ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಇತ್ತೀಚೆಗೆ ಬಿದ್ದಿರುವ ಮಳೆಯಿಂದಾಗಿ ೬೦ ವರ್ಷಗಳಿಂದ ಓಡಾಡುತ್ತಿದ್ದ ರಸ್ತೆ ಮುಚ್ಚಿಹೋಗಿದ್ದು ತಮ್ಮ ದೈನಂದಿನ ಕೆಲಸಗಳಿಗೆ ತೆರಳಲು ಪರದಾಡುವ ಸ್ಥಿತಿ ಉಂಟಾಗಿದೆ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಂಗಾರಪೇಟೆ ತಾಲೂಕಿನ ಮಾಗೇರಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಸರಾಗವಾಗಿ ಹರಿದುಹೋಗುತ್ತಿದ್ದ ಮಳೆ ನೀರು ಕಾಲುವೆಯನ್ನು ಗ್ರಾಮದ ಕೆಲವರು ಮುಚ್ಚಿದ ಪರಿಣಾಮವಾಗಿ ರಸ್ತೆಯಲ್ಲಿ ನೀರು ಶೇಖರಣೆಗೊಂಡು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ ಎಂದು ತಮ್ಮ ಅಳಲುತೋಡಿಕೊಂಡಿದ್ದಾರೆ.
ರಸ್ತೆ ಒತ್ತುವರಿ ಪರಿಣಾಮಗ್ರಾಮದ ಹೊರವಲಯದಲ್ಲಿ ನಾಲ್ಕು ಐದು ಕುಟುಂಬಗಳು ಸುಮಾರು ೭೦ ವರ್ಷದಿಂದ ವಾಸವಾಗಿವೆ, ೭೦ ವರ್ಷದಿಂದಲೂ ಈಗಿರುವ ಸರ್ಕಾರಿ ರಸ್ತೆಯಲ್ಲಿ ಸಂಚಾರ ನಡೆಸುತ್ತಿದ್ದೇವೆ. ಓಡಾಟ ನಡೆಸುತ್ತಿದ್ದ ಸರ್ಕಾರಿ ರಸ್ತೆ ಪಕ್ಕದಲ್ಲಿ ಕಾಲುವೆ ಹಾದು ಹೋಗಿದ್ದು ಮಳೆ ನೀರು ಸರಾಗವಾಗಿ ಹರಿದು ಚೆಕ್ ಡ್ಯಾಂ ನಲ್ಲಿ ಶೇಖರಣೆಯಾಗುತ್ತಿತ್ತು. ಆದರೆ ಇತ್ತೀಚೆಗೆ ಸರ್ಕಾರಿ ರಸ್ತೆ ಪಕ್ಕದ ಜಮೀನನ್ನು ಗ್ರಾಮದ ಚಿನ್ನಪ್ಪ ಹಾಗೂ ಅವರು ಮಕ್ಕಳು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡು ರಸ್ತೆ ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೇ ರಸ್ತೆಯನ್ನು ಬಂದ್ ಮಾಡಿದ್ದಾರೆ ಇದರಿಂದಾಗಿ ಚೆಕ್ ಡ್ಯಾಂಗೆ ಹೋಗುತ್ತಿದ್ದ ಮಳೆ ನೀರು ರಸ್ತೆಯಲ್ಲಿ ನಿಂತು ನಿವಾಸಿಗಳ ಸಂಚಾರಕ್ಕೆ ಅಡ್ಡಿಯಾಗಿದೆ. .
ಜಿಲ್ಲಾಧಿಕಾರಿಗೆ ದೂರುರಸ್ತೆ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಿಗೆ ದೂರು ನೀಡಿರುವ ನಿವಾಸಿಗಳು ರಸ್ತೆಯನ್ನು ಸರಿಪಡಿಸುವಂತೆ ಮನವಿ ಮಾಡಿದರು. ಸ್ಥಳಕ್ಕೆ ಬಂಗಾರಪೇಟೆ ತಹಸೀಲ್ದಾರ್ ಬಂದು ಪರಿಶೀಲನೆ ಮಾಡಿ ಸರ್ವೇ ನಡೆಸಿ ರಸ್ತೆ ದುರಸ್ತಿಪಡಿಸುವುದಾಗಿ ಹೇಳಿ ಹೋಗಿದ್ದಾರೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂದು ನಿವಾಸಿ ಕೃಷ್ಣಪ್ಪ ಹೇಳಿದರು.