ಶಿವಾಜಿಯ ಶೌರ್ಯ ಎಲ್ಲರಿಗೂ ಪ್ರೇರಣೆ: ಪಿ.ಜಿ ಕೆಂಪಣ್ಣವರ

| Published : Feb 20 2024, 01:47 AM IST

ಸಾರಾಂಶ

ಹಿಂದೂಗಳಲ್ಲಿ ಜನ ಜಾಗೃತಿ ಮೂಡಿಸಿ, ಹಿಂದೂಸ್ಥಾನದ ಏಕತೆಗೆ ಶ್ರಮಿಸಿದ ಶಿವಾಜಿ ಕೊಡುಗೆ ಅಪಾರ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಛತ್ರಪತಿ ಶಿವಾಜಿ ಮಹಾರಾಜರು ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿ ಹಿಂದೂಸ್ಥಾನ ಒಗ್ಗೂಡಿಸಲು ಬಹಲ ಶ್ರಮಿಸಿದ್ದಾರೆ. ಸುಮಾರು 3 ಸಾವಿರ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮ ಭಾರತವನ್ನು ತಮ್ಮ ಆಳ್ವಿಕೆಗೆ ತಂದರು. ಶಿವಾಜಿಯ ಶೌರ್ಯ, ಸಾಹಸ, ರಾಷ್ಟ್ರಭಕ್ತಿ, ಆಡಳಿತ ಎಂದೆಂದಿಗೂ ಪ್ರೇರಣದಾಯಕ ಎಂದು ಬೆಳಗಾವಿ ರಾಜಾ ಲಾಖಮಗೌಡ ಕಾನೂನು ಮಹಾವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಪಿ.ಜಿ ಕೆಂಪಣ್ಣವರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಶಿವಾಜಿ ಉದ್ಯಾನವನದಲ್ಲಿ

ಸೋಮವಾರ ನಡೆದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹಿಂದೂಗಳಲ್ಲಿ ಜನ ಜಾಗೃತಿ ಮೂಡಿಸಿ, ಹಿಂದೂಸ್ಥಾನದ ಏಕತೆಗೆ ಶ್ರಮಿಸಿದ ಶಿವಾಜಿ ಕೊಡುಗೆ ಅಪಾರ ಎಂದರು.

ಶಿವಾಜಿ ಮಹಾರಾಜರ ಪೂರ್ವಜರು ಮೂಲತಃ ಕರ್ನಾಟಕದವರು. ಮನಸಿದ್ದರೆ ಮಾರ್ಗ ಎಂಬ ಸಂದೇಶ ಸಾರಿದ ಶಿವಾಜಿ ಮಹಾರಾಜರು ಅವರ ತಾಯಿ ಆಶಯದಂತೆ ಹಿಂದೂ ಸಾಮ್ರಾಜ್ಯ ಕಟ್ಟಿ, ಸಂರಕ್ಷಣೆ ಮಾಡಿದ್ದಾರೆ. ತನ್ನದೆ ಸಾಮ್ರಾಜ್ಯ ಸ್ಥಾಪಿಸಿ ಹಿಂದೂ ಸಾಮ್ರಾಜ್ಯದ ಕೀರ್ತಿ ಪತಾಕೆ ಹಾರಿಸಿದ್ದಾರೆ ಎಂದು ಪ್ರಾಧ್ಯಾಪಕ ಪಿ.ಜಿ ಕೆಂಪಣ್ಣವರ ಉಪನ್ಯಾಸದಲ್ಲಿ ತಿಳಿಸಿದರು.

ಮಹಾನಗರ ಪಾಲಿಕೆ ಮೇಯರ್ ಸವಿತಾ ಕಾಂಬಳೆ, ಉಪ ಮೇಯರ್ ಆನಂದ ಚವ್ಹಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಪಾಲಿಕೆ ಸದಸ್ಯ ರಾಜು ಭಾತಖಾಂಡೆ ಕಾರ್ಯಕ್ರಮದಲ್ಲಿ ಇದ್ದರು. ಅಂಜಲಿ ಪಾಟೀಲ ವಂದಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು.