ನುಗ್ಗೇಹಳ್ಳಿಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವ

| Published : Apr 14 2025, 01:17 AM IST

ನುಗ್ಗೇಹಳ್ಳಿಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ, ಶ್ರೀ ವೇಣುಗೋಪಾಲಸ್ವಾಮಿ, ಶ್ರೀ ಸೌಮ್ಯ ಚೆನ್ನಕೇಶವ ಸ್ವಾಮಿ ದೇವರುಗಳಿಗೆ ವಿಶೇಷ ಪೂಜೆ, ಅಭಿಷೇಕ, ಹೂವಿನ ಅಲಂಕಾರ ಸೇರಿದಂತೆ ವಿವಿಧ ಪೂಜೆಗಳು ನೆರವೇರಿದವು. ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಗ್ರಾಮದ ರಾಜಬೀದಿಗಳಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಅವರ ಉತ್ಸವ ನಡೆಯಿತು. ರಥವನ್ನು ಹೂವಿನ ಅಲಂಕಾರಗಳಿಂದ ಸಿದ್ಧಗೊಳಿಸಲಾಯಿತು. ಉತ್ಸವದ ನಂತರ ರಥದ ಸುತ್ತ ದೇವರನ್ನು ಪ್ರದಕ್ಷಿಣೆ ನಡೆಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ವಿಧಿವಿಧಾನಗಳು ನೆರವೇರಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಹಣ್ಣುದವನ ಅರ್ಪಿಸುವ ಮೂಲಕ ದೇವರಿಗೆ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ, ಶ್ರೀ ವೇಣುಗೋಪಾಲಸ್ವಾಮಿ, ಶ್ರೀ ಸೌಮ್ಯ ಚೆನ್ನಕೇಶವ ಸ್ವಾಮಿ ದೇವರುಗಳಿಗೆ ವಿಶೇಷ ಪೂಜೆ, ಅಭಿಷೇಕ, ಹೂವಿನ ಅಲಂಕಾರ ಸೇರಿದಂತೆ ವಿವಿಧ ಪೂಜೆಗಳು ನೆರವೇರಿದವು. ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಗ್ರಾಮದ ರಾಜಬೀದಿಗಳಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಅವರ ಉತ್ಸವ ನಡೆಯಿತು. ರಥವನ್ನು ಹೂವಿನ ಅಲಂಕಾರಗಳಿಂದ ಸಿದ್ಧಗೊಳಿಸಲಾಯಿತು. ಉತ್ಸವದ ನಂತರ ರಥದ ಸುತ್ತ ದೇವರನ್ನು ಪ್ರದಕ್ಷಿಣೆ ನಡೆಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ವಿಧಿವಿಧಾನಗಳು ನೆರವೇರಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಹಣ್ಣುದವನ ಅರ್ಪಿಸುವ ಮೂಲಕ ದೇವರಿಗೆ ಪೂಜೆ ಸಲ್ಲಿಸಿದರು.

ರಥೋತ್ಸವಕ್ಕೆ ಗರುಡನ ಆಗಮನ:

ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮರಥೋತ್ಸವದ ಸಮಯಕ್ಕೆ ಆಕಾಶದಲ್ಲಿ ಗರುಡ ಆಗಮಿಸಿ ರಥದ ಸುತ್ತ ಪ್ರದಕ್ಷಣೆ ನಡೆಸುವ ಮೂಲಕ ಭಕ್ತಿ ಸಮರ್ಪಿಸಿತು. ಗರುಡನನ್ನು ಕಂಡು ಭಕ್ತರು ಭಕ್ತಿ ಸಮರ್ಪಿಸಿ ಕಣ್ತುಂಬಿಸಿಕೊಂಡರು. ರಥೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ದೇವಾಲಯ ಸಮಿತಿ ಹಾಗೂ ವಿವಿಧ ಧಾನಿಗಳು ಅನ್ನಸಂತರ್ಪಣೆ ಏರ್ಪಡಿಸಿದ್ದರು.

ವಿಶೇಷ ಪೂಜೆ, ಉತ್ಸವ : ಏಪ್ರಿಲ್ 6ರಿಂದ 18ರವರೆಗೆ ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಪ್ರತಿದಿನ ವಿಶೇಷ ಪೂಜೆ ಉತ್ಸವ ಸೇರಿದಂತೆ ಪ್ರಸಾದ ವಿನಿಯೋಗ ನಡೆಯುತ್ತಿದೆ.

ರಥೋತ್ಸವಕ್ಕೆ ಗಣ್ಯರ ಆಗಮನ:

ಮಾಜಿ ವಿಧಾನ ಪರಿಷತ್ ಸದಸ್ಯ ಎಂ ಎ ಗೋಪಾಲಸ್ವಾಮಿ, ಮಾಜಿ ವಿಧಾನ ಪರಿಷತ್ ಸದಸ್ಯೆ ಕುಸುಮ ಬಾಲಕೃಷ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಜಿಲ್ಲಾ ವಿಶೇಷ ಭೂಸ್ವಾಧೀನ ಅಧಿಕಾರಿ ಮಂಜುನಾಥ್, ಮುಜರಾಯಿ ತಹಸೀಲ್ದಾರ್ ಲತಾ, ತಾಲೂಕು ದಂಡಾಧಿಕಾರಿ ನವೀನ್ ಕುಮಾರ್, ತಾಲೂಕು ಅರ್ಚಕರ ಸಂಘದ ಅಧ್ಯಕ್ಷ ಶ್ರೀಧರ್ ಮೂರ್ತಿ, ರಥೋತ್ಸವದಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ರಥೋತ್ಸವದಲ್ಲಿ ಬಿಜೆಪಿ ಮುಖಂಡ ಚಿದಾನಂದ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಿರೀಶ್, ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಛಾಯಾ ಕೃಷ್ಣಮೂರ್ತಿ, ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಸೇವಾ ಸಮಿತಿ ಬೆಂಗಳೂರು ಅಧ್ಯಕ್ಷರು ಡಾ. ಅನಂತ್ ಕಿಶನ್, ಉಪಾಧ್ಯಕ್ಷ ಜಗನ್ನಾಥ್, ಕಾರ್ಯದರ್ಶಿ ಗೋಪಾಲ್, ಖಜಾಂಚಿ ನಾರಾಯಣ್, ಸದಸ್ಯರಾದ ರಾಧಾ, ರಾಜು, ಲಲಿತಾ, ನರಹರಿ, ದೇವಾಲಯದ ಪ್ರಧಾನ ಅರ್ಚಕ ರಾಮ ಭಟ್ಟರು, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ರಾಜಣ್ಣ, ಪ್ರಮುಖರಾದ ಪ್ರಸನ್ನ ಕೇಶವಾಚಾರ್, ಆಗಮಿಕರಾದ ಶ್ರೀಧರ್, ವೆಂಕಟ ನರಸಿಂಹಾಚಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠಲ್ ಕುಮಾರ್, ಮುಖಂಡರಾದ ನಟರಾಜ್, ದೊರೆಸ್ವಾಮಿ, ಲಕ್ಷ್ಮಣ್, ಫೈನಾನ್ಸ್ ಪ್ರಕಾಶ್, ಎನ್ ಎಸ್ ಗಿರೀಶ್, ಕೃಪಾ ಶಂಕರ್, ಅಶೋಕ್, ಹುಲಿಕೆರೆ ಸಂಪತ್ ಕುಮಾರ್, ಕಿರಣ್, ಪಟೇಲ್ ಕುಮಾರ್, ಮುರಳಿ, ಹೊನ್ನೇಗೌಡ, ಮಂಜುನಾಥ್, ಗ್ಯಾಸ್ ರಾಜು, ಎಲ್ಲಪ್ಪ, ಸೇರಿದಂತೆ ದೇವಾಲಯ ವ್ಯವಸ್ಥಾಪನಾ ಸಮಿತಿ ಎಲ್ಲಾ ಸದಸ್ಯರು ಗ್ರಾಮಸ್ಥರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.