ಸಾರಾಂಶ
ಧರ್ಮದ ಹೆಸರಿನಲ್ಲಿ ವಿದ್ಯಾರ್ಥಿಗಳಲ್ಲಿ ದ್ವೇಷದ ಭಾವ ಮೂಡಿಸಲಾಗುತ್ತಿದೆ. ದೇಶದ ಐಕ್ಯತೆಯನ್ನ ಎತ್ತಿ ಹಿಡಿಯುವಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು. ಧರ್ಮ ಧರ್ಮಗಳಲ್ಲಿ ಸಹಿಷ್ಣತೆಭಾವ ಸಮಾರಸ್ಯದ ಜೀವನ ರೂಪಿಸಿಕೊಳ್ಳಬೇಕು ಎಂದು ಯರನಾಳ ಹಿರೇಮಠದ ಪ್ರವಚನ ಭಾಸ್ಕರ, ಪೂಜ್ಯ ಶಿವಪ್ರಸಾದ ದೇವರು ನುಡಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಧರ್ಮದ ಹೆಸರಿನಲ್ಲಿ ವಿದ್ಯಾರ್ಥಿಗಳಲ್ಲಿ ದ್ವೇಷದ ಭಾವ ಮೂಡಿಸಲಾಗುತ್ತಿದೆ. ದೇಶದ ಐಕ್ಯತೆಯನ್ನ ಎತ್ತಿ ಹಿಡಿಯುವಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು. ಧರ್ಮ ಧರ್ಮಗಳಲ್ಲಿ ಸಹಿಷ್ಣತೆಭಾವ ಸಮಾರಸ್ಯದ ಜೀವನ ರೂಪಿಸಿಕೊಳ್ಳಬೇಕು ಎಂದು ಯರನಾಳ ಹಿರೇಮಠದ ಪ್ರವಚನ ಭಾಸ್ಕರ, ಪೂಜ್ಯ ಶಿವಪ್ರಸಾದ ದೇವರು ನುಡಿದರು.
ಮಾ, ೫,೬,೭ ರಂದು ತಾಲೂಕಿನ ಕುಂಟೋಜಿ ಸಂಸ್ಥಾನ ಹಿರೇಮಠದ ಶ್ರೀ ಚನ್ನವೀರ ದೇವರವರ ಗುರು ಪಟ್ಟಾಧಿಕಾರದ ಹಿನ್ನೆಲೆವಿವಿಧ ಪೂಜ್ಯರ ನೇತೃತ್ವದಲ್ಲಿ ನಾಗರಬೆಟ್ ಆಕ್ಸಫರ್ಡ ಪಿಯು ವಿಜ್ಞಾನ ಕಾಲೇಜಿನಲ್ಲಿ ರುದ್ರಾಕ್ಷ ದೀಕ್ಷೆ ಅಭಿಯಾನದಲ್ಲಿ ಮಾತನಾಡಿದ ಅವರು, ನಮ್ಮ ಧರ್ಮದ ಆಚರಣೆ ಮನೆಯಲ್ಲಿಯೇ ಇರಬೇಕು. ಶಾಲಾ ಕಾಲೇಜುಗಳಿಗೆ ಬರದಂತೆ ನೋಡಿಕೊಳ್ಳಬೇಕು ಎಂದರು.
ಕುಂಟೋಜಿ ಹಿರೇಮಠದ ಶ್ರೀ ಚನ್ನವೀರದೇವರು ಮಾತನಾಡಿ, ಕಳೆದ ಹಲವು ವರ್ಷಗಳಿಂದ ನಮ್ಮ ಮತಕ್ಷೇತ್ರ ಮಾತ್ರವಲ್ಲದೇ ವಿವಿಧ ಜಿಲ್ಲೆಯ ಭಕ್ತರು ಪಟ್ಟಾಧಿಕಾರ ನಡೆಸಿಕೊಡುವ ಬಗ್ಗೆ ಹೆಚ್ಚು ಒಲವು ತೋರಿಸಿದ್ದರಿಂದ, ಇಂದು ಮುದ್ದೇಬಿಹಾಳ, ತಾಳಿಕೋಟಿ, ನಾಲತವಾಡ, ಬ.ಬಾಗೇವಾಡಿ, ವಿಜಯಪುರ ಸೇರಿದಂತೆ ಹಲವು ಗಣ್ಯರು, ಮುಖಂಡರು ಸೇರಿ ಶಿರಹಟ್ಟಿ ಬಾಳೆಹೊಸೂರನ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ನಿರಂಜನ ಜಗದ್ಗುರು ಪಕೀರ ದಿಂಗಾಲೇಶ್ವರ ಮಹಾಸ್ವಾಮಿಗಳ ನೇತೃತ್ವದ ಬ್ರಹತ್ ಸಭೆ ನಡೆಸಿ ಪಟ್ಟಾಧಿಕಾರದ ದಿನಾಂಕ ನಿಗದಿ ಪಡಿಸಲಾಗಿದೆ ಎಂದರು.
ಆಕ್ಸಫರ್ಡ ಪಿಯು ವಿಜ್ಞಾನ ಕಾಲೇಜಿನ ಮುಖ್ಯಸ್ಥ ಅಮೀತಗೌಡ ಪಾಟೀಲ, ಹುಬ್ಬಳ್ಳಿ ಮೂರುಸಾವಿರ ಮಠದ ಸಾಧಕ ಪೂಜ್ಯ ಶಿವಬಸವ ದೇವರು ಇದ್ದರು. ಎಲ್ಲ ವಿದ್ಯಾರ್ಥಿಗಳಿಗೆ ರುದ್ರಾಕ್ಷ ಧಾರಣ ಮಾಡಲಾಯಿತು. ಶಿಕ್ಷಕ ಪರಶುರಾಮ ಹೂಗಾರ ನಿರೂಪಿಸಿ ವಂದಿಸಿದರು.