ಸ್ವ ನಿಧಿ ಯೋಜನೆಯ ಯಶಸ್ಸಿನ ಹೊರತಾಗಿಯೂ, ಸೀಮಿತ ಸಾಕ್ಷರತೆ, ಅರಿವಿನ ಕೊರತೆ ಮತ್ತು ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಗಳ ಪರಿಚಯವಿಲ್ಲದ ಕಾರಣ ಅನೇಕ ಬೀದಿ ಬದಿ ವ್ಯಾಪಾರಿಗಳು ಯೋಜನೆಯ ಸೌಲಭ್ಯಗಳನ್ನು ಪಡೆಯಲು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇದನ್ನು ಎದುರಿಸಲು ‘ಸ್ವ-ನಿಧಿ ಮಿತ್ರ’ ಎಂಬ ಪರಿಕಲ್ಪನೆ ಪರಿಚಯಿಸಲಾಗಿದೆ.
ಕನ್ನಡಪ್ರಭ ವಾರ್ತೆ ಕೋಲಾರಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆಯಡಿ ಬೀದಿ ವ್ಯಾಪಾರಿಗಳಿಗೆ ರಚನಾತ್ಮಕ ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸಲು ಸ್ವ-ನಿಧಿ ಮಿತ್ರ ಪರಿಕಲ್ಪನೆಯು ಅವಶ್ಯಕವಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ, ಕೆ.ಶ್ರೀನಿವಾಸ ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಭವನದಲ್ಲಿ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯಡಿ ಸ್ವ-ನಿಧಿ ಮಿತ್ರ ಎಂಬ ನೂತನ ಪರಿಕಲ್ಪನೆಯ ಕುರಿತು ಆಯೋಜಿಸಿದ್ದ ಅರಿವು ಕಾರ್ಯಾಗಾರದಲ್ಲಿ ಸ್ವ-ನಿಧಿ ಮಿತ್ರರು ಹಾಗೂ ಅನುಷ್ಠಾನ ಇಲಾಖೆಯ ಸಿಬ್ಬಂದಿ ವರ್ಗದವರನ್ನು ಉದ್ದೇಶಿಸಿ ಮಾತನಾಡಿದರು. ಬೀದಿ ವ್ಯಾಪಾರಿಗಳಿಗೆ ಬಂಡವಾಳ
ಕೇಂದ್ರ ವಸತಿ ನಗರ ವ್ಯವಹಾರಗಳ ಸಚಿವಾಲಯ ಜೂ.೧, ೨೦೨೦ ರಿಂದ ಬೀದಿ ಬದಿ ವ್ಯಾಪಾರಿಗಳಿಗೆ ಕಿರು ಸಾಲ ಸೌಲಭ್ಯ ಒದಗಿಸಲು ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ (ಪಿಎಂ ಸ್ವ-ನಿಧಿ) ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದು ಕ್ರೆಡಿಟ್ ಗ್ಯಾರಂಟಿ ಬೆಂಬಲದೊಂದಿಗೆ ಮೂರು ಹಂತಗಳಲ್ಲಿ ಕ್ರಮವಾಗಿ ೧೫,೦೦೦, ೨೫,೦೦೦ಮತ್ತು ೫೦,೦೦೦ ರವರೆಗೆ ಸಾಲ ನಿಗದಿಪಡಿಸಲಾಗಿದೆ. ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯು ಭಾರತದಾದ್ಯಂತ ಲಕ್ಷಾಂತರ ಬೀದಿ ವ್ಯಾಪಾರಿಗಳಿಗೆ ದುಡಿಯುವ ಬಂಡವಾಳ ಮತ್ತು ಡಿಜಿಟಲ್ ವಹಿವಾಟಿನ ಪ್ರೋತ್ಸಾಹ ಒದಗಿಸುತ್ತಿದೆ ಎಂದು ವಿವರಿಸಿದರು.‘ಸ್ವ-ನಿಧಿ ಮಿತ್ರ’ ಯೋಜನೆ
ಯೋಜನೆಯ ಯಶಸ್ಸಿನ ಹೊರತಾಗಿಯೂ, ಸೀಮಿತ ಸಾಕ್ಷರತೆ, ಅರಿವಿನ ಕೊರತೆ ಮತ್ತು ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಗಳ ಪರಿಚಯವಿಲ್ಲದ ಕಾರಣ ಅನೇಕ ಬೀದಿ ಬದಿ ವ್ಯಾಪಾರಿಗಳು ಯೋಜನೆಯ ಸೌಲಭ್ಯಗಳನ್ನು ಪಡೆಯಲು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇದನ್ನು ಎದುರಿಸಲು ‘ಸ್ವ-ನಿಧಿ ಮಿತ್ರ’ ಎಂಬ ಪರಿಕಲ್ಪನೆ ಪರಿಚಯಿಸಲಾಗುತ್ತಿದ್ದು, ಸಮುದಾಯ ಆಧಾರಿತ ವ್ಯಕ್ತಿಗಳು ಬೀದಿ ವ್ಯಾಪಾರಿಗಳನ್ನು ಉತ್ತೇಜಿಸುವ ಮೂಲಕ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗಿರುತ್ತಾರೆ ಎಂದು ತಿಳಿಸಿದರು. ಜಿಲ್ಲಾ ಲೀಡ್‌ಬ್ಯಾಂಕ್ ವ್ಯವಸ್ಥಾಪಕ ಮಹೇಶ್‌ಜೋಷಿ, ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆಯಡಿ ಬೀದಿ ವ್ಯಾಪಾರಿಗಳಿಗೆ ರಚನಾತ್ಮಕ ಮಾರ್ಗದರ್ಶನ ಮತ್ತು ಬೆಂಬಲ ಒದಗಿಸಲು ಔಪಚಾರಿಕವಾಗಿ ನೇಮಕಗೊಂಡ ಸಹಾಯಕರಾಗಿ ಸ್ವ-ನಿಧಿ ಮಿತ್ರರು ಕಾರ್ಯನಿರ್ವಹಿಸುತ್ತಾರೆ. ಸಾಲಕ್ಕಾಗಿ ಮತ್ತು ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಲು ಕೆ.ವೈ.ಸಿ ದಾಖಲಾತಿಗಳನ್ನು ಸಲ್ಲಿಸಲು ಮತ್ತು ಯೋಜನೆಯ ಪ್ರಯೋಜನಗಳನ್ನು ಪಡೆಯಲು ಡಿಜಿಟಲ್ ಪಾವತಿ ವಿಧಾನಗಳನ್ನು ಅಳವಡಿಸಿಕೊಳ್ಳಲು ಸ್ವ-ನಿಧಿ ಮಿತ್ರರು ಬೀದಿ ವ್ಯಾಪಾರಿಗಳಿಗೆ ಸಹಾಯ ಮಾಡುತ್ತಾರೆ ಎಂದರು.ಸ್ವ-ನಿಧಿ ಮಿತ್ರರ ನೆರವು ಪಡೆಯಿರಿ
ಸ್ವ-ನಿಧಿ ಮಿತ್ರರು ಬೀದಿ ವ್ಯಾಪಾರಿಗಳು ನಗರ ಸ್ಥಳೀಯ ಸಂಸ್ಥೆಗಳ ಮತ್ತು ಹಣಕಾಸು ಸಂಸ್ಥೆಗಳ ನಡುವೆ ಸಂಪರ್ಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ, ಸುಗಮ ಸಂವಹನ, ಪರಿಣಾಮಕಾರಿ ಕುಂದುಕೊರತೆ ಪರಿಹಾರ ಮತ್ತು ಕಾರ್ಯಕ್ರಮದ ಫಲಿತಾಂಶಗಳ ನಿಖರವಾದ ವರದಿಯನ್ನು ಖಚಿತಪಡಿಸುತ್ತಾರೆ ಎಂದು ತಿಳಿಸಿದರು.ಯೋಜನೆ ಕುರಿತು ಮಾರ್ಗದರ್ಶನಸಂಪನ್ಮೂಲ ವ್ಯಕ್ತಿ ಸಮದಾಯ ಸಂಘಟನಾಧಿಕಾರಿ ಶಶಿಕುಮಾರ್‌ರವರು ಸ್ವನಿಧಿ ಮಿತ್ರ ಯೋಜನೆಯ ಉದ್ದೇಶಗಳು, ಯೋಜನೆಯ ಅನುಷ್ಠಾನದಲ್ಲಿ ಸ್ವ-ನಿಧಿ ಮಿತ್ರರ ಪಾತ್ರ, ಸಾಮರ್ಥ್ಯಾಭಿವೃದಿ, ನಿಯೋಜನೆ ಮತ್ತು ಬೆಂಬಲ, ಮೇಲ್ವಿಚಾರಣೆ ಮತ್ತು ವರದಿ ಮುಂತಾದ ವಿಷಯಗಳ ಕುರಿತು, ಮಾರ್ಗದರ್ಶನ ನೀಡಿದರು.ಸಭೆಯಲ್ಲಿ ಅಭಿಯಾನ ವ್ಯವಸ್ಥಾಪಕರಾದ ಶ್ರೀ. ಗೋವಿಂದಮೂರ್ತಿ, ಸಂಘಟನಾಧಿಕಾರಿ ಮಂಜುನಾಥ, ನಗರ ಕೌಶಲ್ಯಾಭಿವೃದ್ಧಿ ಇಲಾಖೆಯ ಖುತೇಜಾ, ಮದನ್, ವಂದನಾ, ವೆಂಕಟರತ್ನ, ವೀರೇಂದ್ರ, ಶ್ರೀನಿವಾಸ್, ಅಂಬಿಕಾ ಇದ್ದರು.