ಚುನಾವಣಾದಿಕಾರಿಯಾಗಿದ್ದ ಹಿರಿಯ ಆಡಿಟರ್ ಸತ್ಯನಾರಾಯಣ ಆವರ ಮಾತನಾಡಿ ಶ್ರೀ ಅಖಿಲ ಹವ್ಯಕ ಮಹಾಸಭಾ ಜಿಲ್ಲಾ ಶಾಖೆ ಕಳದೆ ೩೩ ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಮುಂದಿನ ೨ ವರ್ಷಗಳ ಆಡಳಿತ ಮಂಡಳಿಗೆ ಉಪಾಧ್ಯಕ್ಞರಾಗಿ ಆಲೂರಿನ ನಾರಾಯಣ ಶರ್ಮ, ಕಾರ್ಯದರ್ಶಿಯಾಗಿ ರಾಜೀವ್ ಆಯುರ್ವೇದ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಡಾ. ಉದಯ್ ಹೆಗಡೆ, ಜಂಟಿ ಕಾರ್ಯದರ್ಶಿಯಾಗಿ ವಿದ್ಯಾನಗರದ ವೀಣಾ ಮಾರ್ಕಾಂಡೆ, ಖಜಾಂಜಿಯಾಗಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಕೃಷ್ಣಾನಂದ ಅವರನ್ನು ಆಯ್ಕೆ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಹಾಸನ
ಶ್ರೀ ಅಖಿಲ ಹವ್ಯಕ ಮಹಾಸಭಾ ಜಿಲ್ಲಾ ಶಾಖೆಯನ್ನು ಇಲ್ಲಿನ ಸಂಸ್ಕೃತ ಭವನದಲ್ಲಿ ನಡೆದ ಜಿಲ್ಲಾ ಸರ್ವ ಸದಸ್ಯರ ಸಭೆಯಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ ಮಹಿಳಾ ವೇದಿಕೆ ಸಂಚಾಲಕಿ ಮಧುರಾ ಗಾಂವ್ಕರ್ ಅವರ ಸಮ್ಮುಖದಲ್ಲಿ ಎಂಸಿಎಫ್‌ನಲ್ಲಿ ಸೈಂಟಿಸ್ಟ್ ಆಗಿರುವ ಸೀತಾರಾಮ ಹೆಗಡೆಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಚುನಾವಣಾದಿಕಾರಿಯಾಗಿದ್ದ ಹಿರಿಯ ಆಡಿಟರ್ ಸತ್ಯನಾರಾಯಣ ಆವರ ಮಾತನಾಡಿ ಶ್ರೀ ಅಖಿಲ ಹವ್ಯಕ ಮಹಾಸಭಾ ಜಿಲ್ಲಾ ಶಾಖೆ ಕಳದೆ ೩೩ ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಮುಂದಿನ ೨ ವರ್ಷಗಳ ಆಡಳಿತ ಮಂಡಳಿಗೆ ಉಪಾಧ್ಯಕ್ಞರಾಗಿ ಆಲೂರಿನ ನಾರಾಯಣ ಶರ್ಮ, ಕಾರ್ಯದರ್ಶಿಯಾಗಿ ರಾಜೀವ್ ಆಯುರ್ವೇದ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಡಾ. ಉದಯ್ ಹೆಗಡೆ, ಜಂಟಿ ಕಾರ್ಯದರ್ಶಿಯಾಗಿ ವಿದ್ಯಾನಗರದ ವೀಣಾ ಮಾರ್ಕಾಂಡೆ, ಖಜಾಂಜಿಯಾಗಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಕೃಷ್ಣಾನಂದ ಅವರನ್ನು ಆಯ್ಕೆ ಮಾಡಲಾಗಿದೆ.
ನಿರ್ದೇಶಕರುಗಳಾಗಿ ಎಸ್. ಕೆ. ಸತ್ಯನಾರಾಯಣ, ಪ್ರಕಾಶ್ ಯಾಜಿ, ಪ್ರಕಾಶ್ ಭಟ್, ಡಾ. ಪ್ರಕಾಶ್ ಎಲ್. ಹೆಗಡೆ, ಡಾ. ನಾರಾಯಣ್ ಪ್ರಕಾಶ್, ಕುಮುದಾ ಭಟ್, ಜಯಂತಿ, ಉದಯ ಶಂಕರ್ ಹಾಗೂ ಪರಮೇಶ್ವರ ಭಟ್ ಆವರು ಆಯ್ಕೆಯಾಗಿದ್ದಾರೆ ಎಂದು ವಿವರ ನೀಡಿದರು. ಶ್ರೀ ಅಖಿಲ ಹವ್ಯಕ ಮಹಾಸಭಾ ಅಂಗಸಂಸ್ಥೆಯಾಗಿ ಹಾಸನ ಪ್ರಾಂತೀಯ ಹವ್ಯಕ ಮಹಿಳ ವೇದಿಕೆಯನ್ನು ಅಖಿಲ ಹವ್ಯಕ ಮಹಾಸಭಾ ಮಹಿಳಾ ವೇದಿಕೆ ಸಂಚಾಲಕಿ ಮಧುರಾ ಗಾಂವ್ಕರ್ ಸೋಮವಾರದಂದು ಉದ್ಘಾಟಿಸಿದರು. ಅಧ್ಯಕ್ಷರಾಗಿ ಕುಮುದಾ ಭಟ್, ಉಪಾಧ್ಯಕ್ಷರಾಗಿ ವೀಣಾ ಭಟ್, ಭಾಗ್ಯ ಯಾಜಿ, ಖಜಾಂಚಿಯಾಗಿ ಮಾಲಿನಿ ಭಟ್, ಕಾರ್ಯದರ್ಶಿಯಾಗಿ ಅರುಂಧತಿ, ಜಂಟಿ ಕಾರ್ಯದರ್ಶಿಯಾಗಿ ಮಮತಾ, ಸಂಚಾಲಕಾಗಿ ಪ್ರೇಮಾ ಭಟ್, ನಿರ್ದೇಶಕರಾಗಿ ಮಮತಾ ಹೆಗಡೆ, ಡಾ. ಹರಿಣಿ, ಮಾಲಿನಿ, ಸುವರ್ಣ ಶಿವಶಂಕರ್, ಗೌರಿ ಭಟ್, ಭಾಗ್ಯಶ್ರೀ, ಶೃತಿ ಹೆಗಡೆ, ವೀಣಾ ಶರ್ಮ, ನಾಗರತ್ನ, ನಿವೇದಿತಾ, ಲೀಲಾ ಆಯ್ಕೆಯಾಗಿದ್ದಾರೆ.ಅಧ್ಯಕ್ಷೆ ಕುಮುದಾ ಭಟ್ ಆವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಮುದಾ ಭಟ್ ಅವರು ಹೆಣ್ಣಿಗೆ ಹೆಣ್ಣು ಎಷ್ಟು ಸಹಕಾರಿಯಾಗಿರುತ್ತಾರೆ ಎಂಬುದು ನಮ್ಮ ಸಂಘಟನೆಯಲ್ಲಿ ಸದಸ್ಯರ ಜೊತೆಯಲ್ಲಿ ಕೆಲಸ ಮಾಡುವಾಗ ಆರಿವಿಗೆ ಬಂತು. ಪ್ರತಿಯೊಬ್ಬರೂ ತಮ್ಮದೇ ಆದ ನೆರವು ಸಹಕಾರ ನೀಡಿದರು ಎಂದು ಕಳೆದೆರಡು ವರ್ಷಗಳಲ್ಲಿ ಕೈಗೊಂಡ ಕಾರ್ಯಕ್ರಮಗಳ ಮಾಹಿತಿ ನೀಡಿ ಶ್ಲಾಘಿಸಿದರು. ಪ್ರಮುಖರಾಗ ಪರಮೇಶ್ ಭಟ್, ಟಿ.ಎಂ. ಭಟ್ ಮಾತನಾಡಿ ಬ್ರಾಹ್ಮಣ ಸಂಘಟನೆಯಲ್ಲಿ ಹವ್ಯಕ ಮಹಾಸಭಾ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸಿದೆ ಎಂದು ಪ್ರಶಂಶಿಸಿದರು.ಕುಮಾರ್, ಅನಿರುದ್ಧ ಹೆಗಡೆ, ಶ್ರೀಸ್ಕಂಧ, ದೃತಿ ಭಟ್, ಡಾ. ನಯನಕುಮಾರ್, ನಾರಾಯಣ ಪ್ರಕಾಶ್, ಪ್ರಕಾಶ್ ಹೆಗಡೆ, ಡಿ. ಎಸ್. ಧನ್ಯತಾ, ನಾರಾಯಣ ಶರ್ಮ- ವೀಣಾ ಶರ್ಮ ದಂಪತಿಯನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಆಹ್ವಾನಿತರಾಗಿ ಆಗಮಿಸಿದ್ದ ಮಧುರಾ ಗಾಂವ್ಕರ್ ಮಾತನಾಡಿ ಶಾಂತಿ, ಪ್ರೀತಿ, ತ್ಯಾಗ, ಅನುಬಂಧ, ಸಾಮರಸ್ಯಕ್ಕೆ ಸಾಕ್ಷಿಯಂತಿರುವ ಹಾಸನ ಜಿಲ್ಲೆಯ ಬಗ್ಗೆ ಇತಿಹಾಸವನ್ನು ನನಗೆ ತುಂಬಾ ಇಷ್ಟ. ವಿದ್ಯಾವಂತಳಾಗಿರುವ ಮಹಿಳೆ ಪ್ರಜ್ಞಾವಂತಳಾಗಿದ್ದಾಳೆ. ಮನೆಯಿಂದ ಹೊರಬಂದು ಆರೋಗ್ಯಪೂರ್ಣ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾಳೆ ಎಂದು ಸ್ಮರಿಸಿದ ಅವರು ಎಂದಿಗೂ ನಮ್ಮತನವನ್ನು ಬಿಡಬಾರದು, ನಮ್ಮ ಮಕ್ಕಳೆಗೆ ಹವ್ಯಕ ಭಾಷೆ ಮರೆಯದಂತೆ ಸಂಸ್ಕಾರ ಕೊಡಬೇಕು. ಮುಂದಿನ ತಲೆಮಾರಿನ ಮಕ್ಕಳಿಗೆ ಭಾಷೆಯ ಸೊಗಡು, ಮೌಲ್ಯಗಳು ಉಳಿಸಿ ಬೆಳೆಸುವ ಶಿಕ್ಷಣ ನೀಡಬೇಕು ನಮ್ಮ ಪೂರ್ವಿಕರ ಜಮೀನನ್ನು ಮುಂದಿನ ಪೀಳಿಗೆಗೆ ರಕ್ಷಿಸಿ ಇಡಬೇಕು ಎಂದು ಕಿವಿಮಾತು ಹೇಳಿದರು.ಇದೇ ವೇಳೆ ಅರ್ಚನಾ ಭಟ್ ಪ್ರಾರ್ಥಿಸಿದರು. ಪ್ರೇಮ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕೆ. ಜಿ. ಕೃಷ್ಣಮೂರ್ತಿ ವಂದಿಸಿರು.