ ಸಮಾಜಮುಖಿ ಕಾರ್ಯಕ್ರಮಗಳಿಗೆ ಸದಾ ಬೆಂಬಲ ಇರುತ್ತದೆ ಎಂದರು.

ಕೋಮುವಾದಿ ರಾಜಕಾರಣ

ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ಕಮ್ಯೂನಿಸ್ಟ್ ಚಳುವಳಿಗಳಿಂದಲ್ಲೇ ಜಿಲ್ಲೆಯ ಜನಪರ ಯೋಜನೆಗಳ ಜೊತೆಗೆ ಶಾಶ್ವತ ನೀರಾವರಿ ಯೋಜನೆಗಳ ಜಾರಿಗೆ ಕಾರಣವಾಗಿವೆ ಬೆಲೆ ಏರಿಕೆ, ಭೂಸ್ವಾಧೀನ ವಿರುದ್ದ ಕೋಮುವಾದಿ ರಾಜಕಾರಣ ಕೊನೆಗಾಣಿಸುವ ನಿಟ್ಟಿನಲ್ಲಿ ಕಮ್ಯೂನಿಸ್ಟ್ ಪಕ್ಷವು ನಿರಂತರವಾಗಿ ಹೋರಾಟ ರೂಪಿಸಿದೆ. ದೇಶದಲ್ಲಿ ಜನತಾ ಪರಿಹಾರದ ಪಕ್ಷಗಳು ಹೊಂದಾಣಿಕೆ ರಾಜಕಾರಣ ಮಾಡಿದ್ದರಿಂದ ಕೆಲವು ಕಡೆಯಲ್ಲಿ ರಾಜಕಾರಣದಿಂದ ದೂರವಾಗಿವೆ. ಇದು ಬಿಜೆಪಿಗೆ ಲಾಭವಾಗಿದೆ ಕಮ್ಯೂನಿಸ್ಟ್ ಇತಿಹಾಸವನ್ನು ತಿಳಿದು ಜನರನ್ನು ಎಚ್ಚರಿಸುವ ಮೂಲಕ ಉತ್ತಮ ಸಮಾಜದ ನಿರ್ಮಾಣ ಮಾಡಬೇಕು ಎಂದರು.ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಮಾಜಿ ಶಾಸಕ ಜಿ.ವಿ ಶ್ರೀರಾಮರೆಡ್ಡಿ ಮತ್ತು ಜಿ.ಸಿ ಬಯ್ಯಾರೆಡ್ಡಿ ಆಡಳಿತ ಪಕ್ಷಗಳಿಗೆ ನಿರಂತರವಾಗಿ ಎಚ್ಚರಿಕೆ ನೀಡುತ್ತಿದ್ದರು. ಮಹಿಳೆಯ, ಕಾರ್ಮಿಕರ, ರೈತರ ವಿದ್ಯಾರ್ಥಿಗಳ ಧ್ವನಿಯಾಗಿ ಕೆಲಸ ಮಾಡಿದ್ದಾರೆ ಅಂತಹವರು ನಮ್ಮಿಂದ ದೂರವಾಗಿದ್ದರಿಂದ ಚಳವಳಿಗೆ ಹಾಗೂ ಜಿಲ್ಲೆಗೆ ತುಂಬುಲಾರದ ನಷ್ಟವಾಗಿದೆ ಅವರ ಆದರ್ಶಗಳು ನಮಗೆಲ್ಲ ಸ್ಪೂರ್ತಿಯಾಗಬೇಕು ಎಂದರು.

ಪಕ್ಷ ಸಿದ್ಧಾಂತಕ್ಕೆ ಬದ್ಧ

ಸಿಪಿಐಎಂ ರಾಜ್ಯ ಕಾರ್ಯದರ್ಶಿ ಡಾ.ಕೆ.ಪ್ರಕಾಶ್ ಮಾತನಾಡಿ, ದೇಶದಲ್ಲಿ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರು ತತ್ವ ಸಿದ್ದಾಂತಗಳಿಗೆ ಬದ್ದರಾಗಿದ್ದಾರೆ ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ ಸಂಯುಕ್ತರಂಗದ ತಂತ್ರಗಾರಿಕೆಯಿಲ್ಲದೇ ಚಳುವಳಿಗೂ ನಷ್ಟವಾಗಿದೆ ಬಯ್ಯಾರೆಡ್ಡಿ ಅಂತಹ ನಾಯಕ ಜಾತಿ ಧರ್ಮ ಪಕ್ಷ ಬಿಟ್ಟು ಸಮಾಜದ ಹಕ್ಕುಗಳಿಗಾಗಿ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಬಹುತ್ವ ಭಾರತ ಹಕ್ಕುಗಳಿಗಾಗಿ ನಾವು ಎಲ್ಲರೂ ಒಂದಾಗಬೇಕಾಗಿದೆ ಎಂದರು. ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ರೈತ ಪರವಾದ ಹೋರಾಟಗಳು ಜಿಲ್ಲೆಯಿಂದ ಪ್ರಾರಂಭವಾಗಿ ಯಶಸ್ಸು ಗಳಿಸಲು ಸಾಧ್ಯವಾಗಿದೆ ಅದಕ್ಕಾಗಿ ತ್ಯಾಗ ಮಾಡಿದವರ ನೆನಪು ಬದುಕಿನ ದಾರಿ ನಮಗೆಲ್ಲ ಸ್ಪೂರ್ತಿಯಾಗಿದೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳನ್ನು ಕೊಡಿಸುವ ಚಳುವಳಿ ಹೋರಾಟ ಇವತ್ತಿನ ಸಂದರ್ಭದಲ್ಲಿ ಅವಶ್ಯಕತೆ ಇದೆ ಎಂದರು.ಬಯ್ಯಾರೆಡ್ಡಿ ಕುರಿತ ಕೃತಿ ಬಿಡುಗಡೆ

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಪಿ.ಆರ್.ಸೂರ್ಯನಾರಾಯಣ, ಚಳವಳಿಗಳ ನಾಯಕ ಜಿ.ಸಿ ಬಯ್ಯಾರೆಡ್ಡಿ ಪುಸ್ತಕ ಬಿಡುಗಡೆ ಮಾಡಲಾಯಿತು ಅವರ ಮಗಳು ನಿಲೋನಾ ಮಾತನಾಡಿದರು.ವೇದಿಕೆಯಲ್ಲಿ ರೈತ ಸಂಘದ ಅಬ್ಬಣಿ ಶಿವಪ್ಪ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಟಿ.ಎಂ ವೆಂಕಟೇಶ್, ವಿ.ಗೀತಾ, ಪಿ.ಶ್ರೀನಿವಾಸ್, ಎ.ಆರ್.ಬಾಬು, ಪಿ.ತಂಗರಾಜ್ ಇದ್ದರು.