ಕುಶಾಲನಗರ: ಜನರ ಬಳಿಗೆ ಜಾನಪದ ರಾಜ್ಯಮಟ್ಟದ ಅದ್ದೂರಿ ಕಾರ್ಯಕ್ರಮ

| Published : Oct 02 2024, 01:06 AM IST

ಕುಶಾಲನಗರ: ಜನರ ಬಳಿಗೆ ಜಾನಪದ ರಾಜ್ಯಮಟ್ಟದ ಅದ್ದೂರಿ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಜನಪದ ಗ್ರಾಮದಲ್ಲಿ ಜನರ ಬಳಿಗೆ ಜಾನಪದ ರಾಜ್ಯಮಟ್ಟದ ಅದ್ದೂರಿ ಕಾರ್ಯಕ್ರಮ ನಡೆಯಿತು. ಸ್ಥಳೀಯ ಗಣ್ಯರು ಮತ್ತು ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ಸಮೀಪದ ಕೂಡ್ಲೂರು ಬಳಿ ವೀರಭೂಮಿ ಜನಪದ ಗ್ರಾಮದಲ್ಲಿ ಜನರ ಬಳಿಗೆ ಜಾನಪದ ರಾಜ್ಯಮಟ್ಟದ ಅದ್ದೂರಿ ಕಾರ್ಯಕ್ರಮ ನಡೆಯಿತು.

ಕನ್ನಡದ ಖ್ಯಾತ ದೇಸಿ ವಾಹಿನಿ ಜನಪದ ಸಿರಿ ಕನ್ನಡ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಪ್ರಖ್ಯಾತ ಜಾನಪದ ಕಲಾವಿದೆ ಪದ್ಮಶ್ರೀ ಡಾ ರಾಣಿ ಮಾಚಯ್ಯ ಅವರ ತಂಡದಿಂದ ಕೊಡಗಿನ ಉಮ್ಮತ್ತಾಟ್ ನೃತ್ಯ, ಜೇನು ಕುರುಬ ಬುಡಕಟ್ಟು ಜನಪದ ಖ್ಯಾತರಾದ ಜೆ ಕೆ ರಾಮ ಅವರ ತಂಡದಿಂದ ಬುಡಕಟ್ಟು ನೃತ್ಯ, ಮಂಡ್ಯದ ಖ್ಯಾತ ಸೋಭಾನೆ ಕಲಾವಿದರು, ವೀರಗಾಸೆ, ಗೊರವ ಕುಣಿತ, ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಕೆ ಪಿ ದೇವರಾಜ್ ತಂಡದಿಂದ ಪೂಜಾ ಕುಣಿತ, ಕಂಸಾಳೆ ಕಲಾವಿದ ಮಂಜು ತಂಡದಿಂದ ಕಂಸಾಳೆ ನೃತ್ಯ, ಜಾನಪದ ಗಾಯನ, ಬಂಜಾರ ನೃತ್ಯ ಪ್ರದರ್ಶನ, ಡೊಳ್ಳು ಕುಣಿತ, ಸಿದ್ಧಿ ಬುಡಕಟ್ಟು ನೃತ್ಯ ಜಾದು ಪ್ರದರ್ಶನ ನಡೆಯಿತು.

ಜನಪದ ಸಿರಿ ಕನ್ನಡದ ಸಂಪಾದಕರಾದ ಜರಗನಹಳ್ಳಿ ಕಾಂತರಾಜು ಅವರು ಕಾರ್ಯಕ್ರಮ ಉಸ್ತುವಾರಿ ವಹಿಸಿದ್ದರು.

ಇದೇ ಸಂದರ್ಭ ಸ್ಥಳೀಯ ಗಣ್ಯರು ಮತ್ತು ಕಲಾವಿದರಿಗೆ ಜನಪದ ಸಿರಿ ಕನ್ನಡ ಮತ್ತು ವೀರಭೂಮಿ ಜನಪದ ಗ್ರಾಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ವೀರಭೂಮಿ ಪ್ರವಾಸಿ ಗ್ರಾಮದ ವ್ಯವಸ್ಥಾಪಕ ನಿರ್ದೇಶಕರಾದ ಗೋವಿಂದ ಭಟ್, ಅಧ್ಯಕ್ಷರಾದ ಎಸ್ ಕೆ ಸತೀಶ್, ನಿರ್ದೇಶಕರಾದ ಬಿ ಪಿ ಬೆಳ್ಳಿಯಪ್ಪ, ವಿಜಯಲಕ್ಷ್ಮಿ ಎಂ ವಿ ನಾರಾಯಣ, ಬಿ ಆರ್ ನಾಗೇಂದ್ರ ಪ್ರಸಾದ್, ಆರ್ ಕೆ ನಾಗೇಂದ್ರ ಬಾಬು, ಎಸ್ಎನ್ ರಾಜೇಂದ್ರ, ಎಂ ಜಿ ಗಂಗಾಧರ್, ವೀರಭೂಮಿ ಜನಪದ ಗ್ರಾಮದ ವ್ಯವಸ್ಥಾಪಕರಾದ ಹೆಚ್ ಆರ್ ನಾಗೇಂದ್ರ, ಜಿ ಪೃಥ್ವಿರಾಜ್, ಪ್ರಧಾನ ವ್ಯವಸ್ಥಾಪಕರಾದ ಅವಿನಾಶ್, ವ್ಯವಸ್ಥಾಪಕಿ ಪುಷ್ಪ ಮತ್ತಿತರರು ಇದ್ದರು.