ಸಾರಾಂಶ
ಕೆಲಸ ಮಾಡುವ ಹೆಣ್ಣು ಮಕ್ಕಳ ಮೂರು ವರ್ಷದ ಒಳಗಿನ ಮಕ್ಕಳನ್ನು ಆರೈಕೆ ಮಾಡಲಾಗುವುದು ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಉದ್ಯೋಗ ಖಾತರಿ ಯೋಜನೆಯ ಕೂಲಿ ಕಾರ್ಮಿಕರ ಮಕ್ಕಳ ಆರೈಕೆಗೆ ಕೂಸಿನ ಮನೆ ಪ್ರಾರಂಭಿಸಲಾಗಿದೆ ಎಂದು ಬೆಳಕೂಡ ಗ್ರಾ.ಪಂ ಉಪಾಧ್ಯಕ್ಷ ಮಹಾಂತೇಶ ಚವ್ಹಾಣ ಹೇಳಿದರು. ತಾಲೂಕಿನ ಬೆಳಕೂಡ ಗ್ರಾ.ಪಂ ವ್ಯಾಪ್ತಿಯ ಮರಾಠಾ ಸಭಾಭವನದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಸಿನ ಮನೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಲಸ ಮಾಡುವ ಹೆಣ್ಣು ಮಕ್ಕಳ ಮೂರು ವರ್ಷದ ಒಳಗಿನ ಮಕ್ಕಳನ್ನು ಆರೈಕೆ ಮಾಡಲಾಗುವುದು ಎಂದು ತಿಳಿಸಿದರು.ಪಿಡಿಒ ಅಣ್ಣಪ್ಪಾ ಇಟ್ನಾಳೆ ಮಾತನಾಡಿ, ನರೇಗಾ ಯೋಜನೆಯಲ್ಲಿ ಮಹಿಳೆಯರು ಹೆಚ್ಚು ಭಾಗವಹಿಸುವಿಕೆಗೆ ಕ್ರಮ ಕೈಕೊಳ್ಳಲಾಗಿದೆ. ಜಾಗೃತೆ ಮೂಡಿಸಿ ಬಡ ಜನರಿಗೆ ಕೂಲಿ ಕೆಲಸ ನೀಡಲಾಗುತ್ತದೆ ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆ ಇಂದಿರಾ ಪಾಟೀಲ, ಗ್ರಾ.ಪಂ ಅಧ್ಯಕ್ಷೆ ಸುಗಂಧಾ ಗಿರಜಾಯಿ, ಕೇರ್ ಟೇಕರ್ ಭಾಗ್ಯಶ್ರೀ ಸಣ್ಣಕ್ಕಿ, ಗೌರೇಶ್ವರಿ ನಿಂಗಪ್ಪಗೋಳ, ಸುಜಾತಾ ಕಾಮಗೌಡ, ಕಾರ್ಯದರ್ಶಿ ಸಹನಾ ಸುಳೆಬಾವಿ, ಅಂಗನವಾಡಿ ಕಾರ್ಯಕರ್ತೆ ಶಾಂತಾ ದಲಾಲ, ಮಂಗಲ ಖಡೇದ, ನಿರ್ಮಲಾ ರುದ್ರಾಪೂರೆ, ಸುರೇಶ ಅರಭಾಂವಿ, ಆನಂದ ಮುಗಳಿ, ಸಂಜಯ ಖಟಾವಿ, ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.