ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ಇಫ್ತಾರ್ ಕೂಟದ ಮೂಲಕ ಸಮಾಜದ ಎಲ್ಲ ವರ್ಗದ ಜನರ ನಡುವೆ ಸೌಹಾರ್ದತೆ ಮೂಡಿಸಲು ಸಾಧ್ಯ ಎಂದು ಉದ್ಯಮಿ ಹಾಗೂ ಕಾಂಗ್ರೆಸ್ ಯುವ ಮುಖಂಡ ಗುರುರಾಜ ಉದಪುಡಿ ಹೇಳಿದರು.ಪಟ್ಟಣದ ಚಾಂದತಾರಾ ಮಸೀದಿಯಲ್ಲಿ ಉದಪುಡಿ ಪರಿವಾರದ ವತಿಯಿಂದ ಹಮ್ಮಿಕೊಂಡ ಇಫ್ತಾರ ಕೂಟದಲ್ಲಿ ಮಾತನಾಡಿದ ಅವರು, ರಂಜಾನ್ ಮಾಸವು ಅತ್ಯಂತ ವೈಶಿಷ್ಟಪೂರ್ಣವಾದದ್ದು. ಮುಸ್ಲಿಮರು ಅತ್ಯಂತ ಪ್ರಾಧಾನ್ಯತೆಯೊಂದಿಗೆ ರಂಜಾನ್ ರೋಜಾ ನಡೆಸುತ್ತಾರೆ. ಈ ಪ್ರಯುಕ್ತ ನಡೆಯುವ ಇಫ್ತಾರ್ ಕೂಟಗಳು ಸಮಾಜಕ್ಕೆಸಾಮರಸ್ಯ ಸಂದೇಶ ನೀಡುವ ಆಚರಣೆಯಾಗಿದೆ ಎಂದು ಹೇಳಿದರು.
ಅಂಜುಮನ್-ಏ-ಇಸ್ಲಾಂ ಕಮಿಟಿ ಅಧ್ಯಕ್ಷ ಅಲ್ಲಾಸಾಬ ಯಾದವಾಡ ಮಾತನಾಡಿ, ರಂಜಾನ್ ಮಾಸದಲ್ಲಿ ಒಂದು ತಿಂಗಳ ಕಠಿಣ ವ್ರತಕ್ಕೆ ತೆರೆ ಬೀಳುವ ಹಬ್ಬವೇ ಈದುಲ್ ಫಿತ್ರ್ ರಂಜಾನ್ ಹಬ್ಬವಾಗಿದೆ. ಇಸ್ಲಾಂ ಧರ್ಮಿಯರಿಗೆ ಇರುವ ಎರಡು ಪ್ರಮುಖ ಹಬ್ಬಗಳಲ್ಲಿ ಇದು ಅತ್ಯಂತ ಪವಿತ್ರ ಹಾಗೂ ಮಹತ್ವದ್ದು. ಈ ಹಬ್ಬದಲ್ಲಿ ಶ್ರೀಮಂತ, ಬಡವ, ಸಾಮಾನ್ಯ ಎಲ್ಲರೂ ತಮ್ಮ ಕೈಲಾದಷ್ಟು ದಾನ ಮಾಡಬೇಕು. ಸಾಮಾನ್ಯವಾಗಿ ಬಡವರಿಗೆ ವಿಶೇಷ ದಾನ ನೀಡಲಾಗುತ್ತದೆ ಎಂದು ತಿಳಿಸಿದರು.ಈ ವೇಳೆ ಜಿಲ್ಲಾ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶಿವಾನಂದ ಉದಪುಡಿ, ಕಾಂಗ್ರೆಸ್ ಯುವ ಮುಖಂಡ ಗುರುರಾಜ ಉದಪುಡಿ, ಪವನ ಉದಪುಡಿ, ಬೀರಪ್ಪ ಮಾಯನ್ನವರ, ಭೀಮನಗೌಡ ಪಾಟೀಲ, ರವಿ ಬೋಳಿಶೆಟ್ಟಿ, ಅಂಜುಮನ್-ಏ-ಇಸ್ಲಾಂ ಕಮಿಟಿ ಅಧ್ಯಕ್ಷ ಅಲ್ಲಾಸಾಬ ಯಾದವಾಡ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ರಫೀಕ ಬೈರಕದಾರ, ಮುತ್ತಪ್ಪ ಚೌಧರಿ, ಕೃಷ್ಣಾ ಹೂಗಾರ, ಮಾನಿಂಗಪ್ಪ ಹುಂಡೇಕಾರ, ಲೋಕಣ್ಣ ಉಳ್ಳಾಗಡ್ಡಿ, ಚನ್ನಬಸು ಹಬ್ಬಳ್ಳಿ, ಕೆ.ಕೆ.ಭಾಗವಾನ, ಶಬ್ಬೀರ ಗುದಗಿ, ನಬಿಸಾಬ ಇಂಗಳಗಿ, ಅಬ್ದುಲ್‌ರಹಿಮಾನ ತೊರಗಲ್, ಪತ್ರಕರ್ತ ಹಸನ ಮಹಾಲಿಂಗಪೂರ, ರಫೀಕ ಕಲಾದಗಿ, ರಫೀಕ ಬಾಗವಾನ, ಸುಲ್ತಾನ್ ಕಲಾದಗಿ, ನಬಿ ಮೇಲಿನಮನಿ ಹಾಗೂ ಹಿಂದೂ-ಮುಸ್ಲಿಂ ಬಾಂಧವರು ಇದ್ದರು.
--ಕೋಟ್
ರಂಜಾನ ಹಬ್ಬ ಸಾಮರಸ್ಯದ ಪ್ರತೀಕ. ಇದು ತ್ಯಾಗ ಮತ್ತು ಐಕ್ಯತಾ ಭಾವಕ್ಯ ಪ್ರತಿಬಿಂಬವಾಗಿದೆ. ರಂಜಾನ ಮಾಸದಲ್ಲಿ ಮುಸ್ಲಿಂ ಬಾಂಧವರು ನಿರಂತರವಾಗಿ 30 ದಿನಗಳ ಕಾಲ ಉಪವಾಸವಿದ್ದು ದೇವರ ಕೃಪೆಗೆ ಪಾತ್ರರಾಗುತ್ತಾರೆ.ಶಿವಾನಂದ ಉದಪುಡಿ . ಉಪಾಧ್ಯಕ್ಷರು, ಬಿಡಿಸಿಸಿ ಬ್ಯಾಂಕ್ ಬಾಗಲಕೋಟೆ.
;Resize=(128,128))
;Resize=(128,128))
;Resize=(128,128))
;Resize=(128,128))