ಸಾರಾಂಶ
ಕೋಲಾರ ಭಾಗದಲ್ಲಿಯೂ ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಲು ರೈತರು ಮುಂದಾಗಬೇಕು. ಸಿರಿಧಾನ್ಯಗಳಿಂದ ತಯಾರಾಗುವ ಪಾಯಸ ಲಡ್ಡು, ರಾಗಿ ಮುದ್ದೆ, ಚಕ್ಕುಲಿ, ಶಾವಿಗೆ ಇನ್ನಿತರ ಖಾದ್ಯಗಳನ್ನು ಎಲ್ಲರು ಬಳಸುವ ಮೂಲಕ ಸ್ವಾಸ್ಥ್ಯ ಹಾಗೂ ಆರೋಗ್ಯಕರ ಸಮಾಜ ಸೃಷ್ಟಿಸಬೇಕು.
ಕನ್ನಡಪ್ರಭ ವಾರ್ತೆ ಕೋಲಾರ ಸಿರಿಧಾನ್ಯಗಳಾದ ರಾಗಿ, ಊರ್ಲು, ಹಾರಕ, ಬರಗು, ಆರ್ಕ ಮುಂತಾದ ಸಾವಯವ ಧಾನ್ಯಗಳ ನಿರಂತರ ಬಳಕೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಸಿರಿಧಾನ್ಯಗಳಲ್ಲಿ ಅಗ್ರಸ್ಥಾನದ ಬಳಕೆಯಲ್ಲಿರುವ ರಾಗಿಯ ಧಾನ್ಯಗಳ ಬಳಕೆಯು ಮಧುಮೇಹ ಕಾಯಿಲೆ ಗುಣಪಡಿಸಲು ಸಹಕಾರಿಯಾಗಿದೆ ಎಂದು ಎಡಿಸಿ ಮಂಗಳಾ ತಿಳಿಸಿದರು.ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆಯಿಂದ ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳ ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದಖಾದ್ಯಗಳ ಪಾಕ ಸ್ಪರ್ಧೆಯನ್ನು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು ಸಿರಿಧಾನ್ಯ ಖಾದ್ಯ ಪ್ರದರ್ಶನ
ಕಾರ್ಯಕ್ರಮದಲ್ಲಿ ವಿಶೇಷ ಖಾದ್ಯಗಳೊಂದಿಗೆ ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು, ವಿವಿಧ ಸಾವಯವ ಸಿರಿಧಾನ್ಯಗಳಿಂದ ತಯಾರಿಸಲಾದ ಖಾದ್ಯಗಳು ಮನಸೆಳೆದವು. ಅವುಗಳಲ್ಲಿ ನವಣೆಪಲಾವ್, ಚಿನ್ನಕುರುಳಿ, ಮಾಲ್ಟ್, ರಾಗಿ ಒತ್ತುಶಾವಿಗೆ, ರಾಗಿ ಹಲ್ವ, ಆರ್ಕದ ಅಕ್ಕಿ ಉಂಡೆ, ಸಿರಿಧಾನ್ಯ ಉಂಡೆ, ಒತ್ತುಶಾವಿಗೆ ಕಾಯಿರಸ ಸೇರಿದಂತೆ ಸಿರಿಧಾನ್ಯಗಳಿಂದ ವಿವಿಧ ಖಾದ್ಯಗಳನ್ನು ತಯಾರಿಸಿಕೊಂಡು ಸ್ಪರ್ದೆಯಲ್ಲಿ ಪ್ರದರ್ಶನಕ್ಕಿಡಲಾಗಿತ್ತು.ಜಿಪಂ ಉಪಕಾರ್ಯದರ್ಶಿ ಶಿವಕುಮಾರವರು ಮಾತನಾಡಿ, ಕೋಲಾರ ಭಾಗದಲ್ಲಿಯೂ ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಲು ರೈತರು ಮುಂದಾಗಬೇಕು. ಸಿರಿಧಾನ್ಯಗಳಿಂದ ತಯಾರಾಗುವ ಪಾಯಸ ಲಡ್ಡು, ರಾಗಿ ಮುದ್ದೆ, ಚಕ್ಕುಲಿ, ಶಾವಿಗೆ ಇನ್ನಿತರ ಖಾದ್ಯಗಳನ್ನು ಎಲ್ಲರು ಬಳಸುವ ಮೂಲಕ ಸ್ವಾಸ್ಥ್ಯ ಹಾಗೂ ಆರೋಗ್ಯಕರ ಸಮಾಜ ಸೃಷ್ಟಿಸಬೇಕು ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕುಮಾರಸ್ವಾಮಿ, ರೇಷ್ಮೆ ಉಪನಿರ್ದೇಶಕ ಶ್ರೀನಿವಾಸ್, ಕೃಷಿ ಇಲಾಖೆಯ ಉಪನಿರ್ದೇಶಕಿ ಭವ್ಯರಾಣಿ, ಉಪ ನಿರ್ದೇಶಕ ನಾಗರಾಜ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿ ಶಿವಾನಂದ ಹೊಂಗಲ್ ಇದ್ದರು.