ಸಂಯುಕ್ತಾ ಪಾಟೀಲ ಭರ್ಜರಿ ಪ್ರಚಾರ

| Published : Apr 06 2024, 12:50 AM IST

ಸಾರಾಂಶ

ಬಾಗಲಕೋಟೆಯ ಮನೆ ಮಗಳಾಗಿ ಅವರು ಮತ ಕೇಳುತ್ತಿದ್ದು, ಪ್ರಚಾರದ ವೇಳೆಯೇ ಜನರ ಕಷ್ಟಗಳಿಗೂ ಸ್ಪಂದಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರು ಬಿರು ಬಿಸಿಲನ್ನು ಲೆಕ್ಕಿಸದೇ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಬಿಸಿಲಿನ ಪ್ರಖರತೆಯ ನಡುವೆಯೂ ಎಗ್ಗಿಲ್ಲದೆ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.ಪ್ರಚಾರದ ವೇಳೆ ಸಂಯುಕ್ತ ಪಾಟೀಲಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಸಾಥ್‌ ನೀಡುತ್ತಿದ್ದಾರೆ. ಬಾಗಲಕೋಟೆಯ ಮನೆ ಮಗಳಾಗಿ ಅವರು ಮತ ಕೇಳುತ್ತಿದ್ದು, ಪ್ರಚಾರದ ವೇಳೆಯೇ ಜನರ ಕಷ್ಟಗಳಿಗೂ ಸ್ಪಂದಿಸುತ್ತಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಸಂಯುಕ್ತ ಪಾಟೀಲ ಅವರು ಜನರ ಸಂಕಷ್ಟಗಳಿಗೂ ಸ್ಪಂದನೆ ಮಾಡುತ್ತಿದ್ದಾರೆ. ಈ ಮೂಲಕ ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ಅರಿಯಲು ಯತ್ನಿಸುತ್ತಿದ್ದಾರೆ. ಬೀಳಗಿ ತಾಲೂಕಿನ ನಾನಾ ಭಾಗಗಳಲ್ಲಿ ಭರ್ಜರಿ ಪ್ರಚಾರ ನಡೆಸಿದ ಸಂಯುಕ್ತಾ ಪಾಟೀಲ ಅವರಿಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಅದರಂತೆ ಬಾಗಲಕೋಟೆ ನಗರದಲ್ಲಿಯೂ ಅವರು ಪ್ರಚಾರ ನಡೆಸಿದರು. ಜತೆಗೆ ರೊಟ್ಟಿ ಮುಟಗಿ ಊಟ ಸವಿಯಲು ಶ್ರೀ ಅನ್ನಪೂರ್ಣೇಶ್ವರಿ ಊಟದ ಮನೆಗೆ ಭೇಟಿ ನೀಡಿ ಊಟವನ್ನು ಕೂಡ ಸವಿದರು.

ಈ ವೇಳೆ ಖಾನಾವಳಿ ಮಾಲಕಿ ತಮ್ಮ ಮಗನ ಅಕಾಲಿಕ ಮರಣವನ್ನು ನೆನೆದು ಸಂಯುಕ್ತ ಪಾಟೀಲ ಮುಂದೆ ಭಾವುಕರಾದರು. ಆಗ ಅವರನ್ನು ಸಂಯುಕ್ತ ಪಾಟೀಲ ಸಂತೈಸಿದರು. ಮಗನನ್ನು ಕಳೆದುಕೊಂಡ ಆ ಮಹಿಳೆ ಸಂಯುಕ್ತ ಅವರ ಮುಂದೆ ಗೋಳಾಡಿದರು.ಫೋಟೋ ಇದೆ...