ಹೆಲ್ಮಟ್ ಕಡ್ಡಾಯ ಇದ್ದರೂ ಪೊಲೀಸರೇ ಧರಿಸಲು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ಧರಿಸಿದರೂ ಕಾರ್ಯಾಚರಣೆ ವೇಳೆ ಧರಿಸುವ ಹಾಫ್ ಹೆಲ್ಮಟ್ ಅನ್ನು ಧರಿಸುತ್ತಾರೆ ಎಂಬ ಬಗ್ಗೆ ಎಲ್ಲೆಡೆಯಿಂದ ದೂರುಗಳು ಕೇಳಿ ಬರುತ್ತಿವೆ. ಪೊಲೀಸರೇ ಮೊದಲು ಧರಿಸಿದರೆ ಉಳಿದವರಿಗೂ ಪ್ರೇರಣೆಯಾಗುತ್ತದೆ. ಇಲ್ಲದಿದ್ದರೆ ಕಾನೂನನ್ನು ಹೇರಲು ನೈತಿಕತೆ ಉಳಿಯುವುದಿಲ್ಲ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಹೆಲ್ಮೆಟ್ ಬಳಕೆ ಕಡ್ಡಾಯವಿದ್ದರೂ ಬಳಸದೇ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿ ವಾಹನ ಓಡಿಸಲು ಡಿ.12 ರವರೆಗೆ ಅವಧಿ ಕಲ್ಪಿಸಲಾಗಿತ್ತು. ಜಿಲ್ಲೆಯಲ್ಲಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಲು ಗಡುವು ನೀಡಿದ್ದರು. ಹೆಲ್ಮೆಟ್ ಕಡ್ಡಾಯಕ್ಕೆ ಸ್ವತಃ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಕುಶಲ್ ಚೌಕ್ಸೆ ನಗರದಲ್ಲಿ ಶುಕ್ರವಾರ ರಸ್ತೆಗಿಳಿದು ಕಾರ್ಯಾಚರಣೆ ನಡೆಸಿ ದ್ವಿ ಚಕ್ರವಾಹನ ಸವಾರರಿಗೆ ಬಿಸಿ ಮುಟ್ಟಿಸಿದರು.ಹೆಲ್ಮೆಟ್ ಧರಿಸದೆ ಬರುವ ಸವಾರರು ಸಾಕಷ್ಟು ಸಬೂಬುಗಳನ್ನು ಹೇಳಿದರೂ ಪೋಲಿಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಕೇಳದೆ ದಂಡವನ್ನು ಕಟ್ಟಿಸಿದರು. ದಂಡ ಕಟ್ಟಿದವರಲ್ಲಿ ಅಧಿಕಾರಿಗಳು, ವಕೀಲರು, ಮಹಿಳೆಯರು, ವೃದ್ದರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಹೆಚ್ಚಿಗೆ ಇದ್ದರು.
ಪೊಲೀಸ್ ಕಾರ್ಯಾಚರಣೆಚಿಕ್ಕಬಳ್ಳಾಪುರ ಪೊಲೀಸರು ಗುಂಪು ಗುಂಪಾಗಿ ರಸ್ತೆಗೆ ಇಳಿದಿದ್ದರು. ನಗರದ ಅಂಬೇಡ್ಕರ್ ವೃತ್ತ, ಸರ್ ಎಂವಿ ವೃತ್ತ, ಮತ್ತು ಬಜಾರ್ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ, ಗಲ್ಲಿಗಳಲ್ಲಿ ತಪ್ಪಿಸಿ ಕೊಂಡು ಹೋಗುತ್ತಿದ್ದ ಹೆಲ್ಮೆಟ್ ರಹಿತ ಸವಾರರನ್ನು ಬೆಂಬಿಡದೆ ಬೆನ್ನು ಹತ್ತಿ ಸ್ವತಃ ಎಸ್.ಪಿ. ಕುಶಲ್ ಚೌಕ್ಸೆ ದ್ವಿ ಚಕ್ರವಾಹನ ಸವಾರರಿಗೆ ಬಿಸಿ ಮುಟ್ಟಿಸಿದರು.
ಅರ್ಧ ಹೆಲ್ಮೆಟ್ ಧರಿಸಿ, ಹೆಲ್ಮೆಟ್ ಧರಿಸದ ಹಿಂಬದಿ ಸವಾರರಿಗೆ ಉತ್ತಮ ಗುಣ ಮಟ್ಟದ ಹೆಲ್ಮೆಟ್ ಧರಿಸಿ ಎಂದು ಸಲಹೆ ನೀಡುತ್ತಿದ್ದುದು ಸಾಮಾನ್ಯ ವಾಗಿತ್ತು. ಯಾವುದೇ ಒತ್ತಡಕ್ಕೂ ಮಣಿಯದೆ ದಂಡ ಹಾಕುತ್ತಿರುವುದು ಕೆಲವರಿಗೆ ತೊಂದರೆಯಾಗುತ್ತಿದ್ದರೂ ಸಹ ಸಾರ್ವಜನಿಕ ವಲಯದಲ್ಲಿ ಪೊಲೀಸರ ಕಾರ್ಯದ ಕುರಿತು ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿತ್ತು.ವೊಲೀಸರು ಹೆಲ್ಮೆಟ್ ಧರಿಸಲಿ
ಹೆಲ್ಮಟ್ ಕಡ್ಡಾಯ ಇದ್ದರೂ ಪೊಲೀಸರೇ ಧರಿಸಲು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ಧರಿಸಿದರೂ ಕಾರ್ಯಾಚರಣೆ ವೇಳೆ ಧರಿಸುವ ಹಾಫ್ ಹೆಲ್ಮಟ್ ಅನ್ನು ಧರಿಸುತ್ತಾರೆ ಎಂಬ ಬಗ್ಗೆ ಎಲ್ಲೆಡೆಯಿಂದ ದೂರುಗಳು ಕೇಳಿ ಬರುತ್ತಿವೆ. ಪೊಲೀಸರೇ ಮೊದಲು ಧರಿಸಿದರೆ ಉಳಿದವರಿಗೂ ಪ್ರೇರಣೆಯಾಗುತ್ತದೆ. ಆದರೆ ಪೊಲೀಸರ ತಾವೇ ಮೊದಲು ಧರಿಸದೆ ಉಳಿದವರ ಮೇಲೆ ಕಾನೂನನ್ನು ಹೇರಲು ಏನು ನೈತಿಕತೆ ಉಳಿದಿರುತ್ತದೆ ಎಂಬ ಬಗ್ಗೆ ಅಸಮಾಧಾನವೂ ಇದೆ ಎಂದರುಗುಣಮಟ್ಟದ ಹೆಲ್ಮೆಟ್ ಖರೀದಿಸಿ
ನಗರದ ಮುಖ್ಯರಸ್ತೆ ಬದಿಗಳಲ್ಲಿ, ಹೊರವಲಯ, ಹೆದ್ದಾರಿಗಳ ಬದಿಯಲ್ಲಿ ಹೆಲ್ಮೆಟ್, ಕೂಲಿಂಗ್ ಗ್ಲಾಸ್‌ಗಳನ್ನು ಮಾರಾಟ ಮಾಡುವವರಿಗೆ ಹೆಲ್ಮೆಟ್ ಕಡ್ಡಾಯ ಎಂಬ ನಿಯಮ ವರವಾಗಿತ್ತು. ಅಪರೂಪಕ್ಕೂ ಹೆಲ್ಮಟ್ ಮಾರಾಟವಾಗದ ಈ ಕೇಂದ್ರಗಳಲ್ಲಿ ಈಗ ಜೋರು ವ್ಯಾಪಾರ ನಡೆಯುತ್ತಿದೆ. ಆದರೆ, ಈ ಹೆಲ್ಮೆಟ್ ಗಳ ಗುಣಮಟ್ಟದ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸವಾರರು ಗುಣಮಟ್ಟ ಖಾತರಿ ಪಡಿಸಿಕೊಂಡು ಹೆಲ್ಕೆಟ್ ಖರೀದಿಸಿ ಎಂಬುದು ಎಸ್.ಪಿ. ಕುಶಲ್ ಚೌಕ್ಸೆ ಸಲಹೆಯಾಗಿತ್ತು.