ಸಾರಾಂಶ
ಜೂನ್ ತಿಂಗಳಿನಿಂದ ಜುಲೈ ತಿಂಗಳ ಕೊನೆವಾರದವರೆಗೂ ಹೆಚ್ಚಿನ ಮಳೆ ಹಗಲು ರಾತ್ರಿ ಸುರಿದಿದ್ದರಿಂದ ಬಹುತೇಕ ಕೆರೆಕಟ್ಟೆಗಳು ತುಂಬಿ ಹೋಗಿ ಒಂದು ಕಡೆ ಸಂತೋಷವಾದರೇ ಇನ್ನೊಂದು ಕಡೆ ಶಾಲಾ-ಕಾಲೇಜು ಮಕ್ಕಳಿಗೆ, ಸಣ್ಣ ಸಣ್ಣ ವ್ಯಾಪಾರಸ್ಥರಿಗೆ ಹಾಗೂ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಸಮಸ್ಯೆ ಆಗಿತ್ತು.ಕಳೆದ ಒಂದೂವರೆ ತಿಂಗಳಿನಿಂದಲೂ ಸತತವಾಗಿ ಬಾರಿ ಮಳೆ ಬಂದು ತತ್ತರಿಸಿ ಹೋಗಿದ್ದ ಜನತೆಗೆ ಶನಿವಾರ ಸೂರ್ಯನ ಆಗಮನದಿಂದ ಸಲ್ಪ ನಿಟ್ಟುಸಿರು ಬಿಟ್ಟಿದ್ದು, ಎಂದಿನಂತೆ ಜನತೆ ತಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ತೊಡಗಿದ್ದರು.
ಕನ್ನಡಪ್ರಭ ವಾರ್ತೆ ಹಾಸನ
ಕಳೆದ ಒಂದೂವರೆ ತಿಂಗಳಿನಿಂದಲೂ ಸತತವಾಗಿ ಬಾರಿ ಮಳೆ ಬಂದು ತತ್ತರಿಸಿ ಹೋಗಿದ್ದ ಜನತೆಗೆ ಶನಿವಾರ ಸೂರ್ಯನ ಆಗಮನದಿಂದ ಸಲ್ಪ ನಿಟ್ಟುಸಿರು ಬಿಟ್ಟಿದ್ದು, ಎಂದಿನಂತೆ ಜನತೆ ತಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ತೊಡಗಿದ್ದರು.ಜೂನ್ ತಿಂಗಳಿನಿಂದ ಜುಲೈ ತಿಂಗಳ ಕೊನೆವಾರದವರೆಗೂ ಹೆಚ್ಚಿನ ಮಳೆ ಹಗಲು ರಾತ್ರಿ ಸುರಿದಿದ್ದರಿಂದ ಬಹುತೇಕ ಕೆರೆಕಟ್ಟೆಗಳು ತುಂಬಿ ಹೋಗಿ ಒಂದು ಕಡೆ ಸಂತೋಷವಾದರೇ ಇನ್ನೊಂದು ಕಡೆ ಶಾಲಾ-ಕಾಲೇಜು ಮಕ್ಕಳಿಗೆ, ಸಣ್ಣ ಸಣ್ಣ ವ್ಯಾಪಾರಸ್ಥರಿಗೆ ಹಾಗೂ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಸಮಸ್ಯೆ ಆಗಿತ್ತು. ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಾಲೆಗಳಿಗೆ ೮ ರಿಂದ ೧೦ ದಿನಗಳ ಕಾಲ ರಜೆ ಕೊಟ್ಟಿರುವುದು ಒಂದು ಇತಿಹಾಸವೇ ಆಗಿದೆ.
ಶನಿವಾರ ಮತ್ತೆ ಶಾಲೆ ಆರಂಭವಾಗಿರುವುದಕ್ಕೆ ಪೋಷಕರ ಮೊಗದಲ್ಲಿ ಮಂದಹಾಸ ಬೀರಿತ್ತು. ರಜೆಯ ಗುಂಗಿನಲ್ಲೆ ಇದ್ದ ಇನ್ನು ಕೆಲ ಮಕ್ಕಳು ಬೇಸರದಲ್ಲಿ ಶಾಲೆಗೆ ಹೋದ ಪ್ರಸಂಗ ನಡೆಯಿತು. ಮಳೆಯ ಕಾರಣ ಅನೇಕರು ತಮ್ಮ ವ್ಯಾಪಾರವನ್ನೆ ಬಂದ್ ಮಾಡಿದ್ದರು. ಈಗ ಮಳೆ ಸ್ವಲ್ಪ ವಿರಾಮ ಕೊಟ್ಟಿದ್ದರಿಂದ ಬೀದಿಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರು ಎಂದಿನಂತೆ ಸಂತೋಷದಿಂದ ವ್ಯಾಪಾರದಲ್ಲಿ ತೊಡಗಿದ್ದರು.