ಅಪರಾಧ ತಡೆಗೆ ಜನರ ಸಹಕಾರ ಅಗತ್ಯ

| Published : Dec 14 2024, 12:47 AM IST

ಸಾರಾಂಶ

ಪೊಲೀಸರು ಇರುವುದೇ ಕಾನೂನು ಸುರಕ್ಷತೆ ಕಾಪಾಡಲು. ಆದರೆ ಸಾರ್ವಜನಿಕರು ಈ ಕಾರ್ಯಕ್ಕೆ ಪೂರ್ಣ ಸಹಕಾರ ನೀಡಬೇಕು, ಅಪರಾಧ ಪತ್ತೆ ಹಚ್ಚಲು ನೀಡುವ ನೀಡುವ ಅಮೂಲ್ಯ ಮಾಹಿತಿಯಿಂದ ಅಪರಾಧಿಗಳನ್ನು ಪತ್ತೆಹಚ್ಚಿ ಮತ್ತಷ್ಟು ಪ್ರಕರಣಗಳು ನಡೆಯದಂತೆ ಕ್ರಮವಹಿಸಲು ಸಹಕಾರಿಯಾಗುತ್ತದೆ.

ಕನ್ನಡಪ್ರಭ ವಾರ್ತೆ ಕೋಲಾರಅಪರಾಧ ಮುಕ್ತ ಸಮಾಜಕ್ಕಾಗಿ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಿ, ಬಾಲ್ಯವಿವಾಹ, ಸರಗಳ್ಳತನ ತಡೆಗೆ ನಿಮಗೆ ಸಿಗುವ ಸುಳಿವನ್ನು ಪೊಲೀಸರೊಂದಿಗೆ ಹಂಚಿಕೊಳ್ಳಿ ಎಂದು ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಕಾಂತರಾಜ್ ಮನವಿ ಮಾಡಿದರು.ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಿಸಾರ್ ನಗರದಲ್ಲಿ ಅಪರಾಧ ತಡೆ ಮಾಸಾಚರಣೆ -೨೦೨೪ ರ ಸಲುವಾಗಿ ಸಭೆ ಏರ್ಪಡಿಸಿ ಸಾರ್ವಜನಿಕರಿಗೆ ಬಾಲ್ಯವಿವಾಹ, ಸೈಬರ್ ಅಪರಾಧ, ೧೧೨ ತುರ್ತು ಸೇವೆ, ಸರಗಳ್ಳತನ ಇತರ ಅಪರಾಧಗಳ ಬಗ್ಗೆ ಅರಿವು ಮೂಡಿಸಿ ಮಾತನಾಡುತ್ತಿದ್ದರು.ಜನರ ಸಹಕಾರ ಅಗತ್ಯ

ಪೊಲೀಸರು ಇರುವುದೇ ಕಾನೂನು ಸುರಕ್ಷತೆ ಕಾಪಾಡಲು. ಆದರೆ ಸಾರ್ವಜನಿಕರು ಈ ಕಾರ್ಯಕ್ಕೆ ಪೂರ್ಣ ಸಹಕಾರ ನೀಡಬೇಕು, ಅಪರಾಧ ಪತ್ತೆ ಹಚ್ಚಲು ನೀಡುವ ನೀಡುವ ಅಮೂಲ್ಯ ಮಾಹಿತಿಯಿಂದ ಅಪರಾಧಿಗಳನ್ನು ಪತ್ತೆಹಚ್ಚಿ ಮತ್ತಷ್ಟು ಪ್ರಕರಣಗಳು ನಡೆಯದಂತೆ ಕ್ರಮವಹಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.ಬಾಲ್ಯವಿವಾಹ ಸಾಮಾಜಿಕ ಪಿಡುಗಾಗಿದ್ದು, ಇದರ ತಡೆ ಪೊಲೀಸರು ಮಾತ್ರವಲ್ಲ ಸಾರ್ವಜನಿಕರದ್ದು ಪ್ರಮುಖ ಜವಾಬ್ದಾರಿ. ಇದೆ ಈ ಕಾರ್ಯದಲ್ಲಿ ಕೈಜೋಡಿಸಿ, ಶಾಲೆಗೆ ಹೋಗಬೇಕಾದ ಮಕ್ಕಳನ್ನು ಬಲವಂತವಾಗಿ ಸಂಸಾರಕ್ಕೆ ನೂಕುವುದನ್ನು ತಪ್ಪಿಸೋಣ. ಬಾಲ್ಯವಿವಾಹಕ್ಕೆ ನೆರವಾದರೆ ಪೋಷಕರು, ಮದುವೆ ಮಾಡಿಸಿದವರು, ಮದುವೆಗೆ ಬಂದವರೂ ಅಪರಾಧಿಗಳಾಗುತ್ತೀರಿ, ಇದಕ್ಕೆ ಕಠಿಣ ಶಿಕ್ಷೆ ಇದೆ ಎಂದು ಎಚ್ಚರಿಸಿದರು.

ಕಾರ್ಯಾಗಾರದಲ್ಲಿ ಈ ಭಾಗದ ನೂರಾರು ಮಹಿಳೆಯರು, ಸಾರ್ವಜನಿಕರು, ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಹಾಜರಿದ್ದು, ಕಾನೂನು ಮಾಹಿತಿ ಪಡೆದುಕೊಂಡರು. ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.