ಕಾಂಗ್ರೆಸ್‌ ಸರ್ಕಾರದಿಂದ ಕನಕರ ತತ್ವ ಪಾಲನೆ

| Published : Nov 19 2024, 12:46 AM IST

ಸಾರಾಂಶ

ಸಮಾಜ ಅಭಿವೃದ್ಧಿಗೆ ಜಾತಿ, ಪಂಗಡಗಳೇ ಅಡ್ಡಿ ಎಂದು ಸಾರಿದ ಕನಕ ದಾಸರ ಆದರ್ಶಗಳನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಸುತ್ತಿದ್ದಾರೆ. ಏಕೆಂದರೆ ತಾಲೂಕಿನ ಬಹುತೇಕ ಕುಟುಂಬಗಳಿಗೆ ಗ್ಯಾರಂಟಿ ಯೋಜನೆ ಫಲ ಲಭಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಲಾಗುವುದು.

ಕನ್ನಡ ಪ್ರಭವಾರ್ತೆ,ಮಾಲೂರು

ಕನಕ ದಾಸರ ತತ್ವಗಳನ್ನು ಪಾಲಿಸುತ್ತಿರುವುದರಿಂದಲೇ ಕಾಂಗ್ರೆಸ್‌ ಸರ್ಕಾರ ರಾಜ್ಯದ ಜನತೆಗೆ ಪಂಚ ಗ್ಯಾರಂಟಿ ಮೂಲಕ ಸಾಮಾಜಿಕ ನ್ಯಾಯ ನೀಡಲು ಸಾಧ್ಯವಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಅವರು ಇಲ್ಲಿನ ತಹಸೀಲ್ದಾರ್‌ ಕಚೇರಿಯಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜ ಅಭಿವೃದ್ಧಿಗೆ ಜಾತಿ, ಪಂಗಡಗಳೇ ಅಡ್ಡಿ ಎಂದು ಸಾರಿದ ಕನಕ ದಾಸರ ಆದರ್ಶಗಳನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಸುತ್ತಿದ್ದಾರೆ ಎಂದರು.

ಪುತ್ಥಳಿ ಉದ್ಘಾಟನೆಗೆ ಸಿಎಂ

ಮುಂದಿನ ಎರಡು ತಿಂಗಳಲ್ಲಿ ಮುಖ್ಯಮಂತ್ರಿಗಳು ಮಾಲೂರಿಗೆ ಬರಲಿದ್ದು, ಅಂದು ಅವರೇ ತಾಲೂಕಿಗೆ ನೀಡಿರುವ 2.5 ಕೋಟಿ ರು.ಗಳ ಅನುದಾನಗಳ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಅಂದೇ ಮುಖ್ಯಮಂತ್ರಿ ಕೈಯಿಂದ ಪಟ್ಟಣದಲ್ಲಿ ನಿರ್ಮಿಸಲಾಗಿರುವ ಶ್ರೀ ಕನಕದಾಸರ ಪ್ರತಿಮೆ, ಶ್ರೀ ವಾಲ್ಮೀಕಿ ಮಹರ್ಷಿ ಪ್ರತಿಮೆ ಹಾಗೂ ವಾಲ್ಮಕೀ ಭವನವನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದರು.

ಸಿಎಂಗೆ ಅಭಿನಂದನೆ ಕಾರ್ಯಕ್ರಮ

ಅಂದಿನ ಸಮಾರಂಭದಲ್ಲಿ 25 ಸಾವಿರಕ್ಕೂ ಹೆಚ್ಚು ಜನ ಸ್ವಯಂಪ್ರೇರಿತರಾಗಿ ಭಾಗವಹಿಸಲಿದ್ದಾರೆ. ಏಕೆಂದರೆ ತಾಲೂಕಿನ ಬಹುತೇಕ ಕುಟುಂಬಗಳಿಗೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಫಲ ಲಭಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಲು ತಾಲೂಕಿನ ಜನತೆ ಬರಲಿದ್ದಾರೆ ಎಂದರು.

ತಹಸೀಲ್ದಾರ್‌ ಕೆ.ರಮೇಶ್‌ ,ಬಿಇಓ ಚಂದ್ರಕಲಾ , ಜೆಡಿಎಸ್‌ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ,ಪುರಸಭೆ ಅಧ್ಯಕ್ಷೆ ಕೋಮಲ ನಾರಾಯಣ್‌,ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಿನಾರಾಯಣ್‌ ,ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಧುಸೂಧನ್‌,ವಿಜಯನಾರಸಿಂಹ ,ಅಂಜನಿ ಸೋಮಣ್ಣ,ಹನುಮಂತಯ್ಯ ಇನ್ನಿತರರು ಇದ್ದರು.